Advertisement

ಹಳ್ಳಿಗಳ ವಾಸ್ತವತೆಗೆ ಹಿಡಿದ ಕೈಗನ್ನಡಿ ವಡ್ಡಾರಾಧಕ

05:52 PM Feb 20, 2020 | mahesh |

ಓದು ಮುಗಿದ ಮೇಲೆ ಹಳ್ಳಿಗಳಲ್ಲಿ ಹೆತ್ತವರನ್ನು ಬಿಟ್ಟು ಊರು ತೊರೆದ ಯುವ ಜನಾಂಗ. ಇದರಿಂದ ಬದುಕಿನ ಕೊನೆ ದಿನಗಳಲ್ಲಿ ವಯಸ್ಸಾದ ಹೆತ್ತವರು ಎದುರಿಸುತ್ತಿರುವ ಕಷ್ಟದ ಜೀವನ. ಇದನ್ನು ಚಿತ್ರಿಸುವ ಕಥಾಹಂದರ ಹೊಂದಿದ ಚಿತ್ರ ವಡ್ಡಾರಾಧಕ ಅಂದರೆ ವೃದ್ಧರ ಆರಾಧಕ ಎಂದರ್ಥ.

Advertisement

ತಾನು ಓದಿ ಉತ್ತಮ ಕೆಲಸ ಹಿಡಿದು ಹಣ ಸಂಪಾದಿಸಬೇಕೆಂಬ ಆಶಯ ಎಲ್ಲರಿಗೂ ಇರುತ್ತದೆ. ಆದರೆ, ಬುದುಕಿನ ಆಸೆಗಳನ್ನು ಪೂರೈಸಿಕೊಳ್ಳುವ ತರಾತುರಿಯಲ್ಲಿ ನಮ್ಮವರನ್ನು ಮರೆತು ಬದುಕು ಸಾಗಿಸುವುದಲ್ಲ. ಈ ಚಿತ್ರದಲ್ಲಿ ಕಥಾ ನಾಯಕ ಅನೀಶ್‌, “ಪಿಯುಸಿ ಫೇಲ್‌ ಆದರೂ ಪರವಾಗಿಲ್ಲ , ನನ್ನವರೊಂದಿಗೆ ನಾನೂ ಇರಬೇಕು’ ಎನ್ನುವ ಮನಃಸ್ಥಿತಿಯ ಹುಡುಗ. ಈತ ಪ್ರತಿದಿನ ಕಾಲೇಜಿಗೆ ಹೊರಡುವ ಸಮಯವದಲ್ಲಿ ದಾರಿಯಲ್ಲಿ ಸಿಗುವ ತನ್ನೂರಿನ ಹಿರಿಯ ಜೀವಗಳು ಹೇಳುವ ಬೇಡಿಕೆಯನ್ನು ಪೂರೈಸುವ ಪರಿಯನ್ನು ಚಿತ್ರದುದ್ದಕ್ಕೂ ಕತೆಯ ರೂಪದಲ್ಲಿ ಉತ್ತಮವಾಗಿ ಹಣೆಯಲಾಗಿದೆ. ಹಳ್ಳಿಗಳಲ್ಲಿ ವಾಸಿಸುವ ವಯಸ್ಸಾದ ಜೀವಗಳ ಕಷ್ಟವನ್ನು, ಹೆತ್ತ ಮಕ್ಕಳು ಆಸರೆಯಾಗಬೇಕಾದ ಜಾಗದಲ್ಲಿ ಇನ್ನಾರೋ ಬಂದು ಸಹಾಯ ಮಾಡುವ ಸ್ಥಿತಿಯನ್ನು ಮನಮುಟ್ಟವಂತೆ ನಿರ್ದೇಶಕ ಅನೀಶ್‌ ಎಸ್‌. ಶರ್ಮ ತೋರಿಸಿದ್ದಾರೆ. ಅಲ್ಲದೆ ಓದಿ ದೊಡ್ಡ ಮನುಷ್ಯ ಎನಿಸಿಕೊಂಡ ಮಗ ಕೊನೆಗಾಲದಲ್ಲಿ ಹೆತ್ತ ತಂದೆಯ ಮೇಲೆಯೇ ಜಮೀನಿನ ವಿಷಯವಾಗಿ ಕೇಸ್‌ ಹಾಕುವ ಪರಿ ನೋಡುಗರಲ್ಲಿ ಕಣ್ಣೀರು ತರಿಸುತ್ತದೆ. ಯಾವುದೇ ಅದ್ದೂರಿ ಸೆಟ್‌ಗಳಿಲ್ಲದೆ, ನೈಜತೆಯಂದ ಕೂಡಿದ ಚಿತ್ರ ಇದಾಗಿದೆ. ನಿಜಬದುಕಿನ ಕತೆಯನ್ನು ಹೊತ್ತು ಸಾಗುವ ಚಿತ್ರ 10 ನಿಮಿಷಗಳದು. ಆದರೆ, ಅದು ಪ್ರೇಕ್ಷಕರ ಹೃದಯವನ್ನು ತಟ್ಟುವುದರಲ್ಲಿ ಎರಡು ಮಾತಿಲ್ಲ.

ಹಳ್ಳಿಗಳ ಈಗಿನ ಪರಿಸ್ಥಿತಿಗೆ ಈ ವಡ್ಡಾರಾಧಕ ಚಿತ್ರ ಕೈಗನ್ನಡಿಯಂತಿದೆ. ಪ್ರತಿಯೊಬ್ಬರಲ್ಲೂ ತನ್ನವರು, ತನ್ನೂರು ಎನ್ನುವ ಮನೋಭಾವ ಹುಟ್ಟಿಕೊಂಡರೆ ಯಾವ ಊರುಗಳೂ ವೃದ್ಧಾಶ್ರಮಗಳಾಗುವುದಿಲ್ಲ. ಸಂಬಂಧಗಳ ಬೆಲೆ ಅರಿವಾಗಬೇಕಾದರೆ ಈ ಚಿತ್ರವನ್ನು ನೋಡಬೇಕಾದ ಅನಿವಾರ್ಯತೆ ಇದೆ. ಚಿತ್ರದಲ್ಲಿ ನಾಯಕನಾಗಿ ನಿದೆೇìಶಕ ಅನೀಶ್‌ ಎಸ್‌. ಶರ್ಮ ಅವರೇ ನಟಿಸಿದ್ದಾರೆ.

ಪವಿತ್ರಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next