Advertisement

ವರ್ಷಾಂತ್ಯದೊಳಗೆ ಲಸಿಕೆ ಲಭ್ಯ: ಆರೋಗ್ಯ ಸಂಸ್ಥೆ

04:34 PM Jun 27, 2020 | sudhir |

ಲಂಡನ್‌: ಪ್ರಪಂಚಾದ್ಯಂತ ಔಷಧ ಸಂಶೋಧನಾ ಸಂಸ್ಥೆಗಳು ಕೋವಿಡ್‌ ಲಸಿಕೆ ಸಂಶೋಧನೆಯಲ್ಲಿ ತೊಡಗಿರುವ ಉದು ಗೊತ್ತಿರುವ ವಿಚಾರವೇ ಸರಿ. ಕೆಲವು ಪರೀಕ್ಷೆಗಳು ಮಾನವ ಪ್ರಯೋಗದ ಹಂತದವರೆಗೆ ಬಂದು ನಿಂತಿದೆ. ಆದರೆ ಇವುಗಳ ತಯಾರಿಕೆ ಹಾಗೂ ಪ್ರಯೋಗ ಮುಗಿದು ಜನರಿಗೆ ತಲುಪಲು ಹಲವಾರು ಸಮಯಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ತಿಳಿಸಿದ್ದಾರೆ.

Advertisement

ಔಷಧಗಳು ಯಾವತ್ತೂ ಜನರ ಆರೋಗ್ಯವನ್ನು ಉತ್ತಮ ಪಡಿಸಬೇಕು. ಕೋವಿಡ್‌ ಸೋಂಕಿನಿಂದ ಸದ್ಯ ಬಚಾವಾಗಲು ಹೆಚ್ಚು ಡೋಸೇಜ್‌ನ ಲಸಿಕೆಗಳನ್ನು ನೀಡಲಾಗುವುದಿಲ್ಲ. ಅದರಿಂದ ಯಾವುದೇ ಸೈಡ್‌ ಎಫೆಕ್ಟ್ ಗಳಿಲ್ಲದೆ ಜನರು ಬಳಸುವಂತಾಗಬೇಕು. ಅಂತಹ ಲಸಿಕೆ ತಯಾರಿಗೆ ಸಮಯ ಹಿಡಿಯುತ್ತದೆ. ಅಲ್ಲಿಯವರೆಗೆ ಜನರು ಸರಕಾರಗಳ ನಿಯಮವನ್ನು ಪಾಲಿಸುತ್ತಾ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next