Advertisement
ರಾಜ್ಯ ಸರಕಾರದ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ಮಕ್ಕಳಿಗೆ ಲಸಿಕೆ ನೀಡಲು ಸಿದ್ಧ ವಾಗಿವೆ. ಮಕ್ಕಳ ಪೋಷಕರ ಮೊಬೈಲ್ ನಂಬರ್ ಮೂಲಕ ನೋಂದಣಿ ಮಾಡಲಾಗುತ್ತಿದೆ. ಇದು ಸಾಧ್ಯವಾಗದ ಕಡೆಯಲ್ಲಿ ಮುಖ್ಯೋಪಾಧ್ಯಾಯರ ದೂರವಾಣಿ ಸಂಖ್ಯೆ ಮೂಲಕ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಶಾಲೆಯ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಬಳಸಿ ಪೋಟೋ ಐಡಿಯನ್ನು ಕೋವಿನ್ ಪೋರ್ಟಲ್ ಮೂಲಕ ದಾಖಲಿಸಲಾಗಿದೆ.
ರಾಜ್ಯದಲ್ಲಿ 15-18 ವರ್ಷದೊಳಗಿನ ಅತ್ಯಧಿಕ ವಿದ್ಯಾರ್ಥಿಗಳನ್ನು ಹೊಂದಿರುವ ಪಟ್ಟಿಯಲ್ಲಿ ಬಿಬಿಎಂಪಿ ಮೊದಲ ಸ್ಥಾನದಲ್ಲಿದ್ದು 4.42 ಲಕ್ಷ ವಿದ್ಯಾರ್ಥಿಗಳನ್ನು ಹೊಂದಿದೆ. ಬೆಳಗಾವಿ 2.47 ಲಕ್ಷ, ಬಳ್ಳಾರಿ 1.64ಲಕ್ಷ, ಕಲಬುರಗಿ 1.59 ಲಕ್ಷ, ಮೈಸೂರು 1.47 ಲಕ್ಷ, ವಿಜಯಪುರ 1.23 ಲಕ್ಷ, ತುಮಕೂರು 1.22 ಲಕ್ಷ, ರಾಯಚೂರು 1.14, ಬೀದರ್ 1.5 ಲಕ್ಷ, ದ.ಕ. 1.1 ಲಕ್ಷ, ಬಾಗಲಕೋಟೆಯಲ್ಲಿ 1 ಲಕ್ಷ ವಿದ್ಯಾರ್ಥಿಗಳಿದ್ದಾರೆ. ದಾವಣಗೆರೆ, ಉಡುಪಿ, ಉತ್ತರ ಕನ್ನಡ, ಯಾದಗಿರಿ ಸಹಿತ ಉಳಿದ ಜಿಲ್ಲೆಯಲ್ಲಿ 40,000ದಿಂದ 88,000 ಫಲಾನುಭವಿಗಳಿದ್ದಾರೆ.
Related Articles
ಬೂಸ್ಟರ್ ಡೋಸ್ ಪಡೆಯಲು ಅರ್ಹತೆಯುಳ್ಳ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು ಇತರ ಕಾಯಿಲೆಗಳಿಂದ ನರಳುತ್ತಿರುವ 60 ವರ್ಷ ಮೇಲ್ಪಟ್ಟವರ ಮೊಬೈಲ್‌ಗೆ ಬೂಸ್ಟರ್ ಡೋಸ್ ಕುರಿತ ಸಂದೇಶ ಬರಲಿದೆ. ಇದನ್ನು ನೋಡಿಕೊಂಡು ಅವರು ಲಸಿಕೆ ಪಡೆಯಬಹುದಾಗಿದೆ.
Advertisement
145 ಕೋಟಿ ಡೋಸ್ ಲಸಿಕೆ!ಲಸಿಕೆ ವಿತರಣೆಯಲ್ಲಿ ದೇಶ ಮತ್ತೂಂದು ಮೈಲುಗಲ್ಲು ಸಾಧಿಸಿದೆ. ಶುಕ್ರವಾರದ ವರೆಗೆ 145 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರಲ್ಲದೆ, ಸಹಕರಿಸಿದ ಎಲ್ಲ ವೈದ್ಯರು, ಆರೋಗ್ಯ ಸಿಬಂದಿಗೆ ಧನ್ಯವಾದ ಹೇಳಿದ್ದಾರೆ. ಜ.16ರಂದು ದೇಶದಲ್ಲಿ ಲಸಿಕಾ ಅಭಿಯಾನ ಆರಂಭಿಸಲಾಗಿತ್ತು. ಫೆ.19ಕ್ಕೆ ಒಂದು ಕೋಟಿ, ಎಪ್ರಿಲ್ 11ಕ್ಕೆ 10 ಕೋಟಿ, ಜೂನ್ 12ಕ್ಕೆ 25 ಕೋಟಿ, ಆ.6ಕ್ಕೆ 50 ಕೋಟಿ, ಸೆ.13ಕ್ಕೆ 75 ಕೋಟಿ ಹಾಗೂ ಅ.20ಕ್ಕೆ 100 ಕೋಟಿ ಡೋಸ್ ಲಸಿಕೆ ನೀಡಲಾಗಿತ್ತು. ಸದ್ಯ ಜಗತ್ತಿನಲ್ಲಿ ಚೀನ ಮೊದಲ ಸ್ಥಾನದಲ್ಲಿದೆ. ಇಲ್ಲಿ 280 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ. ಭಾರತ 2ನೇ ಸ್ಥಾನದಲ್ಲಿದ್ದು, 145 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. 50 ಕೋಟಿ ಡೋಸ್ ಲಸಿಕೆ ನೀಡಿರುವ ಅಮೆರಿಕ 3ನೇ ಸ್ಥಾನದಲ್ಲಿದೆ.