ನವದೆಹಲಿ:ಕೋವಿಡ್ ಲಸಿಕೆ ಕುರಿತ ಭಯದ ಪರಿಣಾಮ ಭಾರತದ ಹಲವು ರಾಜ್ಯಗಳಲ್ಲಿ ಸುಮಾರು 200 ಮಿಲಿಯನ್ (20ಕೋಟಿ)ಗಿಂತಲೂ ಅಧಿಕ ಕೋವಿಡ್ ಲಸಿಕೆಯ ಡೋಸ್ ಗಳು ಉಳಿದುಕೊಂಡಿರುವುದಾಗಿ ಲಸಿಕೆ ತಯಾರಿಕಾ ಸಂಸ್ಥೆಯಾದ ಸೀರಮ್ ಗುರುವಾರ(ನವೆಂಬರ್ 18) ತಿಳಿಸಿದೆ.
ಇದನ್ನೂ ಓದಿ:“ಎಲ್ಲವೂ ಹೋಯಿತು..ಅಳುವುದೋ ಏನು ಮಾಡುವುದು ಗೊತ್ತಿಲ್ಲ”: ಮಿಮಿ ಚಕ್ರವರ್ತಿ
ಭಾರತಕ್ಕೆ ಸಾಕಾಗುವಷ್ಟು ದಾಸ್ತಾನು ಇಡಲು ಕೋವಿಡ್ ಲಸಿಕೆ ಸರಬರಾಜು ಮಾಡುವ ನಿಟ್ಟಿನಲ್ಲಿ ಲಸಿಕೆ ಉತ್ಪಾದನಾ ಸಂಸ್ಥೆಗಳು ಅವಿರತವಾಗಿ ಕೆಲಸ ಮಾಡಿದೆ ಎಂದು ಸೀರಮ್ ಇನ್ಸ್ ಟಿಟ್ಯೂಟ್ ಸಿಇಒ ಅದಾರ್ ಪೂನಾವಾಲಾ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇಂದು ರಾಜ್ಯಗಳಲ್ಲಿ 200 ಮಿಲಿಯನ್ ಗಿಂತಲೂ ಅಧಿಕ ಕೋವಿಡ್ ಡೋಸ್ ಗಳು ಲಭ್ಯವಿದೆ. ಈ ನಿಟ್ಟಿನಲ್ಲಿ ನಾನು ಎಲ್ಲಾ ವಯಸ್ಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ, ಆದಷ್ಟು ಶೀಘ್ರವಾಗಿ ಲಸಿಕೆ ಪಡೆದುಕೊಳ್ಳಿ. ಕೋವಿಡ್ ಲಸಿಕೆ ಪಡೆಯಲು ಜನರು ನಿರಾಸಕ್ತಿ ತೋರಿಸುತ್ತಿರುವುದು ಭಾರತಕ್ಕೆ ಕೋವಿಡ್ ವಿರುದ್ಧದ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ಪೂನಾವಾಲಾ ಹೇಳಿದ್ದಾರೆ.
ಸೀರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸುಮಾರು ಶೇ.90ರಷ್ಟು ಲಸಿಕೆಯನ್ನು ಉತ್ಪಾದಿಸಿದೆ. ದೇಶಾದ್ಯಂತ ಈಗಾಗಲೇ 1.24 ಬಿಲಿಯನ್ ನಷ್ಟು ಕೋವಿಡ್ ಲಸಿಕೆ ನೀಡಲಾಗಿದೆ. ನಾವು ಲಸಿಕೆಯನ್ನು ವಿತರಣೆ ಮಾಡಿದ ನಂತರವೂ ದೇಶದಲ್ಲಿ 944 ಮಿಲಿಯನ್ ವಯಸ್ಕರು ಮಾತ್ರ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಇದರಲ್ಲಿ ಬಹುತೇಕ ಮಂದಿ ಕೋವಿಡ್ ಸೋಂಕು ಪ್ರಕರಣ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎರಡನೇ ಡೋಸ್ ಪಡೆಯಲಿಲ್ಲ ಎಂದು ತಿಳಿಸಿದ್ದಾರೆ. ಶೇ.80ರಷ್ಟು ವಯಸ್ಕರು ಕನಿಷ್ಠ ಒಂದು ಕೋವಿಡ್ ಲಸಿಕೆಯನ್ನಾದರೂ ಪಡೆದಿದ್ದಾರೆ ಎಂದು ವರದಿ ಹೇಳಿದೆ.