Advertisement

ಲಸಿಕಾ ಅಭಿಯಾನ: ಗುರಿ ಮೀರಿ ಸಾಧನೆ

05:06 PM Jun 23, 2021 | Team Udayavani |

ಬಾಗಲಕೋಟೆ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸರಕಾರದ ನಿರ್ದೇಶನದಂತೆ ಜೂನ್‌ 21 ರಂದು ಜಿಲ್ಲೆಯಾದ್ಯಂತ ವಿಶೇಷ ಲಸಿಕೆ ಅಭಿಯಾನ ಹಮ್ಮಿಕೊಂಡಿದ್ದು, 29263 ಜನರಿಗೆ ಲಸಿಕೆ ಹಾಕುವ ಮೂಲಕ ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ.ರಾಜೇಂದ್ರ ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ವಿಶೇಷ ಲಸಿಕಾ ಅಭಿಯಾನ ಹಮ್ಮಿಕೊಂಡು 25 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆದರೆ ಜಿಲ್ಲೆಯಲ್ಲಿ ಗುರಿ ಮೀರಿ ಹೆಚ್ಚಿನ ಜನರಿಗೆ ಲಸಿಕೆ ನೀಡಲಾಗಿದೆ. ಲಸಿಕಾಕರಣದಲ್ಲಿ ತೊಡಗಿದ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯ ಶ್ಲಾಘಿಸಿದ್ದಾರೆ. ಜೂನ್‌ 21ರಂದು ನೀಡಲಾದ ಒಟ್ಟು 29263 ಲಸಿಕೆಯಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು 28565 ಹಾಗೂ ಕೋವ್ಯಾಕ್ಸಿನ್‌ ಲಸಿಕೆಯನ್ನು 698 ಜನರಿಗೆ ನೀಡಲಾಗಿದೆ. ಅದರಲ್ಲಿ ಮೊದಲನೇ ಡೋಸ್‌ 25469 ಜನರು ಪಡೆದರೆ, ಎರಡನೇ ಡೋಸ್‌ ಲಸಿಕೆಯನ್ನು 3794 ಜನ ಪಡೆದುಕೊಂಡಿದ್ದಾರೆ. ಕೋವಿಶಿಲ್ಡ್‌ ಲಸಿಕೆಯನ್ನು ಆರೋಗ್ಯ ಕಾರ್ಯಕರ್ತರು 51 ಜನ, ಪ್ರಂಟ್‌ಲೆçನ್‌ ವರ್ಕರ್ 331 ಜನ, 18 ರಿಂದ 44 ವರ್ಷದೊಳಗಿನ 16955 ಜನ, 45 ವರ್ಷ ಹಾಗೂ ಅದಕ್ಕೆ ಮೇಲ್ಪಟ್ಟವರು 8611 ಜನ, 60 ವರ್ಷ ಮೇಲ್ಪಟ್ಟವರು 2617 ಜನ ಪಡೆದುಕೊಂಡಿದ್ದಾರೆ ಎಂದರು.

ಅಭಿಯಾನದಲ್ಲಿ ಕೋವ್ಯಾಕ್ಸಿನ್‌ ಲಸಿಕೆ ಪಡೆದ ಒಟ್ಟು 698 ಪೈಕಿ ಆರೋಗ್ಯ ಕಾರ್ಯಕರ್ತರು ಒಬ್ಬರು, ಫ್ರಂಟ್‌ ಲೈನ್‌ವರ್ಕರ್ 7 ಜನ, 45 ವರ್ಷ ಹಾಗೂ ಅದಕ್ಕೆ ಮೇಲ್ಪಟ್ಟವರು 568 ಜನ, 60 ವರ್ಷ ಮೇಲ್ಪಟ್ಟವರು 122 ಜನ ಪಡೆದುಕೊಂಡಿದ್ದಾರೆ. ತಾಲೂಕಾವಾರು ಪ್ರಕಾರ ಜಮಖಂಡಿ ತಾಲೂಕಿನಲ್ಲಿ ಅತೀ ಹೆಚ್ಚು 8676 ಜನ ಲಸಿಕೆ ಪಡೆದರೆ ಅತೀ ಕಡಿಮೆ ಹುನಗುಂದ ತಾಲೂಕಿನಲ್ಲಿ 3903 ಜನ ಪಡೆದುಕೊಂಡಿದ್ದಾರೆ. ಉಳಿದ ಬಾದಾಮಿ ತಾಲೂಕಿನಲ್ಲಿ 5100, ಬಾಗಲಕೋಟೆ ತಾಲೂಕಿನಲ್ಲಿ 5138, ಬೀಳಗಿ ತಾಲೂಕಿನಲ್ಲಿ 1795, ಮುಧೋಳ ತಾಲೂಕಿನಲ್ಲಿ 4604 ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ 47 ಜನಕ್ಕೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next