Advertisement
ಸಂಚರಿಸಲು ಸಾಧ್ಯವಾಗದ ಅಥವಾ ತಿಂಗಳುಗಟ್ಟಲೆ ಮಲಗಿದ್ದಲ್ಲೇ ಇರುವವರಿಗೆ ಮನೆಯಲ್ಲಿ ಲಸಿಕೆ ನೀಡಬಹುದೇ ಎಂದು ರಾಜ್ಯ ಸರಕಾರ ಚಿಂತನೆ ನಡೆಸುತ್ತಿತ್ತು. ಅದರಂತೆ ಇತ್ತೀಚೆಗೆ ಪುಣೆಯಲ್ಲಿ ಮನೆ ಬಾಗಿಲಿಗೆ ವ್ಯಾಕ್ಸಿನೇಶನ್ ಅನ್ನು ಪ್ರಾಯೋಗಿಕ ಆಧಾರದ ಮೇಲೆ ಪರಿಚಯಿಸಲಾಗಿದೆ. ಸದ್ಯದಲ್ಲಿಯೇ ಮನೆಗೆ ಹೋಗಿ ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಲಸಿಕೆ ಹಾಕಲು ಬಿಎಂಸಿ ಆರೋಗ್ಯ ಇಲಾಖೆ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಮುಂಬಯಿಯಲ್ಲಿ ಪ್ರಸ್ತುತ ಅಂತಹ ರೋಗಿಗಳ ಸಂಖ್ಯೆ ಮಾಹಿತಿ ಇಲ್ಲ. ಆದ್ದರಿಂದ ಈ ರೋಗಿಗಳ ಮಾಹಿತಿಯನ್ನು ಸಂಗ್ರಹಿಸಲು ಬಿಎಂಸಿ ನಿರ್ಧರಿಸಿದೆ.
Related Articles
Advertisement
ಮಾಹಿತಿಯನ್ನು ಸಂಗ್ರಹಿಸಿದ ಬಳಿಕ ಎಷ್ಟು ರೋಗಿಗಳು ಮತ್ತು ಅವರು ಎಲ್ಲಿದ್ದಾರೆ ಎಂದು ಅಂದಾಜು ಮಾಡಲು ಸಾಧ್ಯವಾಗುತ್ತದೆ. ಆ ಆಧಾರದ ಮೇಲೆ ಯೋಜನೆ ಮಾಡಬಹುದು. ಅಲ್ಲಿಯವರೆಗೆ ರಾಜ್ಯ ಸರಕಾರದ ನಿಯಮಗಳು ಜಾರಿಗೆ ಬಂದ ಬಳಿಕವೇ ಗೃಹಾಧಾರಿತ ವ್ಯಾಕ್ಸಿನೇಶನ್ ಜಾರಿಗೆ ತರಲು ಸಾಧ್ಯವಾಗುತ್ತದೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಸುರೇಶ್ ಕಾಕಾನಿ ಹೇಳಿದರು.
ಆರೋಗ್ಯ ಕಾರ್ಯಕರ್ತರ ಮೇಲೆ ಒತ್ತಡ
ಈ ಮಧ್ಯೆ ಮನೆ ಮನೆಗೆ ವ್ಯಾಕ್ಸಿನೇಶನ್ ಅಭಿಯಾನಕ್ಕೆ ಸವಾಲುಗಳು ಎದುರಾಗುವ ಸಾಧ್ಯತೆಯಿದೆ. ಆದ್ದರಿಂದ ಬಿಎಂಸಿ ಅಭಿಯಾನದ ಯಶಸ್ಸಿಗೆ ಎಚ್ಚರಿಕೆಯಿಂದ ತಯಾರಿ ನಡೆಸುತ್ತಿದೆ.
ರೋಗಿಯ ಮನೆಗೆ ಹೋಗಿ ಲಸಿಕೆ ನೀಡಲು ಲಸಿಕೆ ತೆರೆದರೆ ಉಳಿದ ಒಂಬತ್ತು ಡೋಸ್ ಅನ್ನು ಹೇಗೆ ಯೋಜಿಸುವುದು ಎಂಬ ಪ್ರಶ್ನೆ ಉದ್ಭವಿಸಿದೆ. ವ್ಯಾಕ್ಸಿನೇಶನ್ ಬಳಿಕ ರೋಗಿಯು ಅರ್ಧ ಗಂಟೆಯವರೆಗೆ ಕಾಯಬೇಕಾಗಿರುವುದು ಇದಕ್ಕೆ ಕಾರಣವಾಗಿದೆ. ಅಲ್ಲದೆ ಲಸಿಕೆಯನ್ನು ಮನೆಯಲ್ಲಿಯೇ ನೀಡಿದರೆ ಆರೋಗ್ಯ ಕಾರ್ಯಕರ್ತರ ಮೇಲೆ ಒತ್ತಡ ಹೇರುವ ಮೂಲಕ ಇದನ್ನು ಹೆಚ್ಚಾಗಿ ದುರುಪಯೋಗಪಡಿಸಿಕೊಳ್ಳಬಹುದು.