Advertisement
ತಾಲೂಕಿನಲ್ಲಿ ಕೋವಿಡ್ ಪರಿಸ್ಥಿತಿ ಹೇಗಿದೆ?
Related Articles
Advertisement
ಕೋವಿಡ್ ನಿರ್ವಹಣೆಗೆ ಶಾಸಕರಾಗಿ ಏನೇನುಕೆಲಸ ಮಾಡಿದ್ದೀರಿ?
ವೈಯಕ್ತಿಕವಾಗಿ 10 ಲಕ್ಷ ರೂ. ವೆಚ್ಚದಲ್ಲಿ ಔಷಧಖರೀದಿಸಿದ್ದೇನೆ ಜತೆಗೆ ಆಶಾ ಹಾಗೂ ಅಂಗನವಾಡಿಕಾರ್ಯಕರ್ತೆಯರನ್ನು ಬಳಸಿಕೊಂಡು ರೋಗಲಕ್ಷಣ ಇರುವ ಮತ್ತು ಹೋಮ್ ಐಸೋಲೇಷನ್‌ನಲ್ಲಿದ್ದ ಬಡವರಿಗೆ ಔಷಧ ಕಿಟ್ ವಿತರಿಸಿದ್ದೇನೆ.ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆವೈಯಕ್ತಿಕವಾಗಿ ತಲಾ 25 ಸಾವಿರ ರೂ.ಪರಿಹಾರನೀಡಿದ್ದೇನೆ. ತಾಲೂಕಿನ ಕಗ್ಗೆರೆ ಗ್ರಾಮ, ಅಂಬೇಡ್ಕರ್‌ವಿದ್ಯಾರ್ಥಿ ನಿಲಯದಲ್ಲಿ ಕೋವಿಡ್ ಕೇರ್ ಸೆಂಟರ್‌ಸ್ಥಾಪಿಸಲಾಗಿದೆ.
ಶಾಸಕರ ನಿಧಿಯಿಂದ ಎಷ್ಟು ಹಣ ವ್ಯಯಿಸಿದ್ದಿರಿ?
ಶಾಸಕರ ಅನುದಾನದಡಿ ಗ್ರಾಮಾಂತರ ಪ್ರದೇಶಕ್ಕೆ30 ಲಕ್ಷ ರೂ. ಮೌಲ್ಯದ ಒಂದು ಸುಸಜ್ಜಿತ ತುರ್ತುವಾಹನ ಖರೀದಿಸಲಾಗಿದೆ. ಜತೆಗೆ ದಾನಿಗಳು, ಸಂಘಸಂಸ್ಥೆಗಳು, ಸ್ನೇಹಿತರ ನೆರವಿನಿಂದ ಅಸಹಾಯಕಕುಟುಂಬಗಳಿಗೆ ಔಷಧ ಮತ್ತು ಆಹಾರದ ಕಿಟ್ ವಿತರಿಸಲಾಗುತ್ತಿದೆ. ತಾಲೂಕಿನ ಜನತೆಗೆ ನಿಮ್ಮ ಸಲಹೆ ಏನು?ಆರೋಗ್ಯವೇ ಭಾಗ್ಯ ಎಂಬ ಮಾತಿದೆ.ಆರೋಗ್ಯವೊಂದಿದ್ದರೆ ಸಕಲವೂ ನಿಮ್ಮದಾದಂತೆ.ನಿಮ್ಮ ಆರೋಗ್ಯ, ನಿಮ್ಮ ಕೈಯಲ್ಲಿದೆ. ಹಾಗಾಗಿ ತೀರಅಗತ್ಯವಾದ ಸಂದರ್ಭ ಹೊರತುಪಡಿಸಿ ಮನೆಗಳಿಂದಹೊರಗಡೆ ಬರಬೇಡಿ. ರೋಗದ ಲಕ್ಷಣಗಳಿದ್ದರೆಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ.ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ.
ಸಾರ್ವಜನಿಕರ ಸಹಕಾರ ಇದೆಯೇ?
ಜಿಪಂ ಮಾಜಿ ಸದಸ್ಯ ಅಚ್ಯುತಾನಂದ 1.10 ಲಕ್ಷರೂಗಳ ಔಷಧಿ ಕಿಟ್, ಪಟ್ಟಣದ ಸಿಲ್ವರ್ ಜ್ಯೂಬಿಲಿಕ್ಲಬ್‌ನ ವತಿಯಿಂದ 2.50 ಲಕ್ಷ ರೂ. ಔಷಧಿ ಕಿಟ್‌ಹಾಗೂ ಸುಕೃತಾ ಕ್ರೀಡಾ ಸಂಸ್ಥೆಯಿಂದ 2.0 ಲಕ್ಷರೂ,ಗಳ ವೆಚ್ಚದ 400 ಮಂದಿಗಾಗುವಷ್ಟು ಔಷಧಿಕಿಟ್ ವಿತರಿಸಲಾಗಿದೆ. ಹಲವಾರು ಸಂಘ ಸಂಸ್ಥೆಗಳುಹಾಗೂ ದಾನಿಗಳು ಕೈಲಾದ ಸಹಾಯ ಮಾಡಿದ್ದಾರೆ.
ವೈಯಕ್ತಿಕವಾಗಿ ನಿಮ್ಮದೇ ಆದ ಕೊಡುಗೆ ಏನು?
ವೈಯಕ್ತಿಕ ವೆಚ್ಚದಲ್ಲಿ ತಾಲೂಕಿನ ಕಗ್ಗೆರೆ ಗ್ರಾಮದ ಬಳಿ 200 ಬೆಡ್‌ಗಳ ಸಾ.ರಾ.ಕೋವಿಡ್ ಕೇರ್ ಸೆಂಟರ್ ತೆರೆದಿದ್ದೇನೆ. ಇದರ ಸಂಪೂರ್ಣನಿರ್ವಹಣೆ ನನ್ನದ್ದೇ ಆಗಿದೆ. ಏಳು ಮಂದಿ ಖಾಸಗಿ ವೈದ್ಯರನ್ನುನೇಮಕ ಮಾಡಿಕೊಳ್ಳಲಾಗಿದೆ. ಅದರಲ್ಲಿ ನಾಲ್ಕು ಮಂದಿಗೆ ತಲಾ1 ಲಕ್ಷ ರೂ. ವೇತನವನ್ನು ವೈಯಕ್ತಿಕವಾಗಿ ಭರಿಸಲಿದ್ದು, ಉಳಿದಮೂವರಿಗೆ ಸರ್ಕಾರದಿಂದ 60 ಸಾವಿರ ವೇತನ ನೀಡಿದರೆ,
40ಸಾವಿರವನ್ನು ವೈಯಕ್ತಿಕ ಹಣದಿಂದ ಪ್ರತಿ ತಿಂಗಳು ನೀಡಲಾಗುತ್ತಿದೆ.ಸಾ.ರಾ.ಕೋವಿಡ್ ಸೆಂಟರ್‌ನಲ್ಲಿ ಸೋಂಕಿತರ ಮನರಂಜನೆಗಾಗಿ10 ಟೀವಿಗಳು, 100 ಲೀ.ಸಾಮರ್ಥ್ಯದ ಶುದ್ಧ ನೀರಿನ ಘಟಕಅಳವಡಿಸಲಾಗಿದೆ. ವೈಯಕ್ತಿಕ ಹಣದಿಂದ ಸೋಂಕಿತರನ್ನು ಕರೆ ತರಲುನಾಲ್ಕು ತುರ್ತುವಾಹನಗಳು ಮತ್ತು ಶವಗಳನ್ನು ಸಾಗಿಸಲು ಎರಡುಮುಕ್ತಿರಥ ವಾಹನಗಳನ್ನು ಸೇವೆಗೆ ಸಮರ್ಪಿಸಲಾಗಿದೆ. ತಾಲೂಕಿನಲ್ಲಿ ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ತಲಾ 25 ಸಾವಿರರೂ. ಪರಿಹಾರ ನೀಡುತ್ತಿದ್ದೇನೆ.
ಗೇರದಡ ನಾಗಣ್ಣ