Advertisement
ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಶ್ರಾವಣ ಮಾಸದ ನಿಮಿತ್ತ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್, ಬಸವನಬಾಗೇವಾಡಿಯ ವಿಶ್ವಬಂಧು ಬಸವ ಸಮಿತಿ, ಕುಂಟೋಜಿ ಯಶಸ್ವಿನಿ ಮಹಿಳಾ ಬಳಗದ ಸಹಯೋಗದಲಿ ಕೈದಿಗಳಿಗೆ ಹಮ್ಮಿಕೊಂಡಿದ್ದ ರುದ್ರಾಕ್ಷಿ ದೀಕ್ಷೆ, ವಿಭೂತಿ ವಿತರಣೆ, ವಚನ ಪುಸ್ತಕಗಳ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಮನುಷ್ಯ ಬದಲಾವಣೆಯ ಬದುಕಿಗಾಗಿ ವಚನಗಳನ್ನು ಅರಿತು ಬಾಳುವುದು ಮುಖ್ಯ. ಶರಣರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ದಯೆ, ತಾಳ್ಮೆ, ಸಹನೆ ಹೀಗೆ ಸದ್ಗುಣಗಳು ನಿಮ್ಮದಾಗಲಿವೆ. ಸದರಿ ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಜೈಲು ಬಂಧಿಗಳು ಭವಿಷ್ಯದಲ್ಲಿ ಸಮಾಜದ ಉತ್ತಮ ನಾಗರಿಕರಾಗಿ ಜೀವಿಸಬೇಕು ಎಂದು ವಿಶ್ವ ಬಸವ ಬಂಧು ಸಮಿತಿಯ ಡಾ| ಅಮರೇಶ ಮಿಣಜಿಗಿ ಸಲಹೆ ನೀಡಿದರು.
ಉಪನ್ಯಾಸಕ ರಾಜೇಂದ್ರಕುಮಾರ ಮಾತನಾಡಿ, ಮನುಷ್ಯನಿಗೆ ಕ್ಷಮಾಗುಣ ಅವಶ್ಯ. ದಯೆ ಕರುಣೆ ತ್ಯಾಗದಿಂದಲೇ ಎಲ್ಲವನ್ನು ಗೆಲ್ಲಬೇಕು ಎಂದರು. ವಿಶ್ವಬಂಧು ಬಸವ ಸಮಿತಿ ಅಧ್ಯಕ್ಷ ಡಾ| ಅಮರೇಶ ಮಿಣಜಗಿ ಪ್ರಾಸ್ತಾವಿಕ ಮಾತನಾಡಿದರು.
ಐ.ಎಸ್. ಹಿರೇಮಠ, ಸುರೇಶ ಪೂಜಾರಿ ವೇದಿಕೆಯಲ್ಲಿದ್ದರು. ಬಂಧಿಖಾನೆಯಲ್ಲಿರುವ ಕೈದಿಗಳಿಗೆ ಹಣೆಗೆ ವಿಭೂತಿ ಹಚ್ಚಿ, ಕೊರಳಲ್ಲಿ ರುದ್ರಾಕ್ಷಿ ಧರಿಸಿ ವಚನ ಪುಸ್ತಕ ನೀಡಿ ಪ್ರಸಾದ ವಿತರಿಸಲಾಯಿತು. ಯಶಸ್ವಿನಿ ಮಹಿಳಾ ಸಂಘದವರು ಎಲ್ಲ ಕೈದಿಗಳಿಗೆ ರಾಖಿ ಕಟ್ಟಿ ಸಿಹಿ ನೀಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸಂಗಮೇಶ ಗುತ್ತೇದಾರ, ದೇವೇಂದ್ರ ಪತ್ತಾರ, ಶಿವಪುತ್ರ ಯಶರದಾ, ಶಂಕ್ರಮ್ಮ ಹೂಗಾರ, ಸ್ನೇಹಾ ಹಿರೇಮಠ, ಸಿದ್ದಮ್ಮ ಒಣರೊಟ್ಟಿ, ರೇಖಾ ಹೂಗಾರ, ಶಿವಮ್ಮ ಹೂಗಾರ ಇದ್ದರು. ಬಿ.ಆರ್. ಬನಸೋಡೆ ಪ್ರಾರ್ಥಿಸಿದರು. ಶಕೀಲಾ ಬೇಗಂ ನಿರೂಪಿಸಿದರು.