Advertisement

ರಾಜ ವೈಭವದ ಕೋಟೆಗೆ ಶ್ಮಶಾನದ ಕಿರಿಕ್‌ :  ವಡ್ಡರ್ಸೆಯ ಕಥೆ-ವ್ಯಥೆ

03:21 PM Mar 16, 2022 | Team Udayavani |

ಕೋಟ: ವಿಜಯ ನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿ ರಾಜ ವೈಭವದಿಂದ ಮೆರೆದ ಊರು ಕೋಟ ಹೋಬಳಿಯ ವಡ್ಡರ್ಸೆ. ಬಾರಕೂರು ಸಂಸ್ಥಾನದ ಅಧೀನ ರಾಜ ವಡ್ಡರಸ ಈ ಊರನ್ನು ಚರಿತ್ರೆಯ ಪುಟದಲ್ಲಿ ದಾಖಲಿಸುವಂತೆ ಬದಲಾಯಿಸಿದ್ದ. ಹೀಗಾಗಿ ವಡ್ಡರಸನಾಳಿದ ಮಣ್ಣು ವಡ್ಡರಸೆಯಾಗಿ ಕಾಲಕ್ರಮೇಣ ವಡ್ಡರ್ಸೆಯಾಯಿತು.

Advertisement

1-2ನೇ ಶತಮಾನದ ಮಧ್ಯಭಾಗದಲ್ಲಿ ಈ ಪ್ರದೇಶ ಅರಮನೆ, ಕೋಟೆ, ಕೊತ್ತಲಗಳಿಂದ ಮೆರೆದಾಡಿತ್ತು. ಈಗ ಅದೆಲ್ಲ ಮರೆಯಾಗಿದೆ. ಪ್ರಸ್ತುತ ಗತ ವೈಭವಕ್ಕೆ ಸಾಕ್ಷಿಯಾಗಿ ಉಳಿದಿರುವುದು ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಕೋಟೆ ಕಣಿವೆ ಮಾತ್ರ. ಐತಿಹಾಸಿಕ ಸ್ಮಾರಕವಾಗಿ ಉಳಿಯಬೇಕಿದ್ದ ವಡ್ಡರ್ಸೆ ಕೋಟೆಯಲ್ಲಿ ಇದೀಗ ಶ್ಮಶಾನ ನಿರ್ಮಿಸಲು ಸ್ಥಳೀಯಾಡಳಿತ ತಯಾರಿ ನಡೆಸುತ್ತಿದೆ. ಈ ಬಗ್ಗೆ ಸ್ಥಳೀಯರು ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸರಕಾರಿ ಜಾಗಗಳು ಪರಭಾರೆಯಾಗಬಾರದು ಎನ್ನುವ ದೃಷ್ಟಿಯಲ್ಲಿ ಅಂದಿನ ಗ್ರಾ.ಪಂ. ಅಧ್ಯಕ್ಷರಾಗಿದ್ದ ಸದಾಶಿವ ಶೆಟ್ಟಿ ಅವರು ಶಾಲೆ, ಶ್ಮಶಾನ, ಪಂಚಾಯತ್‌ ಮುಂತಾದ ಉದ್ದೇಶಕ್ಕಾಗಿ ಮೀಸಲಿರಿಸಿದ್ದರು. ಕೋಟೆ ಕಣಿವೆ ಜಾಗದ ಸರ್ವೇ ನಂಬರ್‌ 117-1ರಲ್ಲಿ 60 ಸೆಂಟ್ಸ್‌, 117-2ರಲ್ಲಿ 4.57 ಎಕ್ರೆ, 104-3ರಲ್ಲಿ 1.09 ಎಕ್ರೆ ಸ್ಥಳವನ್ನು ಶ್ಮಶಾನಕ್ಕಾಗಿ ಮೀಸಲಿರಿಸಲಾಗಿತ್ತು. ಮುಂದೆ ಇದನ್ನು ಶ್ಮಶಾನದಿಂದ ವಿರಹಿತಗೊಳಿಸಿ ಕೋಟೆ ಯಾಗಿ ಅಭಿವೃದ್ಧಿಪಡಿಸಬೇಕು ಎನ್ನುವ ಇರಾದೆ ಅಂದಿನ ಜನಪ್ರತಿನಿಧಿಗಳಿಗಿತ್ತು ಎನ್ನಲಾಗಿದೆ. ಆದರೆ ಪ್ರಸ್ತುತ ಧಾರ್ಮಿಕ ದತ್ತಿ ಇಲಾಖೆಯಿಂದ 10 ಲಕ್ಷ ರೂ. ಅನುದಾನ ಮೀಸಲಿರಿಸಿ ಸ್ಥಳೀಯಾಡಳಿತ ಶ್ಮಶಾನ ನಿರ್ಮಿಸಲು ತಯಾರಿ ನಡೆಸಿದೆ.

ಇದನ್ನೂ ಓದಿ : ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್ ಬಸ್ ಮೇಲೆ ಎಂಎನ್ ಎಸ್ ಕಾರ್ಯಕರ್ತರ ದಾಳಿ

ಇತ್ತೀಚೆಗೆ ಈ ಪ್ರದೇಶದಲ್ಲಿ ಗಿಡಗಂಟಿಗಳು ಬೆಳೆದುನಿಂತಿರುವುದಲ್ಲದೆ ಐತಿಹಾಸಿಕ ತಾಣ ಅತಿಕ್ರಮಣಕ್ಕೂ ತುತ್ತಾಗಿದೆ. ಉಳಿದ ಅಮೂಲ್ಯ ಕುರುಹುಗಳು ಈಗಾಗಲೆ ಮಣ್ಣಿನೊಳಗೆ ಹುದುಗಿಹೋಗಿವೆ. ಅರಮನೆ ಪ್ರದೇಶದಲ್ಲಿ ಬೃಹತ್‌ ಮುರಕಲ್ಲಿನ ದಿಬ್ಬ, ಮುರಕಲ್ಲುಗಳಿವೆ. ಒಟ್ಟಾರೆ ಪ್ರದೇಶವೀಗ ಕಣ್ಮರೆಯಾಗುವ ಹಂತದಲ್ಲಿದೆ. ಈ ಪ್ರದೇಶದಲ್ಲಿ ಶ್ಮಶಾನ ನಿರ್ಮಾಣ ಮಾಡುವ ಬದಲು ಜಾಗವನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಿ ವಡ್ಡರಸನಿಗೆ ಸೇರಿದ ಕೋಟೆಕಣಿವೆ ಬಗ್ಗೆ ಅಧ್ಯಯನ ಆಗಬೇಕು. ಇಲ್ಲಿ ಉತVನನ ನಡೆಸಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

Advertisement

ಪರಿಶೀಲಿಸಿ ಕ್ರಮ
ಈ ಬಗ್ಗೆ ಸ್ಥಳೀಯರು ದೂರು ನೀಡಿದ್ದಾರೆ. ಸ್ಥಳ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಶ್ಮಶಾನಕ್ಕೆ ಸೂಕ್ತವಾದ ಇತರ ಜಾಗದ ಕುರಿತು ಪರಿಶೀಲಿಸಲಾಗುವುದು.
– ರಾಜಶೇಖರ್‌ಮೂರ್ತಿ, ತಹಶೀಲ್ದಾರ್‌, ಬ್ರಹ್ಮಾವರ

Advertisement

Udayavani is now on Telegram. Click here to join our channel and stay updated with the latest news.

Next