Advertisement

ತೆರೆದ ಲಸಿಕಾ ಬಾಟಲಿಗಳನ್ನು ಬಳಸದಂತೆ ಸರ್ಕಾರಿ ಮಾರ್ಗಸೂಚಿ ಬಿಡುಗಡೆ

08:44 AM Dec 29, 2021 | Team Udayavani |

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ತೆರೆದ ವೈಯಲ್ ಬಳಸುವುದರಿಂದ ಲಸಿಕೆಗಳ ಪರಿಣಾಮ ಕಡಿಮೆಯಾಗಬಹುದು ಎಂಬ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಒಮ್ಮೆ ತೆರೆದ ಲಸಿಕೆಯ ಬಾಟಲಿ ಮರುಬಳಕೆ ಮಾಡಬಾರದು. ರೂಮ್ ಉಷ್ಣಂಶದಲ್ಲಿ ಕೇವಲ 6 ಗಂಟೆ ಮಾತ್ರ ಸಂಗ್ರಹಿಸಬಹುದು.

Advertisement

ಬಾಟಲಿ ತೆರೆದ 4 ಗಂಟೆಯೊಳಗೆ ಬಳಸುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗದರ್ಶಿ ಸೂತ್ರಗಳಲ್ಲಿ ಹೊರಡಿಸಿದೆ. ಒಮ್ಮೆ ತೆರೆದ ಬಾಟಲಿಯನ್ನು 4 ಗಂಟೆ ಬಳಿಕ ಬಳಸದಂತೆ ನಿರ್ದೇಶನ ನೀಡಲಾಗಿದೆ. ತೆರೆದ ಲಸಿಕಾ ಬಾಟಲಿಗಳನ್ನು ನೀತಿ ಅನುಸರಿಸದಂತೆ ಖಾಸಗಿ ಆಸ್ಪತ್ರೆಗಳಗೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಕೋವಾಕ್ಸಿನ್ ಲಸಿಕೆಗೆ ಓಪನ್-ವೈಯಲ್ ನೀತಿಯನ್ನು ಅನುಮತಿಸಲು ಆಗುವುದಿಲ್ಲ ಕೇಂದ್ರ ಸರ್ಕಾರವು ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟನೆ ನೀಡಿತ್ತು. ಅದರಂತೆ ಬಾಟಲಿ ನೀತಿ ಅನುಸರಿಸದಂತೆ ಖಾಸಗಿ ಆಸ್ಪತ್ರೆಗಳಗೆ ನಿರ್ಬಂಧ ವಿಧಿಸಲಾಗಿದೆ.

ಈ ಹಿಂದೆ ಕೋವಾಕ್ಸಿನ್ ತಯಾರಕ ಭಾರತ್ ಬಯೋಟೆಕ್ ಒಪನ್ ಬಾಟಲ್ ಸ್ಥಿರತೆ ಹಾಗು ಬಳಕೆ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿತ್ತು. ಈ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಒಮ್ಮೆ ತೆರೆದ ಕೋವಾಕ್ಸಿನ್ ಬಾಟಲಿಗಳನ್ನು 2ರಿಂದ 8 ಡಿಗ್ರಿ ಉಷ್ಣಾಂಶದಲ್ಲಿ ಸಂಗ್ರಹಿಸಿದರೆ 28 ದಿನಗಳವರೆಗೆ ಬಳಸಬಹುದು ಎಂಬ ಮಾಹಿತಿ ಇತ್ತು. ಒಂದು ವೇಳೆ ಬಾಟಲಿಯಲ್ಲಿ ಲಸಿಕೆಯು ಉಳಿದರೆ ತಕ್ಷಣ ಅಥವಾ ಪ್ರತಿರಕ್ಷಣೆ ಅವಧಿಯ ಕೊನೆಯಲ್ಲಿ ತಿರಸ್ಕರಿಸಬೇಕಾಗಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿತ್ತು.

ಭಾರತ್ ಬಯೊಟೆಕ್ ನೀಡಿದ್ದ ಮಾರ್ಗದರ್ಶಿ ಸೂತ್ರದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಕೇಂದ್ರ ಆರೋಗ್ಯ ಇಲಾಖೆಗೆ ಸ್ಪಷ್ಟನೆ ಕೇಳಿತ್ತು. ಲಸಿಕೆಯ ಸೀಸೆಯು ನಿಗಾವಣೆ ಇರದಿದ್ದರೆ ಗುಣಮಟ್ಟದ ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿದ ಹಿನ್ನೆಲೆಯಲ್ಲಿ ತೆರೆದ ಬಾಟಲಿ ನೀತಿ ಅನುಸರಿಸದಂತೆ ಖಾಸಗಿ ಆಸ್ಪತ್ರೆಗಳಗೆ ರಾಜ್ಯ ಸರ್ಕಾರವು ಸುತ್ತೋಲೆಯಲ್ಲಿ ಸೂಚಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next