Advertisement

ಮಲಾಡ್‌, ಸಾಂತಾಕ್ರೂಜ್‌ ನಿರಂಕರಿ ಭವನಗಳಲ್ಲಿ  ಲಸಿಕೆ ಕೇಂದ್ರ ಪ್ರಾರಂಭ

07:44 PM May 25, 2021 | Team Udayavani |

ಮುಂಬಯಿ: ಸಂತ ನಿರಂಕರಿ ಮಿಷನ್‌ ಸಾಂತಾಕ್ರೂಜ್‌ನಲ್ಲಿರುವ ಸತ್ಸಂಗ್‌ ಭವನದಲ್ಲಿ ಕೋವಿಡ್‌ ಲಸಿಕೆ ಕೇಂದ್ರವನ್ನು ಮುಂಬಯಿ ಮಹಾನಗರ ಪಾಲಿಕೆ ಲಭ್ಯಗೊಳಿಸಿದೆ. ಮೇ 20ರಂದು ಮಲಾಡ್‌ ಪೂರ್ವದ ಕುರಾರ್‌ ಗ್ರಾಮದ ಸಂತ ನಿರಂಕರಿ ಸತ್ಸಂಗ ಭವನದಲ್ಲಿ ಲಸಿಕೆ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಮೊದಲ ದಿನವೇ 74 ನಾಗರಿಕರಿಗೆ ಬಿಎಂಸಿ ಲಸಿಕೆ ನೀಡಿದೆ.

Advertisement

ಕೇಂದ್ರವನ್ನು ಶಾಸಕ ಮನೋಜ್‌ ಕೋಟಕ್‌ ಉದ್ಘಾಟಿಸಿದರು. ಈ ಸಂದರ್ಭದಲ್ಲಿ  ಸ್ಥಳೀಯ ಕೌನ್ಸಿಲರ್‌ ವಿನೋದ್‌ ಮಿಶ್ರಾ, ಸಂತ ನಿರಂಕರಿ ಮಂಡಲದ ವಲಯ ಸಂಯೋಜಕರಾದ ಶಂಭುನಾಥ ತಿವಾರಿ ಮತ್ತು ಆರೋಗ್ಯ ಇಲಾಖೆಯ ಡಾ| ರುತುಜಾ ಬಾವಸ್ಕರ್‌ ಉಪಸ್ಥಿತರಿದ್ದರು. ನಿರಂಕರಿ ಭವನ ದಲ್ಲಿ ಸ್ಥಳಾವಕಾಶ ಕಲ್ಪಿಸಿದ್ದಕ್ಕಾಗಿ ಶಾಸಕ ಮತ್ತು ಕಾರ್ಪೊರೇಟರ್‌ ಸಂತ ನಿರಂಕರಿ ಮಂಡಲಕ್ಕೆ ಧನ್ಯವಾದ ಅರ್ಪಿಸಿದರು. ಎರಡನೇ ಕೇಂದ್ರವನ್ನು ಮೇ 21ರಂದು ಸಂತ ನಿರಂಕಾರಿ ಸತ್ಸಂಗ್‌ ಭವನ, ದಾವರಿ ನಗರದಲ್ಲಿ  ಪ್ರಾರಂಭಿಸಲಾಗಿದೆ.

ಈ ಸಂದರ್ಭದಲ್ಲಿ ಶಿವಸೇನೆ ಮಹಿಳಾ ಶಾಖೆಯ ಮುಖ್ಯಸ್ಥೆ ನಂದಾ ಶಿಂಧೆ ಮತ್ತು ಮಂಡಳಿಯ ಸ್ಥಳೀಯ ವ್ಯವಸ್ಥಾಪಕರು ಉಪಸ್ಥಿತರಿದ್ದರು. ಸಂತ ನಿರಂಕರಿ ಮಿಷನ್‌ನ ನಿಸ್ವಾರ್ಥ ಕಾರ್ಯವನ್ನು ಗಣ್ಯರು ಶ್ಲಾಘಿಸಿದರು. ಇದಕ್ಕೂ ಮುನ್ನ ಮೇ 14ರಂದು ಚೆಂಬೂರಿನ ಮಹುಲ್‌ ರಸ್ತೆಯ ಸಂತ ನಿರಂಕರಿ ಸತ್ಸಂಗ್‌ ಭವನದಲ್ಲಿ ಲಸಿಕೆ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಬಿಎಂಸಿಯ ಯೋಜನೆಯ ಪ್ರಕಾರ ಈ ಎಲ್ಲ ಲಸಿಕೆ ಕೇಂದ್ರಗಳು ನಿಯಮಿತವಾಗಿ ಕಾರ್ಯನಿರ್ವಹಿಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next