Advertisement
ಮಾ. 22: ದೇವರ ಪುನಃ ಪ್ರತಿಷ್ಠೆಮಾ. 22ರಂದು ಬೆಳಗ್ಗೆ ಗೋಪೂಜೆ, ಪ್ರತ್ಯಕ್ಷ ಗೋದಾನ, ಪೀಠ ಪ್ರತಿಷ್ಠೆ ನಡೆದು 10.06ರ ವೃಷಭ ಲಗ್ನ ಸುಮುಹೂರ್ತದಲ್ಲಿ ಪರಿವಾರ ಸಹಿತ ದೇವರ ಬಿಂಬ ಪ್ರತಿಷ್ಠೆ, ಜೀವ ಕುಂಭಾಭಿಷೇಕ, ನ್ಯಾಸಪೂಜೆ, ನಿತ್ಯ ನೈಮಿತ್ತಿಕ ಪೂಜಾ ವಿಧಿ ವಿಧಾನಗಳ ಪ್ರತಿಜ್ಞಾ ಸ್ವೀಕಾರ ನಡೆಯಲಿದೆ. ಮಧ್ಯಾಹ್ನ 12ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೇಗುಲದಲ್ಲಿ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ಜರಗಲಿವೆ.
ಅಷ್ಟಬಂಧ ಬ್ರಹ್ಮಕಲಶೋತ್ಸವ
ಮಾ. 25ರಂದು ಬೆಳಗ್ಗೆ 6.45ರ ಮೀನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮ ಕುಂಭಾಭಿಷೇಕ, ಪರಿಕಲಶಾಭಿಷೇಕ, ಮಹಾ ಮಂತ್ರಾಕ್ಷತೆ, ಅಗ್ನಿಜನನ ನಡೆಯಲಿದೆ. ಮಧ್ಯಾಹ್ನ 12ರಿಂದ ಮಹಾಪೂಜೆಯ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಲಿರುವುದು. ಸಂಜೆ 4ರಿಂದ ನಿತ್ಯಬಲಿ, ಮಂಟಪದಲ್ಲಿ ಪೂಜೆ, ರಂಗಪೂಜೆ ಸೇವೆ ಜರಗಲಿದೆ. ಮಾ. 27:
ಶ್ರೀ ಮನ್ಮಹಾರಥೋತ್ಸವ
ಮಾ. 27ರಂದು ಬೆಳಗ್ಗೆ 10.15 ರಿಂದ ಉತ್ಸವ ಬಲಿ, ರಥಾರೋಹಣ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ರಿಂದ ರಥೋತ್ಸವ ಪ್ರಾರಂಭವಾಗಿ ತೆಪ್ಪೋತ್ಸವ, ಪಲ್ಲಕ್ಕಿ ಉತ್ಸವ, ಓಲಗ ಮಂಟಪ ಪೂಜೆ, ರಾತ್ರಿ ಭೂತ ಪೂಜೆಯು ಜರಗಲಿದೆ.
Related Articles
ಮಾ. 19ರಿಂದ 26ರ ವರೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯ ಕ್ರಮದಲ್ಲಿ ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠದ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಆಶೀರ್ವಚನ ನೀಡಲಿರುವರು ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.
Advertisement
ಮಾ. 19ರಂದು ಹೊರೆಕಾಣಿಕೆ ಮೆರವಣಿಗೆಮಾ. 19ರಂದು ಸಂಜೆ 4ರಿಂದ ಹಸುರು ಹೊರೆ ಕಾಣಿಕೆ ಮೆರವಣಿಗೆಯು ಕೊಡವೂರು ಶಂಕರನಾರಾಯಣ ದೇವಸ್ಥಾನದಿಂದ 101 ಚೆಂಡೆ, ವಿವಿಧ ವೇಷಭೂಷಣಗಳೊಂದಿಗೆ ವೈಭವದ ಶೋಭಾಯಾತ್ರೆಯಲ್ಲಿ ವಡಭಾಂಡ ಬಲರಾಮ ದೇವಸ್ಥಾನಕ್ಕೆ ಸಾಗಿ ಬರಲಿದೆ. ಬೆಳಗ್ಗೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ ಉಗ್ರಾಣ ಮುಹೂರ್ತ, ಸಂಜೀವಿನಿ ಮೃತ್ಯುಂಜಯ ಹೋಮ, ಸಂಜೆ ವಾಸ್ತು ಹೋಮ ಸಹಿತ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನಡೆಯಲಿವೆ. ಮಾ. 20ರಿಂದ ಮಾ. 29ರ ವರೆಗೆ ಬೆಳಗ್ಗೆ ಮತ್ತು ಸಂಜೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಲಿವೆ.