ಮಲ್ಪೆ: ಶ್ರೀ ವಡಭಾಂಡ ಬಲರಾಮ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದು ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದ ರಥೋತ್ಸವ ಜರಗಿತು.
ಪ್ರಧಾನ ತಂತ್ರಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವÌದಲ್ಲಿ ಬೆಳಗ್ಗೆ ಉತ್ಸವ ಬಲಿ, ರಥಾರೋಹಣ ನಡೆಯಿತು. ಬಳಿಕ ಬ್ರಾಹ್ಮಣ ಸುವಾಸಿನಿ ಸಮಾರಾಧನೆಯಾಗಿ ಮಹಾ ಅನ್ನಸಂತರ್ಪಣೆ, ರಾತ್ರಿ ಮಹಾ ರಥೋತ್ಸವ ಜರಗಿತು.
ಸಹಸ್ರಾರು ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಪುನೀತ ಭಾವ ಮೆರೆದರು.
ರಥೋತ್ಸದಲ್ಲಿ ವಿವಿಧ ಕಲಾತಂಡಗಳು, ವಿವಿಧ ವೇಷಭೂಷಣ, ವಾದ್ಯಘೋಷ ಗಳು ಮಕ್ಕಳಾದಿಯಾಗಿ ಗ್ರಾಮಸ್ಥರು ರಥದೊಂದಿಗೆ ಹೆಜ್ಜೆ ಹಾಕಿದ್ದು ಜಾತ್ರ ಮಹೋತ್ಸವಕ್ಕೆ ಮೆರುಗು ನೀಡಿತ್ತು.
ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಶ್ರೀಶ ಭಟ್ ಕಡೆಕಾರ್, ಅಧ್ಯಕ್ಷ ನಾಗರಾಜ್ ಮೂಲಿಗಾರ್, ಪ್ರಧಾನ ಕಾರ್ಯದರ್ಶಿ ಶಶಿಧರ ಎಂ. ಅಮೀನ್, ಆನುವಂಶಿಕ ಮೊಕ್ತೇಸರ ಟಿ. ಶ್ರೀನಿವಾಸ ಭಟ್, ಪವಿತ್ರಪಾಣಿ ಶಂಕರನಾರಾಯಣ ಐತಾಳ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಗೌರವಾಧ್ಯಕ್ಷರಾದ ಆನಂದ ಪಿ. ಸುವರ್ಣ, ಹರಿಯಪ್ಪ ಕೋಟ್ಯಾನ್, ಉಪಾಧ್ಯಕ್ಷ ರಮೇಶ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಜಿ. ಕೊಡವೂರು, ಕಾರ್ಯದರ್ಶಿ ಜನಾರ್ದನ ಕೊಡವೂರು, ಪ್ರಮುಖರಾದ ಗೋಪಾಲ ಸಿ. ಬಂಗೇರ, ನಾಗರಾಜ್ ಸುವರ್ಣ, ಕಿಶೋರ್ ಡಿ. ಸುವರ್ಣ, ಸುಭಾಸ್ ಮೆಂಡನ್, ರಾಮಚಂದ್ರ ಕುಂದರ್, ಸುಧಾಕರ ಮೆಂಡನ್, ವಿನೋದ್ ಸುವರ್ಣ, ಶಶಿಕಾಂತ್ ಬಂಗೇರ, ಈಶ್ವರ್ ಜಿ. ಸಾಲ್ಯಾನ್, ಬಿ.ಬಿ. ಪೂಜಾರಿ, ಶಶಿಧರ್ ಕುಂದರ್, ಶರತ್ ಕುಮಾರ್, ಶೇಖರ್ ಜಿ. ಕೋಟ್ಯಾನ್, ದಯಾನಂದ ಕೆ. ಸುವರ್ಣ, ಮೀನಾಕ್ಷಿ ಮಾಧವ, ಜ್ಞಾನೇಶ್ವರ್ ಕೋಟ್ಯಾನ್, ಭಾಸ್ಕರ ಬಾಚನಬೈಜಿn, ವಿಜಯ್ ಕುಂದರ್, ಪಾಂಡುರಂಗ ಮಲ್ಪೆ, ಬಾಲಕೃಷ್ಣ ಮೆಂಡನ್, ವಿಕ್ರಮ ಟಿ. ಶ್ರೀಯಾನ್, ಧನಂಜಯ್ ಕಾಂಚನ್, ರಾಧಾಕೃಷ್ಣ ಮೆಂಡನ್, ರತ್ನಾಕರ ಸಾಲ್ಯಾನ್, ಸತೀಶ್ ಕುಂದರ್, ಮಾಧವ ಕುಂದರ್, ಶಿವಪ್ಪ ಕಾಂಚನ್, ಪ್ರಶಾಂತ್ ಅಮೀನ್, ಅಶೋಕ್ ಎಸ್. ಕೋಟ್ಯಾನ್, ಅಭಿವೃದ್ಧಿ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು, ಭಕ್ತವೃಂದ, ಗುರಿಕಾರು, ಗ್ರಾಮಸ್ಥರು ಪಾಲ್ಗೊಂಡಿದ್ದರು.