ಮಣಿಪಾಲ : ಪ್ರಸ್ತುತ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ, ಡಾ. ಟಿ ಎಮ್ ಎ ಪೈ ಆಸ್ಪತ್ರೆ, ಉಡುಪಿ ಮತ್ತು . ಟಿ ಎಮ್ ಎ ಪೈ ರೋಟರಿ ಆಸ್ಪತ್ರೆ, ಕಾರ್ಕಳದಲ್ಲಿ ಕೋವಿಡ್ ಲಸಿಕೆಯು ಲಭ್ಯವಿರುವುದಿಲ್ಲಎಂದು ಆಸ್ಪತ್ರೆಗಳ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಸ್ವ್ಯಾಬ್ ಕಲಕ್ಷನ್ಗೆ ಬಂದ ಆರೋಗ್ಯ ಸಿಬ್ಬಂದಿ ಮೇಲೆ ಅವಾಜ್ ಹಾಕಿದ ವ್ಯಕ್ತಿ
ಸಾರ್ವಜನಿಕರಿಗೆ ಮಾಹಿತಿ ನೀಡಿದ ಆಸ್ಪತ್ರೆಗಳ, ಲಸಿಕೆ ಲಭ್ಯತೆ ಕುರಿತು ತಿಳಿದುಕೊಂಡು ಲಸಿಕೆಗಾಗಿ ಆಸ್ಪತ್ರೆಗೆ ಬರುವುದರಿಂದ ಸಾರ್ವಜನಿಕರು ತಮಗಾಗುವ ಅನಾನುಕೂಲತೆಯನ್ನು ತಪ್ಪಿಸಬಹುದು. ಬರುವ ಜೂನ್ 1ರ ನಂತರ ಲಸಿಕೆ ದೊರೆಯುವ ಸಾಧ್ಯತೆ ಇದೆ. ಲಸಿಕೆ ಸಾರ್ವಜನಿಕರಿಗೆ ದೊರಕುವಂತಾಗಲು ನಾವು ನೇರವಾಗಿ ಕಂಪನಿಯಿಂದ ಖರೀದಿಯ ಪ್ರಯತ್ನದಲ್ಲಿದ್ದೇವೆ. ಲಸಿಕೆ ಲಭ್ಯತೆ ಕುರಿತು ಸಾರ್ವಜನಿಕರಿಂದ ತುಂಬಾ ಕರೆಗಳು ಬರುತ್ತಿವೆ. ಒಮ್ಮೆ ಲಭ್ಯವಾದ ನಂತರ ಸಾರ್ವಜನಿಕರಿಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದೆ.
ಇನ್ನು, ಲಸಿಕೆ ಲಭ್ಯತೆಯನ್ನು ತಿಳಿದುಕೊಂಡು ಆಸ್ಪತ್ರೆಗೆ ಬನ್ನಿ ಎಂದು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಡಾ ಅವಿನಾಶ ಶೆಟ್ಟಿ, ಡಾ ಟಿ ಎಮ್ ಎ ಪೈ ಆಸ್ಪತ್ರೆ, ಉಡುಪಿಯ ಡಾ. ಶಶಿಕಿರಣ್ ಉಮಾಕಾಂತ್, ಡಾ. ಟಿ ಎಂ ಎ ಪೈ ರೋಟರಿ ಆಸ್ಪತೆ, ಕಾರ್ಕಳದ ಡಾ. ಕೀರ್ತಿನಾಥ ಬಲ್ಲಾಳ ಮನವಿ ಮಾಡಿಕೊಂಡಿದ್ದಾರೆ.
ಆಸ್ಪತ್ರೆಗಳ ದೂರವಾಣಿ ಸಂಖ್ಯೆಗಳು :
ಕಸ್ತೂರ್ಬಾ ಆಸ್ಪತೆ, ಮಣಿಪಾಲ: 0820 2922761
ಡಾ. ಟಿ ಎಂ ಎ ಪೈ ಆಸ್ಪತೆ, ಉಡುಪಿ : 08202942126
ಡಾ. ಟಿ ಎಂ ಎ ರೋಟರಿ ಪೈ ಆಸ್ಪತೆ, ಕಾರ್ಕಳ : 08258230583
ಇದನ್ನೂ ಓದಿ : ಕೋವಿಡ್ ಆಸ್ಪತ್ರೆಯಲ್ಲಿ ಆರೈಕೆ ಸಿಗದ್ದಕ್ಕೆ ಸಿಡಿದೆದ್ದ ಸೋಂಕಿತರು