Advertisement

ವಿದೇಶಿಯರಿಗೂ ಭಾರತದಲ್ಲಿ ಲಸಿಕೆ

11:37 PM Aug 09, 2021 | Team Udayavani |

ಹೊಸದಿಲ್ಲಿ/ವಾಷಿಂಗ್ಟನ್‌: ಇನ್ನು ಮುಂದೆ ಭಾರತದಲ್ಲಿರುವ ವಿದೇಶಿಯರು ಕೂಡ ಇಲ್ಲೇ ಲಸಿಕೆ ಪಡೆಯಬಹುದು. ಕೋವಿನ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡುವಾಗ ತಮ್ಮ ಪಾಸ್‌ಪೋರ್ಟ್‌ ಅನ್ನು ಗುರುತಿನ ದಾಖಲೆ ಎಂದು ತೋರಿಸಿ, ಲಸಿಕೆ ಸ್ವೀಕರಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ತಿಳಿಸಿದ್ದಾರೆ.

Advertisement

ಮೆಟ್ರೋಪಾಲಿಟನ್‌ ನಗರಗಳಲ್ಲಿ ಬಹುಸಂಖ್ಯೆಯ ವಿದೇಶಿಗರು ನೆಲೆಸಿದ್ದು, ಅವರೆಲ್ಲರಿಗೂ ಲಸಿಕೆ ನೀಡಬೇಕಾದ ಅಗತ್ಯವಿದೆ. ಅಲ್ಲದೇ, ಕೊರೊನಾ ವ್ಯಾಪಿಸದಂತೆ ತಡೆಯಬೇಕೆಂದರೆ, ಎಲ್ಲರಿಗೂ ಲಸಿಕೆ ನೀಡಬೇಕಾಗುತ್ತದೆ ಎಂದು ಮಾಂಡವಿಯ ಹೇಳಿದ್ದಾರೆ.

ಮಕ್ಕಳ ಲಸಿಕೆಗೆ ಈ ವಾರವೇ ಒಪ್ಪಿಗೆ?: ಝೈಡಸ್‌ ಕ್ಯಾಡಿಲಾ ಕಂಪೆನಿಯ ಲಸಿಕೆಗೆ ಈ ವಾರವೇ ತುರ್ತು ಬಳಕೆಗೆ ಒಪ್ಪಿಗೆ ಸಿಗುವ ಸಾಧ್ಯತೆ ಅಧಿಕವಾಗಿದೆ. ಈ ಕಂಪೆನಿಯು ಭಾರತದಲ್ಲಿ 12-18 ವಯೋಮಾನದವರೂ ಸೇರಿದಂತೆ ಭಾರೀ ಸಂಖ್ಯೆಯ ಜನರ ಮೇಲೆ ದೊಡ್ಡ ಮಟ್ಟದ ಕ್ಲಿನಿಕಲ್‌ ಟ್ರಯಲ್‌ ನಡೆಸಿದೆ. ಝೈಕೋವ್‌-ಡಿ ಲಸಿಕೆಗೆ ಒಪ್ಪಿಗೆ ಸಿಕ್ಕಿದರೆ, ದೇಶದಲ್ಲಿ 12-18ರ ವಯೋಮಾನದವರಿಗೆ ದೊರಕುವ ಮೊದಲ ಲಸಿಕೆ ಇದಾಗಲಿದೆ. ಇದೇ ವೇಳೆ,  ರವಿವಾರದಿಂದ ಸೋಮವಾರಕ್ಕೆ ದೇಶದಲ್ಲಿ 35,499 ಮಂದಿಗೆ ಸೋಂಕು ತಗಲಿದ್ದು, 447 ಮಂದಿ ಸಾವಿಗೀಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next