ಎಲ್ಲ ವಯಸ್ಕರು ಮೇ 1ರಿಂದ ದೇಶದಲ್ಲಿ ಲಸಿಕೆ ಪಡೆಯಲಿದ್ದಾರೆ. ಇದರ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಇದು ಕೋವಿಡ್‌ನ ಎರಡನೇ ಅಲೆಯನ್ನು ತಡೆಯಲು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಅಲ್ಲದೆ ದೇಶದಲ್ಲಿ ಬಿಗಡಾಯಿಸುತ್ತಿರುವ ಪರಿಸ್ಥಿತಿಗೂ ಪರಿಹಾರ ಒದಗಿಸಲಿದೆ ಎಂಬ ನಿರೀಕ್ಷೆ ಸರಕಾರದ್ದು. ಆದರೆ ಲಸಿಕೆ ಸ್ವೀಕಾರ ಕುರಿತು ಜನರಲ್ಲಿ ಇನ್ನೂ ಗೊಂದಲವಿದೆ. ಈ ಗೊಂದಲಗನ್ನು ಬಗೆಹರಿಸಲು ತಜ್ಞರು ಈಗಾಗಲೇ ಪ್ರಯತ್ನಿಸಿದ್ದಾರೆ. ಆದರೂ ಸಂಪೂರ್ಣ ಬಗೆಹರಿದಿಲ್ಲ. ಈ ಹಿನ್ನೆಲೆಯಲ್ಲಿ ಲಸಿಕೆ ನೀಡಿಕೆ ಪ್ರಕ್ರಿಯೆ ಕುರಿತು ಒಂದಿಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ.
ಆಸ್ಪತ್ರೆಯಿಂದ ನೇರ ಲಸಿಕೆ ಪಡೆಯಬಹುದೇ?
ಇಲ್ಲ. ಇದಕ್ಕಾಗಿ ಕೇಂದ್ರ ಸರಕಾರ ನೋಂದಣಿಯನ್ನು ಕಡ್ಡಾಯಗೊಳಿ ಸಿದೆ. ಆರೋಗ್ಯ ಸೇತು ಆ್ಯಪ್ಲಿಕೇಶನ್ ಅಥವಾ ಕೋವಿನ್ ಪೋರ್ಟಲ್‌ನಲ್ಲಿ (