Advertisement

ಆರೋಗ್ಯಪೂರ್ಣ ಹಂಪಿ ನಿರ್ಮಾಣಕ್ಕೆ ಸಂಕಲ್ಪ: ವಚನಾನಂದ ಸ್ವಾಮೀಜಿ

06:44 PM Jun 12, 2022 | Team Udayavani |

ಹೊಸಪೇಟೆ: ವಿಜಯನಗರ ಅರಸರ ಕಾಲದಲ್ಲಿ ಸಂಪತ್ಬರಿತವಾಗಿದ್ದ ವಿಶ್ವವಿಖ್ಯಾತ ಹಂಪಿಯನ್ನು ಇದೀಗ ಆರೋಗ್ಯವಂತ ನಾಡನ್ನಾಗಿ ಮಾಡುವ ಮೂಲಕ ವಿಶ್ವದ ಗಮನ ಸೆಳೆಯುವಂತೆ ಮಾಡಬೇಕಿದೆ ಎಂದು ಶ್ವಾಸಗುರು ವಚನಾನಂದ ಸ್ವಾಮೀಜಿ ಹೇಳಿದರು.

Advertisement

ವಿಶ್ವ ಯೋಗಾ ದಿನಾಚರಣೆ ಪ್ರಯುಕ್ತ ಶ್ವಾಸ ಯೋಗ ಸಂಸ್ಥೆ ಹಾಗೂ ಪತಂಜಲಿ ಯೋಗ ಸಮಿತಿ ವತಿಯಿಂದ ಹಂಪಿ ಕಮಲ ಮಹಲ್ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಯೋಗೋತ್ಸವದಲ್ಲಿ ಅವರು, ಮಾತನಾಡಿದರು.

ಭಾರತದ ಸಂಸ್ಕೃತಿ, ಪರಂಪರೆ ಶ್ರೀಮಂತವಾಗಿದೆ. ಅದರಲ್ಲಿ ವಿಶ್ವ ಪರಂಪರೆ ತಾಣ ಹಂಪಿ, ವಿಶ್ವದ ಗಮನವನ್ನು ಸೆಳೆದಿದೆ. ಈ ಪುಣ್ಯಭೂಮಿಯಲ್ಲಿ ಯೋಗೋತ್ಸವ ನಡೆಸುವುದು ನೆಮ್ಮೆಲ್ಲರ ಭಾಗ್ಯ ಎಂದು ಬಣ್ಣಿಸಿದರು.

ಯೋಗ, ಪ್ರಾಣಾಯಮ, ಧ್ಯಾನಕ್ಕೆ ತನ್ನದೇ ಆದ ಮಹತ್ವ ಇದೆ. ಯೋಗದ ಮಹತ್ವವನ್ನು ಅರಿತಿದ್ದ ನಮ್ಮ ಋಷಿಮುನಿಗಳು ಯೋಗದಿಂದಲೇ ಸರ್ವವನ್ನು ಸಾಧಿಸಿ, ಅಮರರಾಗಿದ್ದರು. ಇಂದು ಒತ್ತಡದ ಬದುಕಿನ ನಡುವೆ ಉತ್ತಮ ಆರೋಗ್ಯವನ್ನು ಹೊಂದಲು ಪ್ರತಿಯೊಬ್ಬರೂ ಯೋಗದ ಮೊರೆ ಹೋಗುವುದೇ ಒಂದೇ ಮಾರ್ಗ ಎಂದರು.

ಪ್ರಹ್ಲಾದ್ ಜೋಶಿ ಭಾಗಿ:

Advertisement

ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಎದುರು ಬಸವಣ್ಣ ಮಂಟಪದ ಸ್ಮಾರಕಗಳ ಎದುರು ಜೂ.21 ರಂದು ವಿಶ್ವ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ವಿಶ್ವ ಯೋಗ ದಿನಾಚರಣೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಭಾಗವಹಿಸಲಿದ್ದಾರೆ ಎಂದರು.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಪತಂಜಲಿ ಸಮಿತಿ ರಾಜ್ಯ ಪ್ರಬಾರಿ ಭವರ್‌ಲಾಲ್ ಆರ್ಯ, ಆಯುಷ್ ಇಲಾಖೆಯ ಕೊಪ್ಪಳ ಜಿಲ್ಲಾ ವೈದ್ಯಾಧಿಕಾರಿ ಡಾ.ವೈ.ಜೆ. ಸಿರಿವಾರ್, ಡಾ.ಶ್ಯಾಮ್ ಚೌದರಿ, ಡಾ.ಪಲ್ಲವಿ ಅಮರನಾಥ್, ವಿಮಲ್ ಜೈನ್ ಇನ್ನಿತರರಿದ್ದರು. ಸುಮಾರು 1200 ಕ್ಕೂ ಹೆಚ್ಚು ಜನರು ಯೋಗೋತ್ಸವದಲ್ಲಿ ಭಾಗಿಯಾಗಿದ್ದರು.

ಹಂಪಿ ವಿಜಯವಿಠಲ ದೇವಾಲಯ ಆವರಣದ ಕಲ್ಲಿನ ತೇರು, ಬಡವಲಿಂಗ, ಉಗ್ರನರಸಿಂಹ ಸ್ಮಾರಕ. ಬಡವಿಲಿಂಗ, ಉಗ್ರನರಸಿಂಹ, ಗಜಶಾಲೆ ಆವರಣದಲ್ಲಿ ಈಗಾಗಲೇ ಯೋಗಯೋತ್ಸವ ನಡೆಸಿಲಾಗಿದ್ದು, ಇಂದು ಕಮಲ ಮಹಲ್ ಆವರಣದಲ್ಲಿ ಯೋಗೋತ್ಸವ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next