Advertisement

ವ್ಹಾವ್‌ ಎಂಬಂತಿದೆ ಬರೋಡಾದ ವಡೋದರ

09:59 PM May 22, 2019 | Team Udayavani |

ಗುಜರಾತಿನ ಐತಿಹಾಸಿಕ ನಗರಗಳಲ್ಲಿ ಒಂದಾಗಿರುವ ಬರೋಡಾದ ವಡೋದರ ಪ್ರೇಕ್ಷಣೀಯ ತಾಣಗಳಲ್ಲಿ ಒಂದು. ಅನೇಕ ಚಾರಿತ್ರಿಕ ಸ್ಥಳಗಳು ಇಲ್ಲಿದ್ದರೂ ಸರಕಾರದ ನಿರ್ಲಕ್ಷ್ಯದಿಂದಾಗಿ ಅನಾಥವಾದಂತಿದ್ದು, ಪ್ರವಾಸಿಗರ ಮನಕಲಕುವಂತಿದೆ.

Advertisement

ಗುಜರಾತಿನಲ್ಲಿರುವ ಬರೋಡಾದ ವಡೋದರದ ಬಗ್ಗೆ ಸಾಕಷ್ಟು ಕೇಳಿ ತಿಳಿದಿದ್ದರಿಂದ ಇಲ್ಲಿಗೊಮ್ಮೆ ಭೇಟಿ ನೀಡುವ ಅವಕಾಶ ಸಿಕ್ಕಾಗ ಖುಷಿಯಿಂದ ಹೊರಟು ನಿಂತೆ.

ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಇಲ್ಲಿ ವಾವ್‌ ಎಂದು ಕರೆಯಲ್ಪಡುವ ಮೆಟ್ಟಿಲು ಬಾವಿಗಳು ಆಕರ್ಷಣೀಯವಾಗಿವೆ. ಬರೋಡ ನಗರದ ಸುತ್ತಮುತ್ತಲೂ ಇಂತಹ ಸುಮಾರು 14 ವಾವ್‌ ಗಳು ಕಂಡು ಬರುತ್ತವೆ. ಮುಖ್ಯವಾಗಿ ಖಂಡೇರಾವ್‌ ವಾವ್‌, ಕೊಯಾಲಿ ವಾವ್‌, ತಾಂಡಲ್ಜ ವಾವ್‌, ನಾವ್ಲಕೀ ವಾವ್‌, ಹೇತಾಂಪುರ ವಾವ್‌, ಕೆಳಾಂಪುರ ವಾವ್‌, ಸಯಾಜಿ ವಾವ್‌, ಸೇವಾಸೀ ವಾವ್‌, ಸಪ್ತಮುಖೀ ವಾವ್‌, ದುಮದ್‌ ಚೌಕಿxà ವಾವ್‌, ಅಸೋಜ್‌ ವಾವ್‌, ಗೌರಾÌ ವಾವ್‌, ಕಡಕ್‌ ಬಜಾರ್‌ ವಾವ್‌ ಇತ್ಯಾದಿ.

ಗುರ್ಜರ್‌ ಆಳಿಕೆಯನ್ನು ಸಾರುವ ಏಕೈಕ ಐತಿಹಾಸಿಕ ತಾಣವೆಂದು ಗುರುತಿಸಲ್ಪಡುವ ನವಾಲಾಕಿಯ ವಾವ್‌, ಮೆಟ್ಟಿಲು ಬಾವಿಯನ್ನು 15ನೇ ಶತಮಾನದಲ್ಲಿ ಸುಲ್ತಾನ್‌ ಮುಜಾಪುರ್‌ ಷಾನ ಕಾಲದಲ್ಲಿ ರಚಿಸಲ್ಟಟ್ಟಿದೆ ಎಂಬುದು ಇಲ್ಲಿ ರುವ ಶಾಸನದಿಂದ ತಿಳಿದುಬರುತ್ತದೆ. ಇದರಲ್ಲಿ ಆಗಿನ ಕಾಲದ ಇನ್ನಷ್ಟು ಮಾಹಿತಿಗಳಿದ್ದು, ಗುರ್ಜರ್‌ ಸಾಮ್ರಾಜ್ಯದ ಸೂರ್ಯರಾಜ್‌ ಕಲಚೂರಿ ಇದನ್ನು ನಿರ್ಮಿಸಿದ್ದನು. ಒಂಬತ್ತು ಲಕ್ಷ ನಾಣ್ಯಗಳನ್ನು ಇದಕ್ಕಾಗಿ ವಿನಿಯೋಗಿಸಿದ್ದರಿಂದ ನವಲಾಕಿ ವಾವ್‌ ಎಂದು ಹೆಸರಾಯಿತು ಎಂಬ ಉಲ್ಲೇಖವಿದೆ. ಇದು ಲಕ್ಷ್ಮೀ ವಿಲಾಸ್‌ ಅರಮನೆಯ ಸರಹದ್ದಿನಲ್ಲಿದ್ದು, ಮಹಾರಾಜ ಸಯ್ನಾಜಿರಾವ್‌ ಇದನ್ನು ಅಭಿವೃದ್ಧಿಗೊಳಿಸಿದ್ದ. ಮೊದಲು ಅರಮನೆಗೆ ಇದರ ನೀರನ್ನು ಬಳಸಲಾಗುತ್ತಿತ್ತು ಎಂಬ ಉಲ್ಲೇ ಖವೂ ಇದೆ.

ಸೇವಾಸಿ ವಾವ್‌ ಸುಮಾರು 500 ವರ್ಷಗಳಷ್ಟು ಪ್ರಾಚೀನ ಮತ್ತು ಅತ್ಯಂತ ಸುಂದರವಾದ ಮೆಟ್ಟಿಲು ಬಾವಿ. ಸುಲ್ತಾನ್‌ ಮಹಮೂದ್‌ ಬೇಗಡನ ಕಾಲದಲ್ಲಿ ನಿರ್ಮಿಸಲ್ಪಟ್ಟಿತು. ಆ ಕಾಲದ ಸಂತ ವಿದ್ಯಾಧರನ ಸ್ಮರಣಾರ್ಥವಾಗಿ ಇದನ್ನು ವಿದ್ಯಾಧರ್‌ ವಾವ್‌ ಎಂದು ಹೆಸರಿಸಲಾಗಿದೆ.ನೆಲ ಮಟ್ಟದಿಂದ ಕೆಳಗೆ ಏಳು ಅಂತಸ್ತುಗಳನ್ನು ಹೊಂದಿದ್ದು,ಕೆತ್ತನೆಯುಳ್ಳ ನೂರಾರು ಆಕರ್ಷಣೀಯ ಕಂಬಗಳು ಪ್ರತಿ ಅಂತಸ್ತಿನಲ್ಲೂ ಇದೆ. ಮಳೆ ನೀರಿನ ಸಂಗ್ರಹಕ್ಕಾಗಿ ಈ ಬಾವಿಯನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ.

Advertisement

13ನೇ ಶತಮಾನದ ಸಪ್ತಮುಖೀ ವಾವ್‌ ವಡೋದರದ ದಾಭೋಯ್‌ಲ್ಲಿದೆ. 200 ವರ್ಷ ಹಳೆಯ ತಾಂಡಲ್ಜಾ ಮೆಟ್ಟಿಲು ಬಾವಿಯ ನೀರನ್ನು ಇತ್ತೀಚೆಗಿನವರೆಗೂ ಬಳಸಲಾಗು ತ್ತಿತ್ತು ಎನ್ನುತ್ತಾರೆ ಸ್ಥಳೀಯರು. ಆದರೆ ಈಗ ಮಾತ್ರ ಇದು ತ್ಯಾಜ್ಯ ಸಂಗ್ರಹ ತಾಣದಂತಾಗಿದೆ. ಇಲ್ಲಿನ ಸ್ತಂಭಗಳಲ್ಲಿ ಕೆತ್ತಲಾಗಿರುವ ಶಿಲ್ಪ,ಶಾಸನಗಳು ಸರಕಾರದ ನಿರ್ಲಕ್ಷ್ಯಕ್ಕೆ ಒಳ ಗಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಪುರಾತನ ಕಾಲದ ಮೆಟ್ಟಿಲು ಬಾವಿಯ ಅದ್ಭುತ ವಿನ್ಯಾಸ ಕಂಡು ಅಚ್ಚರಿಯಾಗುವುದು ಸಹಜ. ಒಟ್ಟಿನಲ್ಲಿ ಐತಿಹಾಸಿಕ ಮಹತ್ವ ವನ್ನು ಸಾರುವ ಇಂಥ ಸ್ಥಳಕ್ಕೆ ಸರಿಯಾದ ರಕ್ಷಣೆ ಸಿಗದೇ ಇರು ವುದನ್ನು ಕಂಡು ಬೇಸರದ ಮನಸ್ಸಿನಿಂದಲೇ ಅಲ್ಲಿಂದ ಊರಿ ನತ್ತ ಮರಳಬೇಕಾಯಿತು.

ರೂಟ್‌ ಮ್ಯಾಪ್‌
-ಮಂಗಳೂರಿನಿಂದ ವಡೋದರಕ್ಕೆ 1,293 ಕಿ.ಮೀ. ದೂರ
-  ರೈಲು,ಬಸ್‌,ವಿಮಾನ ಸೌಲಭ್ಯವಿದೆ.
- ಪ್ರವಾಸಿ ತಾಣವಾಗಿರುವುದರಿಂದ ಮೊದಲೇ ಬುಕ್ಕಿಂಗ್‌ ಮಾಡಿದರೆ ಊಟ, ವಸತಿ ಸಮಸ್ಯೆಯಿಲ್ಲ.
-  ಹತ್ತಿರದಲ್ಲೇ ಇದೆ ಲಕ್ಷ್ಮೀ ವಿಲಾಸ ಅರಮನೆ.
–  ಬರೋಡ ಮ್ಯೂಸಿಯಂ, ಸಯ್ನಾಜಿ ಭಾಗ್‌ಗೂ ಭೇಟಿ ನೀಡಬಹುದು.

-ಜಲಂಚಾರು ರಘುಪತಿ ತಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next