ಕೋಲಾರ: ಪಶುಪಾಲನಾ ಇಲಾಖೆ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ಅಭಿಯಾನ ಕೈಗೊಂಡಿದ್ದು, ರೈತರು ತಪ್ಪದೇ ತಮ್ಮ ರಾಸುಗಳಿಗೆ ಲಸಿಕೆ ಹಾಕಿಸುವ ಮೂಲಕ ಹೈನೋದ್ಯಮದ ರಕ್ಷಣೆಗೆ ಒತ್ತು ನೀಡಿ ಎಂದು ಪಶು ವೈದ್ಯಾಧಿಕಾರಿ ಡಾ.ಎಸ್.ವಿ. ಶ್ರೀನಿವಾಸಗೌಡ ಸಲಹೆ ನೀಡಿದರು.
ಕೋವಿಡ್ ಸಂಕಷ್ಟದ ನಡುವೆಯೂ ಪಶು ಪಾಲನಾ ಇಲಾಖೆ ಜಾನುವಾರುಗಳಿಗೆ ಕಾಲು ಬಾಯಿ ಜ್ವರ ಲಸಿಕೆ ಅಭಿಯಾನ ಕೈಗೊಂಡಿದ್ದು,ತಾಲೂಕಿನ ಚಿಟ್ನಹಳ್ಳಿಯಲ್ಲಿ ಒಂದೇ ದಿನ 5 ಸಾವಿರಕ್ಕೂ ಹೆಚ್ಚು ದನಕರು ಗಳಿಗೆ ಲಸಿಕೆ ಹಾಕಿ ಮಾತನಾಡಿದರು.
ಸಕಾಲಕ್ಕೆ ಲಸಿಕೆ ಹಾಕಿಸಿ: ಕಾಲುಬಾಯಿ ಜ್ವರ ಮಾರಕ ರೋಗವಾದರೂ, ಸಕಾಲಕ್ಕೆ ಲಸಿಕೆ ಹಾಕಿಸಿದಲ್ಲಿ ಜಾನುವಾರುಗಳನ್ನು ರೋಗ ಮತ್ತು ಸಾವಿನಿಂದ ತಡೆಯಬಹು ದಾಗಿದೆ. ರೈತರಿಗೆ ನಷ್ಟ ತಪ್ಪಿಸಲು ಪಶುಪಾಲನಾ ಇಲಾಖೆ ಲಸಿಕಾ ಅಭಿಯಾನ ಕೈಗೊಂಡಿದ್ದು, ಯಾವುದೇ ಮೂಢ ನಂಬಿಕೆ ಗಳಿಗೆ ಒಳಗಾಗದೇ ರೈತರು ಜಾನುವಾರು ಗಳಿಗೆ ಲಸಿಕೆ ಹಾಕಿಸಲು ಮನವಿ ಮಾಡಿದರು.
ಕೃಷಿ ಉತ್ಪನ್ನಗಳು ಎಷ್ಟೇ ಉತ್ತಮ ಬೆಳೆಯಾದರೂ ಬೆಲೆ ಕುಸಿತದ ಸಂಕಷ್ಟ ಎದು ರಾಗುತ್ತದೆ. ಇಲ್ಲವೇ ಅತಿವೃಷ್ಟಿ, ಅನಾವೃಷ್ಟಿ ನಡುವೆ ರೋಗಗಳ ಬಾಧೆಯೂ ಎದುರಾಗಿ ಲಾಭಾಂಶ ಕುಸಿತವಾಗುವ ಸಾಧ್ಯತೆ ಇರು ತ್ತದೆ. ಆದರೆ ಹೈನೋದ್ಯಮ ರೈತರ ಆರ್ಥಿ ಕತೆಗೆ ನೆರವಾಗಿದ್ದು, ಪ್ರತಿ 15 ದಿನಕ್ಕೊಮ್ಮೆ ಹಣ ನೋಡಬಹುದಾಗಿದೆ. ಆದ್ದರಿಂದ ರೈತರು ರಾಸುಗಳ ಆರೋಗ್ಯ ರಕ್ಷಣೆಗೆಒತ್ತು ನೀಡಬೇಕು. ರೋಗ ಬರುವ ಮುನ್ನಾ ಎಚ್ಚರ ವಹಿಸಬೇಕು ಎಂದು ಹೇಳಿದರು.
ಕೋವಿಡ್ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದೆ, ಇಂತಹ ಸಂಕಷ್ಟದಲ್ಲಿ ವೈದ್ಯರು ತಮ್ಮ ಆರೋಗ್ಯ ಪಣಕ್ಕಿಟ್ಟು, ರಾಸುಗಳ ರಕ್ಷಣೆಗೆ ಮುಂದಾಗಿದ್ದಾರೆ. ರೈತರು ಎಚ್ಚರಿಕೆ ವಹಿಸಿ ತಮ್ಮ ರಾಸುಗಳಿಗೆ ಲಸಿಕೆ ಹಾಕಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಚಿಟ್ನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ 5000 ಕ್ಕೂ ಹೆಚ್ಚು ದನಕರುಗಳಿಗೆ ಕಾಲುಬಾಯಿ ಲಸಿಕೆ ಹಾಕಲಾಯಿತು. ಈ ಲಸಿಕಾ ಅಭಿಯಾನ ದಲ್ಲಿ ಮೇಲ್ ಗಿರಿಯಪ್ಪ, ಮಜರ್, ದೇವರಾಜ್, ಸಿಬ್ಬಂದಿ ರಹ್ಮಾನ್, ಶೆಟ್ಟಿವಾರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮಂಜುನಾಥ್, ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ನಾರಾಯಣ ಸ್ವಾಮಿ, ಸಿಬ್ಬಂದಿ ರೆಹಮಾನ್, ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ನಾರಾಯಣ ಸ್ವಾಮಿ, ರೈತರಾದ ಸಿ.ಎಲ್. ಪುರುಷೋತ್ತಮ್, ಸಿ.ಬಿ.ಆನಂದ್, ಪಶುಪಾಲನಾ ಇಲಾಖೆಯ ಪಿ.ಎಂ.ಮಂಜು ಮತ್ತಿತರರು ಹಾಜರಿದ್ದರು.