Advertisement

ವಾಡಿ ಪುರಸಭೆ- ಮಹಾಗಾಂವ ತಾಪಂ-ವಿವಿಧ ಗ್ರಾಪಂ ಉಪ ಚುನಾವಣೆ: ಮತದಾನ

10:08 AM Dec 18, 2017 | Team Udayavani |

ವಾಡಿ: ಪಟ್ಟಣದ ಪುರಸಭೆ ವಾರ್ಡ್‌-1ರ ಬಸವನಕಣಿ ಬಡಾವಣೆಗೆ ರವಿವಾರ ನಡೆದ ಉಪಚುನಾವಣೆಯಲ್ಲಿ ಶೇ.74ರಷ್ಟು ಮತದಾನವಾಗಿದೆ. ಬಸವನ ಕಣಿ ಬಡಾವಣೆಯಲ್ಲಿ 709 ಪುರುಷರು ಹಾಗೂ 667 ಮಹಿಳೆಯರು ಸೇರಿದಂತೆ ಒಟ್ಟು 1376
ಮತದಾರರ ಸಂಖ್ಯೆಯಿದ್ದು, 511 ಪುರುಷರು ಹಾಗೂ 510 ಮಹಿಳಾ ಮತದಾರರು ಸಮಾನ ಅಂತರದಲ್ಲಿ ಹಕ್ಕು ಚಲಾಯಿಸಿದ್ದಾರೆ ಎಂದು ಬೂತ್‌ ಚುನಾವಣಾಧಿಕಾರಿ ಕಾಶೀರಾಯ ಕಲಾಲ ತಿಳಿಸಿದ್ದಾರೆ. ಈ ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಒಬ್ಬರದ್ದಾದರೆ, ಭಾವಚಿತ್ರ ಮತ್ತೂಬ್ಬರದ್ದಾಗಿ ಮುದ್ರಣವಾಗಿದ್ದ ಕಾರಣ ಸುಮಾರು ಹತ್ತಕ್ಕೂ ಹೆಚ್ಚು ಮತದಾರರು ಮತದಾನದ ಹಕ್ಕಿನಿಂದ ವಂಚಿತರಾದರು ಎಂದು ಮತಗಟ್ಟೆಯಲ್ಲಿದ್ದ ಮತದಾರ ವೀಕ್ಷಕರು ತಿಳಿಸಿದರು.

Advertisement

ಕಾಂಗ್ರೆಸ್‌ ಅಭ್ಯರ್ಥಿ ಮರಗಪ್ಪ ಕಲ್‌ಕುಟಗಿ, ಬಿಜೆಪಿ ಅಭ್ಯರ್ಥಿ ಕಿಶನ ಜಾಧವ ಹಾಗೂ ಪಕ್ಷೇತರ ಅಭ್ಯರ್ಥಿ ಮೋತಿರಾಮ ರಾಠೊಡ ಅವರು ಬೆಳಗ್ಗೆಯಿಂದ ಮತದಾರರನ್ನು ಕರೆದುಕೊಂಡು ಬರುವುದರಲ್ಲಿ ನಿರತರಾಗಿದ್ದು ಕಂಡು ಬಂದಿತು. ಮಾಜಿ ಶಾಸಕ ಬಿಜೆಪಿಯ ವಾಲ್ಮೀಕಿ ನಾಯಕ, ಪಕ್ಷದ ಕಾರ್ಯದರ್ಶಿ ವೀರಣ್ಣ ಯಾರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯ್ಯದ್‌ ಮಹೆಮೂದ್‌ ಸಾಹೇಬ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಮತಗಟ್ಟೆ ಸುತ್ತಲ ಪ್ರದೇಶದಲ್ಲಿ ಜಮಾಯಿಸಿದ್ದರು. ಸಿಪಿಐ ಶಂಕರಗೌಡ ಪಾಟೀಲ, ಚಿತ್ತಾಪುರ ಪಿಎಸ್‌ಐ ಜಗದೇವಪ್ಪ ಪಾಳಾ, ವಾಡಿ ಠಾಣೆ ಪ್ರಭಾರಿ ಪಿಎಸ್‌ಐ ಬಾನುದಾಸ ಮತಗಟ್ಟೆಗೆ ಬಿಗಿ ಬಂದೋಬಸ್ತ್ ಒದಗಿಸಿದ್ದರು. ಡಿ. 20ರಂದು ಬೆಳಗ್ಗೆ ಚಿತ್ತಾಪುರದಲ್ಲಿ ಮತ ಎಣಿಕೆ ನಡೆಯಲಿದೆ.

ಮಹಾಗಾಂವ ತಾಪಂ
ಕಲಬುರಗಿ: ಕಲಬುರಗಿ ತಾಪಂನ ಮಹಾಗಾಂವ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಶೇ. 56.41ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಆರ್‌. ವೆಂಕಟೇಶಕುಮಾರ ತಿಳಿಸಿದ್ದಾರೆ. ಮಹಾಗಾಂವ ತಾಪಂ ಕ್ಷೇತ್ರದ 35-ಮಹಾಗಾಂವದಲ್ಲಿದ್ದ 838 ಮತದಾರರಲ್ಲಿ 453 ಜನರು ಮತ ಚಲಾಯಿಸಿದ್ದು, ಶೇ.54.06ರಷ್ಟು ಮತದಾನವಾಗಿದೆ.

36-ಮಹಾಗಾಂವದಲ್ಲಿ 686 ಮತದಾರರಲ್ಲಿ 360 ಜನರು ಮತ ಚಲಾಯಿಸಿದ್ದು, ಶೇ. 52.48ರಷ್ಟು ಮತದಾನವಾಗಿದೆ. 37-ಮಹಾಗಾಂವದಲ್ಲಿ 724 ಮತದಾರರಲ್ಲಿ 415 ಜನರು ಮತ ಚಲಾಯಿಸಿದ್ದು, ಶೇ. 57.32ರಷ್ಟು ಮತದಾನವಾಗಿದೆ. 38-ಮಹಾಗಾಂವದಲ್ಲಿ 913 ಮತದಾರರಲ್ಲಿ 482 ಜನರು ಮತ ಚಲಾಯಿಸಿದ್ದು, ಶೇ. 52.79ರಷ್ಟು ಮತದಾನವಾಗಿದೆ. 39-ಮಹಾಗಾಂವದಲ್ಲಿ 741 ಮತದಾರರಲ್ಲಿ 485 ಜನರು ಮತ ಚಲಾಯಿಸಿದ್ದು, ಶೇ. 65.45ರಷ್ಟು ಮತದಾನವಾಗಿದೆ. 40-ಮಹಾಗಾಂವ ತಾಂಡಾದಲ್ಲಿ 273 ಮತದಾರರಲ್ಲಿ 178 ಜನರು ಮತ ಚಲಾಯಿಸಿದ್ದು, ಶೇ. 65.20ರಷ್ಟು ಮತದಾನವಾಗಿದೆ. 41-ಮಹಾಗಾಂವ
ವಾಡಿ ಯಲ್ಲಿ 769 ಮತದಾರರಲ್ಲಿ 418 ಜನರು ಮತ ಚಲಾಯಿಸಿದ್ದು, ಶೇ. 54.36ರಷ್ಟು ಮತದಾನವಾಗಿದೆ. 42-ಮಹಾಗಾಂವ ಕ್ರಾಸ್‌ದಲ್ಲಿ 1269 ಮತದಾರರಲ್ಲಿ 631 ಜನರು ಮತ ಚಲಾಯಿಸಿದ್ದು, ಶೇ. 49.72ರಷ್ಟು ಮತದಾನವಾಗಿದೆ. 43-ಧಮ್ಮೂರ ಆರ್‌ಸಿಯಲ್ಲಿ 908 ಮತದಾರರಲ್ಲಿ 426 ಜನರು ಮತ ಚಲಾಯಿಸಿದ್ದು, ಶೇ.46.92ರಷ್ಟು ಮತದಾನವಾಗಿದೆ.

44-ಚಂದ್ರನಗರದಲ್ಲಿ 625 ಮತದಾರರಲ್ಲಿ 403 ಜನರು ಮತ ಚಲಾಯಿಸಿದ್ದು, ಶೇ. 64.48ರಷ್ಟು ಮತದಾನವಾಗಿದೆ. 45-ಬೆಳಕೋಟಾದಲ್ಲಿ 446 ಮತದಾರರಲ್ಲಿ 370 ಜನರು ಮತ ಚಲಾಯಿಸಿದ್ದು, ಶೇ. 82.96ರಷ್ಟು ಮತದಾನವಾಗಿದೆ ಎಂದು ಅವರು
ತಿಳಿಸಿದ್ದಾರೆ.

Advertisement

ವಿವಿಧ ಗ್ರಾಪಂ
ಕಲಬುರಗಿ: ಜಿಲ್ಲೆಯ ವಿವಿಧ ಗ್ರಾಪಂಗಳಿಗೆ ರವಿವಾರ ನಡೆದ ಉಪಚುನಾವಣೆಯಲ್ಲಿ ಶಾಂತಿಯುತ ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ತಿಳಿಸಿದ್ದಾರೆ. ಆಳಂದ ತಾಲೂಕು ಕಡಗಂಚಿ ಗ್ರಾಪಂಗೆ
257-ಕಡಗಂಚಿ ಮತಗಟ್ಟೆಯಲ್ಲಿ 781 ಮತದಾರರಲ್ಲಿ 561 ಜನರು ಮತ ಚಲಾಯಿಸುವ ಮೂಲಕ ಶೇ.71.83ರಷ್ಟು ಮತದಾನವಾಗಿದೆ. ಜೇವರ್ಗಿ ತಾಲೂಕು ಕೋಳಕೂರ ಗ್ರಾಪಂಗೆ 21-ಕೋಳಕೂರ ಮತಗಟ್ಟೆಯಲ್ಲಿ 938 ಮತದಾರರಲ್ಲಿ
673 ಜನರು ಮತ ಚಲಾಯಿಸುವ ಮೂಲಕ ಶೇ. 71.75ರಷ್ಟು ಮತದಾನವಾಗಿದೆ. ಸೇಡಂ ತಾಲೂಕು ಮಳಖೇಡ ಗ್ರಾಪಂಗೆ
4-ಮಳಖೇಡ ಮತಗಟ್ಟೆಯಲ್ಲಿ 722 ಮತದಾರರಲ್ಲಿ 502 ಜನರು ಮತ ಚಲಾಯಿಸುವ ಮೂಲಕ ಶೇ. 69.53ರಷ್ಟು ಮತದಾನವಾಗಿದೆ. ಸೇಡಂ ತಾಲೂಕು ಮಳಖೇಡ ಗ್ರಾಪಂಗೆ 4ಎ-ಮಳಖೇಡ ಮತಗಟ್ಟೆಯಲ್ಲಿ 784 ಮತದಾರರಲ್ಲಿ
532 ಜನರು ಮತ ಚಲಾಯಿಸುವ ಮೂಲಕ ಶೇ. 67.86ರಷ್ಟು ಮತದಾನವಾಗಿದೆ.

ಚಿತ್ತಾಪುರ ತಾಲೂಕು ನಾಲವಾರ ಗ್ರಾಪಂಗೆ 211-ನಾಲವಾರ ಮತಗಟ್ಟೆಯಲ್ಲಿ 1361 ಮತದಾರರಲ್ಲಿ 705 ಜನರು ಮತ ಚಲಾಯಿಸುವ ಮೂಲಕ ಶೇ. 51.80ರಷ್ಟು ಮತದಾನವಾಗಿದೆ. ಚಿತ್ತಾಪುರ ತಾಲೂಕು ನಾಲವಾರ ಗ್ರಾಪಂಗೆ 213-ನಾಲವಾರ ಮತಗಟ್ಟೆಯಲ್ಲಿ 1289 ಮತದಾರರಲ್ಲಿ 810 ಜನರು ಮತ ಚಲಾಯಿಸುವ ಮೂಲಕ ಶೇ. 62.84ರಷ್ಟು ಮತದಾನವಾಗಿದೆ.

ಚಿಂಚೋಳಿ ತಾಲೂಕು ಮೋಘಾ ಗ್ರಾಪಂಗೆ 157-ಮೋಘಾ ಮತಗಟ್ಟೆಯಲ್ಲಿ 680 ಮತದಾರರಲ್ಲಿ 450 ಜನರು ಮತ ಚಲಾಯಿಸುವ ಮೂಲಕ ಶೇ. 64.58ರಷ್ಟು ಮತದಾನವಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next