Advertisement

11ರಿಂದ ಲಸಿಕಾ ಅಭಿಯಾನ

11:22 AM Dec 06, 2019 | Team Udayavani |

ಬಾಗಲಕೋಟೆ: ರಾಜ್ಯದಲ್ಲಿ ಡಿಫ್ತೀರಿಯಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಡಿ. 11ರಿಂದ 31ರವರೆಗೆ 5 ರಿಂದ 6 ವರ್ಷದ ಮಕ್ಕಳಿಗೆ ಡಿಪಿಟಿ ಲಸಿಕೆ ಹಾಗೂ 7ರಿಂದ 16 ವರ್ಷದ ಮಕ್ಕಳಿಗೆ ಟಿಡಿ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ.ರಾಜೇಂದ್ರ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಲಸಿಕಾ ಅಭಿಯಾನದ ಕುರಿತು ಡಿಪಿಎಫ್‌ಐ ಸಭೆಯಲ್ಲಿ ಮಾತನಾಡಿದರು. ಡಿಫ್ತೀರಿಯಾ ರೋಗದ ತೀವ್ರತೆಯ ಪ್ರಮಾಣದ ಜಿಲ್ಲೆಗಳಲ್ಲಿ ಬಾಗಲಕೋಟೆ ಒಂದಾಗಿದ್ದು, 5 ರಿಂದ 16 ವಯಸ್ಸಿನ ಎಲ್ಲ ಮಕ್ಕಳನ್ನು ಅಭಿಯಾನದ ವ್ಯಾಪ್ತಿಗೆ ಒಳಪಡಿಸಲಾಗುತ್ತಿದೆ. 1ನೇ ತರಗತಿ ಮಕ್ಕಳಿಗೆ ಡಿಪಿಟಿ ಲಸಿಕೆಯನ್ನು ಹಾಗೂ 2ರಿಂದ 10ನೇ ತರಗತಿ ಮಕ್ಕಳಿಗೆ ಟಿಡಿ ಲಸಿಕೆಯನ್ನು ನೀಡಲಾಗುತ್ತಿದ್ದು, ಯಾವ ಮಕ್ಕಳು ಈ ಲಸಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಸೂಚಿಸಿದರು.

ಜಿಲ್ಲಾದ್ಯಂತ 5ರಿಂದ 16 ವರ್ಷದೊಳಗಿನ ಒಟ್ಟು 4,27,196 ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಅದರಲ್ಲಿ 5ರಿಂದ 6 ವರ್ಷದ ಒಟ್ಟು 45358 ಹಾಗೂ 7 ರಿಂದ 16 ವರ್ಷದ ಒಟ್ಟು 381838 ಮಕ್ಕಳಿದ್ದಾರೆ. ಈ ಎಲ್ಲ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳ ಮಕ್ಕಳ ಪಟ್ಟಿಯನ್ನು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿಯನ್ನು ಸಹ ಆರೋಗ್ಯ ಇಲಾಖೆ ನೀಡುವಂತೆ ತಿಳಿಸಿದರು.

ಜಿಲ್ಲೆಯ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಹಾಗೂ ಆಯಾ ಶಾಲೆಯ ಸಿಆರ್‌ಸಿ ಮತ್ತು ಬಿಆರ್‌ಸಿಗಳಿಗೆ ಲಸಿಕೆ ಕುರಿತು ತರಬೇತಿ ನೀಡಬೇಕು. ಸಿಆರ್‌ಸಿ ಮತ್ತು ಬಿಆರ್‌ಸಿಗಳು ತಮ್ಮ ವ್ಯಾಪ್ತಿಯ ಶಾಲಾ ಮುಖ್ಯ ಗುರುಗಳಿಗೆ ಲಸಿಕೆಯಿಂದಾಗ ಪ್ರಯೋಜನ ತಿಳಿಸಿ ಪಾಲಕರಿಗೆ ಮನದಟ್ಟು ಮಾಡಿ ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವ ಕೆಲಸವಾಗಬೇಕು ಎಂದರು.

ಎಸ್‌ಎಂಒ ಡಾ| ಮುಕುಂದ ಗಲಗಲಿ ಸಭೆಗೆ ಮಾಹಿತಿ ನೀಡಿದರು. ಕಸಾಪನ ಜಂಟಿ ನಿರ್ದೇಶಕ ಶಾಸ್ತ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಅನಂತ ದೇಸಾಯಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಎಸ್‌. ಬಿರಾದಾರ, ಬಿ.ಜಿ. ಹುಬ್ಬಳ್ಳಿ, ತಹಶೀಲ್ದಾರ್‌ ಹಿರೇಮಠ, ಅಶೋಕಾನಂದ, ತೇಜಸ್ವಿನಿ ಹಿರೇಮಠ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next