Advertisement
ಇಟಲಿ ರಾಜಧಾನಿ ರೋಮ್‌ನಲ್ಲಿ ಶನಿವಾರದಿಂದ ಆರಂಭಗೊಂಡ ಜಿ-20 ಶೃಂಗದಲ್ಲಿ ಇಟಲಿ ಪ್ರಧಾನಿ ಮರಿಯೊ ಡ್ರಾ , ಜಾಗತಿಕ ಸಮುದಾಯಕ್ಕೆ ಈ ಮನವಿ ಮಾಡಿದ್ದಾರೆ.
ಶೇ. 15ರಷ್ಟು ಕಾರ್ಪೋರೆಟ್ ತೆರಿಗೆಗೆ ಒಪ್ಪಿಗೆ: ಕೊರೊನೋತ್ತರ ಕಾಲಘಟ್ಟದಲ್ಲಿ ಜಿ-20 ಸದಸ್ಯ ರಾಷ್ಟ್ರಗಳು ಪರಸ್ಪರ ಸಹಕಾರದಿಂದ ತಾವು ಅನುಭವಿಸಿರುವ ನಷ್ಟವನ್ನು ಸರಿದೂಗಿಸುವ ಪ್ರಮುಖ ತೀರ್ಮಾನವೊಂದಕ್ಕೆ ಬಂದಿವೆ. ಜಿ-20 ಒಕ್ಕೂಟದ ಯಾವುದೇ ಸದಸ್ಯ ರಾಷ್ಟ್ರಕ್ಕೆ ಸೇರಿದ ಬಹುರಾಷ್ಟ್ರೀಯ ಕಂಪೆನಿಯ ಮೇಲೆ ಶೇ.15ರಷ್ಟು ಕಾರ್ಪೋರೆಟ್ ತೆರಿಗೆಯನ್ನು ಮಾತ್ರ ವಿಧಿಸುವ ಪ್ರಸ್ತಾವನೆಗೆ ಜಿ-20ಯ ಎಲ್ಲ ರಾಷ್ಟ್ರಗಳೂ ಸಭೆಯ ಮೊದಲ ದಿನವೇ ಒಪ್ಪಿಗೆ ನೀಡಿವೆ.
Related Articles
Advertisement
ಹಸುರು ಜಲಜನಕ: ಮರುನವೀಕರಿಸಬಹುದಾದ ಇಂಧನಗಳ ಅಭಿವೃದ್ಧಿ ಯೋಜನೆಯಡಿ ಪರಸ್ಪರ ಕೈಜೋಡಿಸಿರುವ ಭಾರತ ಮತ್ತು ಇಟಲಿ,ಹಸುರು ಜಲಜನಕದ ಅಭಿವೃದ್ಧಿಗೆ ಸಹಕಾರ ನೀಡುವ ಕುರಿತಾದ ಒಪ್ಪಂದಕ್ಕೆ ರೋಮ್‌ನಲ್ಲಿ ಬುಧವಾರ ಸಹಿ ಹಾಕಿವೆ. ಇದನ್ನೂ ಓದಿ:ಚೀನಾ ಸೈನಿಕರ ಪತ್ತೆಗಾಗಿ ಹೊಸ ತಂತ್ರಜ್ಞಾನ : ಗಡಿ ಉಲ್ಲಂಘನೆ ತಪ್ಪಿಸಲು ಈ ಪ್ರಯತ್ನ ಪೋಪ್‌ರನ್ನು ಭೇಟಿ ಮಾಡಿದ ಮೋದಿ
ಪ್ರಧಾನಿ ಮೋದಿ ಶನಿವಾರ ವ್ಯಾಟಿಕನ್ ಸಿಟಿಗೆ ತೆರಳಿ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್‌ರನ್ನು ಭೇಟಿ ಮಾಡಿದರು. ಇದು ಭಾರತದ ಪ್ರಧಾನಿಯೊಬ್ಬರು ಸುಮಾರು 2 ದಶಕಗಳ ಅನಂತರ ಕ್ರೈಸ್ತ ಧರ್ಮಗುರುವನ್ನು ಭೇಟಿ ಮಾಡಿದ ಗಳಿಗೆ ಎನಿಸಿತು. 2000ನೇ ಇಸವಿಯಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಆಗಿನ ಪೋಪ್ ಆಗಿದ್ದ 2ನೇ ಜಾನ್ ಪಾಲ್‌ರನ್ನು ಭೇಟಿಯಾಗಿದ್ದರು. ಶನಿವಾರದ ಭೇಟಿಯ ಖುಷಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮೋದಿ, “ಪೋಪ್‌ರೊಂದಿಗಿನ ಭೇಟಿ ಉಲ್ಲಾಸಕರವಾಗಿತ್ತು. ಅವರ ಜತೆ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಲು ಅವಕಾಶ ಸಿಕ್ಕಿತು. ಭಾರತಕ್ಕೆ ಭೇಟಿ ನೀಡುವಂತೆ ನಾನು ಪೋಪ್ ಅವರಿಗೆ ಆಮಂತ್ರಣ ನೀಡಿದ್ದೇನೆ’ ಎಂದು ಹೇಳಿದ್ದಾರೆ. ಇದೇ ವೇಳೆ, ಬೆಳ್ಳಿಯಿಂದ ತಯಾರಿಸಲಾದ ಕ್ಯಾಂಡಲ್ ಹೋಲ್ಡರ್ ಹಾಗೂ ಜಾಗತಿಕ ತಾಪಮಾನ ಹೆಚ್ಚಳದ ದುಷ್ಪರಿಣಾಮ ತಡೆಗಟ್ಟಲು ಭಾರತ ಕೈಗೊಂಡಿರುವ ಕ್ರಮಗಳುಳ್ಳ ಪುಸ್ತಕವೊಂದನ್ನು ಮೋದಿ, ಪೋಪ್ ಅವರಿಗೆ ಉಡುಗೊರೆಯಾಗಿ ನೀಡಿದರು. ಪೋಪ್ ಭೇಟಿ ತಪ್ಪಲ್ಲ: ಹೊಸಬಾಳೆ
ಧಾರವಾಡ: ಪ್ರಧಾನಿ ಮೋದಿ ಅವರು ರೋಮ್‌ನಲ್ಲಿ ಪೋಪ್ ಅವರನ್ನು ಭೇಟಿ ಮಾಡಿದ್ದು ತಪ್ಪಲ್ಲ ಎಂದು ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಮೋದಿ-ಪೋಪ್ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ. ನಗರದ ರಾಷ್ಟ್ರೋ ತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ಅಖೀಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್‌ನ ಕೊನೆಯ ದಿನವಾದ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ವಸುದೈವ ಕುಟುಂಬಕಂ’ ಎನ್ನುವ ತಣ್ತೀ ನಮ್ಮದು. ಒಂದು ದೇಶದ ಮುಖ್ಯಸ್ಥ ಇನ್ನೊಂದು ದೇಶದ ಮುಖ್ಯಸ್ಥರನ್ನು ಭೇಟಿ ಮಾಡುವುದು ನಾಗರಿಕ ಸಮಾಜದ ಲಕ್ಷಣ. ಎಲ್ಲ ಧರ್ಮದ ಜನರನ್ನು ಭೇಟಿಯಾಗುವುದರಲ್ಲಿ ತಪ್ಪಿಲ್ಲ. ಇಷ್ಟಕ್ಕೂ ಪ್ರಧಾನಿ ಜಗತ್ತಿನ ಪ್ರಮುಖ ವ್ಯಕ್ತಿಗಳನ್ನು
ಭೇಟಿ ಮಾಡಿ ನಮ್ಮ ದೇಶದ ಗೌರವ ಹೆಚ್ಚಿಸಿದ್ದಾರೆ ಎಂದರು.