Advertisement

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ

04:06 PM May 12, 2019 | Naveen |

ತಾಂಬಾ: ಹಾಲುಮತ ಸಮಾಜದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ತಿಳಿಸಿದಾಗ ಮಾತ್ರ ನಿಮ್ಮ ಮಕ್ಕಳು ಇನ್ನುಳಿದ ಮಕ್ಕಳಂತೆ ಮುಂದೆ ಬರಲು ಸಾದ್ಯವಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

Advertisement

ವಾಡೆ ಗ್ರಾಮದ ಮಹಾಲಕ್ಷ್ಮೀ ದೇವಾಸ್ಧಾನ ಉದ್ಘಾಟನೆ ಹಾಗೂ ಕಳಸಾರೋಹಣ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ನನ್ನ ರಾಜಕಾರಣದಲ್ಲಿ ಹಾಲುಮತ ಸಮಾಜ ಕೈ ಹಿಡಿದು ಎತ್ತಿದೆ. ಮುಂದೆಯೂ ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ ಎಂದರು.

ಶಿರಶ್ಯಾಡ ಮಠದ ಮುರುಘೇಂದ್ರ ಶಿವಾರ್ಚಾರು ಮಾತನಾಡಿ, ಎಲ್ಲರ ಅಂತರಂಗದಲ್ಲೂ ಪರಮಾತ್ಮನಿದ್ದಾನೆ. ಆದರೆ ಜನರು ತಮ್ಮಲ್ಲಿಯೆ ಹುದಗಿರುವ ಆತ್ಮ ಪರಮಾತ್ಮನನ್ನು ಬಿಟ್ಟು ಬೇರೆ ಕಡೆ ದೇವರನ್ನು ಹುಡುಕುವ ಹುಚ್ಚು ಸಾಹಸ ಮಾಡುತ್ತಿದ್ದಾರೆ. ದೇವರು ಹೊರಗಡೆ ಇಲ್ಲ, ಎಲ್ಲರ ಒಳಗಡೆ ಇರುವ ದೇವರನ್ನು ಜ್ಞಾನಿಸಿ ಜಪಿಸಬೇಕು, ಅಂದಾಗ ಬದುಕು ಸಾರ್ಧಕವಾಗುತ್ತದೆ ಎಂದರು.

ಪ್ರತ್ತಿಯೊಬ್ಬರು ಬದುಕು ಪಾವನಗೊಳಿಸಿಕೊಳ್ಳಲು ಇಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂಥನಾಳದ ವೃಷಭಲಿಂಗ ಮಹಾ ಶಿವಯೋಗಿಗಳ ಆಶೀರ್ವಚನ ಕೇಳಿ ಮನದ ಮೈಲಿಗೆ ತೊಳೆದುಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ವೃಷಭಲಿಂಗ ಮಾಹಾಶಿವಯೋಗಿಗಳು ಆಶೀರ್ವಚನ ನೀಡಿ, ಮನುಷ್ಯ ತಾನು ಬದುಕಿ ಇತರರನ್ನು ಬದುಕಿಸುವುದೆ ನಿಜವಾದ ಜೀವನ. ಬದುಕಿನ ಉದ್ದಕ್ಕೂ ಸತ್ಕಾರ ಮಾನವೀಯತೆ ಬಿತ್ತಬೇಕು. ಬಂಥನಾಳದ ಸಂಗನ ಬಸವ ಮಹಾಶಿವಯೋಗಿಗಳು ಕಂಡ ಕನಸು ನನಸಾಗಬೇಕಾದರೆ ಸಮಾಜದ ಕಟ್ಟ ಕಡೆ ವ್ಯಕ್ತಿಯೂ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.

Advertisement

ಹಾಲುಮತ ಸಮಾಜ ಯುವ ನಾಯಕ ಮೋಹನ ಮೇಟಿ ಮಾತನಾಡಿ, ದಾನ ಧರ್ಮ ಪರೋಪಕಾರ ನಮ್ಮ ಉಸಿರಾಗಬೇಕು. ಮಠ ಮಾನ್ಯಗಳು ಮಾಡುತ್ತಿರುವ ಕಾರ್ಯಗಳು ನಿಜಕ್ಕೂ ಶ್ಲಾಘನಿಯ ಎಂದರು.

ಮಕಣಾಪುರದ ಸೋಮೇಶ್ವರ ಮಾಹಾಸ್ವಾಮಿಗಳು, ಸರಸ್ವತಿ ಈಟಿ ಮಾತನಾಡಿದರು. ಜಿಪಂ ಸದಸ್ಯ ಸುಭಾಷ್‌ ಕಲ್ಲೂರ, ಗ್ರಾಪಂ ಅಧ್ಯಕ್ಷ ಗುರುಸಂಗಪ್ಪ ಬಾಗಲಕೋಟ, ಅಣ್ಣಾರಾಯ ಅವಟಿ, ಷಣ್ಮಖ ಪೂಜಾರಿ, ಹಿರಗಪ್ಪ ನಾಯ್ಕೋಡಿ, ಬಸವರಾಜ ಭೈರೋಡಗಿ, ಅಯ್ಯಪ್ಪ ಅಂಕಲಗಿ, ಕುಲಪ್ಪ ಭಜಂತ್ರಿ, ರಮಾನಂದ ಕುಲಕರ್ಣಿ, ರಾಜುಗೌಡ ಪಾಟೀಲ, ರವಿ ಹತರಕಿ ಸೇರಿದಂತೆ ಇತರರು ಇದ್ದರು.

ಸತೀಶ ಅಡವಿ ಸ್ವಾಗತಿಸಿದರು. ಕೆ.ಎನ್‌. ಪಾಟೀಲ ನಿರೂಪಿಸಿದರು. ಭಾಸ್ಕರ್‌ ದೊಡಮನಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next