Advertisement

ಹಂಚಿನಾಳ ಬಲಭೀಮೇಶ್ವರ ರಥೋತ್ಸವ ಸಂಭ್ರಮ

04:26 PM Dec 23, 2019 | Naveen |

ವಡಗೇರಾ: ತಾಲೂಕಿನ ಹಂಚಿನಾಳ ಗ್ರಾಮದ ಬಲಭೀಮೇಶ್ವರ ಜಾತ್ರೆ ಅಂಗವಾಗಿ ಶನಿವಾರ ಅದ್ಧೂರಿ ರಥೋತ್ಸವ ಜರುಗಿತು. ಒಂದು ದಿನ ಮುಂಚಿತವಾಗಿ ಐಕೂರ ಗ್ರಾಮದ ಕೃಷ್ಣಾ ನದಿಯಲ್ಲಿ ಗಂಗಾಸ್ನಾನ ನೆರವೇರಿಸಿ ಡೊಳ್ಳು ವಾದ್ಯ ಕುಣಿತದೊಂದಿಗೆ ಮೆರವಣಿಗೆ ಸಂಭ್ರಮದಿಂದ ನೆರವೇರಿತು.

Advertisement

ಹಣಮಂತ್ರಾಯಗೌಡ ಮಾಲಿ ಪಾಟೀಲ ಹಂಚಿನಾಳ ಮಾತನಾಡಿ, ಪೂರ್ವಜರಿಂದ ಆರಂಭವಾಗಿರುವ ಬಲಭೀಮೇಶ್ವರ ಜಾತ್ರೆಗೆ ಐಕೂರ ಗ್ರಾಮಸ್ಥರು ಸಹಕಾರ ನೀಡುತ್ತ ಬಂದಿದ್ದು, ಮುಂದೆಯೂ ಅವರ ಸಹಕಾರ ಇರಲಿ ಎಂದರು.

ಅರ್ಚಕ ದೇವಪ್ಪ ಪೂಜಾರಿ ಮಾತನಾಡಿ, ಭಗವಂತನ ಆಶೀರ್ವಾದ ರೈತರ ಮೇಲೆ ಇರಲಿ, ಮಳೆ ಬೆಳೆ ಚೆನ್ನಾಗಿ ಬರಲಿ ಎಂದರು. ರವಿವಾರ ನಡೆದ ಕೈ ಕುಸ್ತಿ ಪಂದ್ಯ ಮತ್ತು ಭಾರ ಎತ್ತುವ ಸ್ಪರ್ಧೆ ಹಾಗೂ ಕ್ರಿಕೆಟ್‌ ಟೂರ್ನಾಮೆಂಟ್‌ ಪೈನಲ್‌ ಪಂದ್ಯಗಳು ನೆರವೇರಿದವು. ವಿಜೇತ ತಂಡಕ್ಕೆ 11 ಸಾವಿರ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 5 ಸಾವಿರ ಬಹುಮಾನ ವಿತರಿಸಲಾಯಿತು.

ಪ್ರಮುಖರಾದ ಭೀಮಪ್ಪಗೌಡ ಮಾಲಿ ಪಾಟೀಲ, ಶರಣಗೌಡ ಮಾಲಿ ಪಾಟೀಲ, ಅಯ್ಯಪ್ಪ ದೇಸಾಯಿ, ನಿಂಗಣ್ಣ ಅಂಗಡಿ ಹಂಚಿನಾಳ, ಶಂಕ್ರಪ್ಪ ಕೆಂಪನೋರ್‌, ರಾಘವೇಂದ್ರ ಉಪ್ಪಾರ, ನಿಂಗಣ್ಣ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next