11 ರಂದು ಬೂತ್ ಮಟ್ಟದಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಪ್ರಯತ್ನ ಮಾಡಬೇಕು ಎಂದು ಜಿಪಂ ಸಿಇಒ ಪಿ.ಎನ್. ರವೀಂದ್ರ
ಹೇಳಿದರು.
Advertisement
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಎರಡನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾ. 11 ರಂದು ನಗರ, ಪಟ್ಟಣ ಹಾಗೂ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ ಕೆಜಿ, ಯುಕೆಜಿ ಮಕ್ಕಳನ್ನು ಭಾನುವಾರ ತಪ್ಪದೇ ಶಾಲೆಗೆ ಕರೆ ತಂದು ಶಿಕ್ಷಕರು ಸಹ ಹಾಜರಿದ್ದು, ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕು ಎಂದರು.
ಅರ್ಹ ಮಕ್ಕಳಿಗೆ ಲಸಿಕೆ ನೀಡಲು ಅವರು ಸೂಚನೆ ನೀಡಿದರು. ಮಾರ್ಚ್ 12, 13, 14 ರಂದು ಮನೆ ಮನೆಗಳಿಗೆ ಭೇಟಿ ನೀಡಿ
ಲಸಿಕೆಯಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಲು ಅಂಗನವಾಡಿ, ಆಶಾ ಕಾರ್ಯಕರ್ತೆರಿಗೆ ಸೂಚನೆ ನೀಡಬೇಕು. ಲಸಿಕೆ ಹಾಕಲಾದ ಮಕ್ಕಳಿಗೆ ಅಳಿಸಲಾರದಂತಹ ಶಾಯಿಯಿಂದ ಗುರುತು ಹಾಕುವುದು ಕಡ್ಡಾಯವಾಗಿ ಮಾಡಬೇಕೆಂದು ತಿಳಿಸಿದರು. ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಮತ್ತಿತರ ಕಡೆ ದುಡಿಯಲು ಕೂಲಿಗಾಗಿ ಬಂದಿರುವ ಜನರ ಜೊತೆಗಿರುವ 5 ವರ್ಷದೊಳಗಿನ ಮಕ್ಕಳನ್ನು ಗುರುತಿಸುವುದು ಹಟ್ಟಿ, ತಾಂಡಾ ಹಾಗೂ ಕೊಳಚೆ ಪ್ರದೇಶಗಳಲ್ಲಿ ವಾಸವಾಗಿರುವ ಮಕ್ಕಳನ್ನು ಅದ್ಯತೆ ಮೇಲೆ ಸಂಚಾರಿ ಲಸಿಕಾ ವಾಹನಗಳ ಮೂಲಕ ಪಲ್ಸ್ ಪೋಲಿಯೋ ಲಸಿಕೆ ನೀಡುವ ಬಗ್ಗೆ ಗಮನ ಹರಿಸಲಾಗುತ್ತದೆ ಎಂದರು.
Related Articles
ಅರ್ಹ ಮಕ್ಕಳಿಗೆ ಲಸಿಕೆ ನೀಡುವ ಮೂಲಕ ವಿಶೇಷ ಸಾಧನೆ ಮಾಡಬೇಕೆಂದು ಸಿಇಒ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರೋಗ್ಯ ಇಲಾಖೆ ಅಧಿಕಾರಿ ಡಾ|ಕುಮಾರಸ್ವಾಮಿ ಮಾತನಾಡಿ, ಮಾ 9 ಮತ್ತು 10ರಂದು ಚಿತ್ರದುರ್ಗ ನಗರದಲ್ಲಿ ಪಲ್ಸ್ ಪೋಲಿಯೋ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು. ಉಪವಿಭಾಗಾಧಿ ಕಾರಿ ವಿಜಯ್ ಕುಮಾರ್, ಜಿಲ್ಲಾ ಮಲೇರಿಯಾ
ನಿಯಂತ್ರಣಾಧಿ ಕಾರಿ ಡಾ| ಜಯಮ್ಮ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಜೆ. ಅಂಥೋಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ, ಜಿಲ್ಲಾಮಟ್ಟದ ಅಧಿಕಾರಿಗಳು, ವೈದ್ಯರು ಇದ್ದರು.
Advertisement