Advertisement

ವಡಾಲ ಶ್ರೀ ರಾಮ ಮಂದಿರ ಜಿಎಸ್‌ಬಿ ಗಣೇಶೋತ್ಸವ 

05:28 PM Sep 20, 2018 | Team Udayavani |

ಮುಂಬಯಿ: ವಡಾಲ ಶ್ರೀ ರಾಮ ಮಂದಿರದ ದ್ವಾರಕನಾಥ ಭವನದ 64ನೇ  ವಾರ್ಷಿಕ ಶ್ರೀ ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸ ವವು ಸೆ. 13ರಂದು  ಪ್ರಾರಂಭಗೊಂಡಿದ್ದು,  ಸೆ. 23ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಸೇವಾ ಕಾರ್ಯಕ್ರಮಗಳೊಂದಿಗೆ  ನಡೆಯಲಿದೆ. ದಿನಂಪ್ರತಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಗಣೇಶನ ದರ್ಶನ ಪಡೆದು ಅನ್ನದಾನ ಸ್ವೀಕರಿಸುತ್ತಿದ್ದಾರೆ.

Advertisement

ಸೆ. 14ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸ್ವರ ಸಂಗೀತ ಕಾರ್ಯಕ್ರಮವು ಉಡುಪಿಯ ಪದ್ಮನಾಭ ಪೈ ಮತ್ತು ಭಜನ ಸಾಮ್ರಾಟ್‌ ಖ್ಯಾತಿಯ ಕಿರಣ್‌ ಕಾಮತ್‌ ಅವರಿಂದ  ನಡೆಯಿತು. ವಿಶ್ವವಿಖ್ಯಾತ ಗಣಪತಿ ಎಂಬ ವಿಶೇಷತೆ  ಪಡೆದಿರುವ ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವಡಾಲದ ಗಣಪತಿ ಸಾರಸ್ವತ ಸಮಾಜದ ನಾಲ್ಕೂ ಗುರು ವರ್ಯರಾದ ಕವಳೆ, ಗೋಕರ್ಣ ಪರ್ತ ಗಾಳಿ, ಕಾಶೀ ಹಾಗೂ ಚಿತ್ರಾಪುರ ಮಠಾಧೀಶದಿಂದ ಹಾಗೂ ಪರ್ತಗಾಳಿ ಮಠದ ಶಿಷ್ಯ ಸ್ವಾಮೀಜಿ ಅವರ ಆಶೀರ್ವಾದಗಳೊಂದಿಗೆ ನಡೆಯುತ್ತಿದೆ.
ಉತ್ಸವದುದ್ದಕ್ಕೂ ಮಹಾ ಅನ್ನದಾನ ಸೇವೆ, ಮೂಡ ಗಣಪತಿ ಪೂಜೆ, ಗಣಹೋಮ, ಸರ್ವಾಲಂಕಾರ ಸೇವೆ, ಸಾಮೂಹಿಕ ಮೂಡಗಣಪತಿ ಪೂಜೆ, ಮಹಾಪೂಜೆ, ಮೋದಕ ನೈವೇದ್ಯ, ಗಣಹೋಮ, ರಂಗಪೂಜೆ, ಪುಷ್ಪ ಪೂಜೆ, ರಾತ್ರಿಪೂಜೆ, ದೀಪಾರಾಧನೆ, ಪಂಚಖಾದ್ಯ ನೈವೇದ್ಯ, ತುಲಾಭಾರ ಸೇವೆ, ಧೂರ್ವರ್ಪಣೆ ಸೇವೆ, ಕರ್ಪೂರ ಆರತಿ, ಪ್ರಸಾದ ಸೇವೆ ಇನ್ನಿತರ ಸೇವೆಗಳು ನಡೆಯುತ್ತಿದ್ದು, ದಿನಂಪ್ರತಿ ನಗರ, ಉಪನಗರಗಳಿಂದ ಸಾವಿರಾರು ಭಕ್ತಾದಿಗಳು ಜಾತಿ, ಮತ, ಧರ್ಮವನ್ನು ಮರೆತು ಆಗಮಿಸಿ ಪ್ರಸಾದ ಸ್ವೀಕರಿಸುತ್ತಿದ್ದಾರೆ.

ಉತ್ಸವದುದ್ದಕ್ಕೂ ದಿನಂಪ್ರತಿ ಸಂಜೆ ಭಜನೆ, ಸಂಗೀತ, ನಾಟಕ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಂಸ್ಥೆಯ ಟ್ರಸ್ಟಿ, ಕಾರ್ಯಾಧ್ಯಕ್ಷ ರಾಜನ್‌ ಸಿ. ಭಟ್‌, ಟ್ರಸ್ಟಿ ಕಾರ್ಯದರ್ಶಿ ಮುಕುಂದ್‌ ವೈ. ಕಾಮತ್‌, ಟ್ರಸ್ಟಿ ಕೋಶಾಧಿಕಾರಿ ರಾಜೀವ್‌ ಡಿ. ಶೇಣಿÌ, ಗಿರೀಶ್‌ ಎಸ್‌. ಪಿಕಾಲೆ, ಉಮೇಶ್‌ ಎ. ಪೈ, ಶಾಂತಾರಾಮ್‌ ಎ. ಭಟ್‌, ಪ್ರಮೋದ್‌ ಎಚ್‌. ಪೈ ಹಾಗೂ ಇತರ ಪದಾಧಿಕಾರಿಗಳು, ಮಹಿಳಾ ವಿಭಾಗದ, ಯುವ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಅರ್ಚಕ ವೃಂದದವರ ನೇತೃತ್ವದಲ್ಲಿ ಉತ್ಸವವು ಜರಗುತ್ತಿದೆ.

ಸೆ. 20ರಂದು ಸಂಜೆ 6.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕಿನ ಡೆಪ್ಯುಟಿ ಆಡಳಿತ ನಿರ್ದೇಶಕ ಪರೇಶ್‌ ಸುಖ್ತಂಕರ್‌ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಗೌರವ ಅತಿಥಿಯಾಗಿ ಉದ್ಯಮಿ ಶಶಿಕಾಂತ್‌ ಶ್ಯಾನುಭಾಗ್‌ ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾ ಗುವುದು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಹಿಷಾಸುರ ಮರ್ದಿನಿ ಯಕ್ಷ ಗಾನ ಪ್ರದರ್ಶನಗೊಳ್ಳಲಿದೆ ಎಂದು ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವಕ್ತಾರ ಕಮಲಾಕ್ಷ ಸರಾಫ್‌ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next