Advertisement

ಬಿಜೆಪಿ, ಪ್ರಧಾನಿ ಕಾರ್ಯಕ್ರಮಕ್ಕೆ ಸೋಮಣ್ಣ ಹಾಜರು

01:22 AM Mar 13, 2023 | Team Udayavani |

ಬೆಂಗಳೂರು: ಉಸ್ತುವಾರಿ ಜಿಲ್ಲೆ ಚಾಮರಾಜ ನಗರದಲ್ಲಿ ವಿಜಯಸಂಕಲ್ಪ ಯಾತ್ರೆಗೆ ಗೈರು ಹಾಜರಾಗಿ ಸ್ವಕ್ಷೇತ್ರದಲ್ಲಿ ನಡೆದ ಯಾತ್ರೆಯಲ್ಲೂ ಸಾಂಕೇತಿಕವಾಗಿ ಪಾಲ್ಗೊಂಡು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ವಸತಿ ಸಚಿವ ವಿ. ಸೋಮಣ್ಣ ಅವರು ರವಿವಾರ ಪಕ್ಷ ಹಾಗೂ ಪ್ರಧಾನಿಯವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

Advertisement

ವಿಜಯನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶದಲ್ಲಿ ಪಾಲ್ಗೊಂಡ ಸೋಮಣ್ಣ, ಬಿಜೆಪಿ ಹಾಗೂ ಪ್ರಧಾನಿಯವರನ್ನು ಹಾಡಿ ಹೊಗಳಿದರು.

ಬಿಜೆಪಿ ಅಭಿವೃದ್ಧಿ ಪರವಾಗಿದ್ದು, ಜನರ ಆಶಯದಂತೆ ನಡೆಯುವ ಪಕ್ಷವಾಗಿದೆ. ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಜನಪರ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ ಎಂದು ಶ್ಲಾ ಸಿದರು. ಧಾರವಾಡ ಐಐಟಿ ಕ್ಯಾಂಪಸ್‌ ಉದ್ಘಾಟನೆ ಕಾರ್ಯಕ್ರಮದಲ್ಲೂ ಭಾಗಿಯಾಗಿ ಪ್ರಧಾನಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ನಾರಾಯಣ ಗೌಡ ಭಾಗಿ
ಸಚಿವ ನಾರಾಯಣ ಗೌಡ ಕೂಡ ಬೆಂಗಳೂರು – ಮೈಸೂರು ಹೈವೇ ಉದ್ಘಾಟನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರಿನಲ್ಲಿ ಅವರದೇ ಇಲಾಖೆಯ ಮಹಿಳಾ ಕ್ರೀಡಾ ಹಬ್ಬದಲ್ಲಿ ಗೈರಾಗುವ ಮೂಲಕ ಕುತೂ ಹಲ ಮೂಡಿಸಿದ್ದ ಇವರು ಮೋದಿ ಕಾರ್ಯಕ್ರಮದ ಮೂಲಕ ಹೊಸ ಲೆಕ್ಕಾಚಾರಕ್ಕೆ ಎಡೆಮಾಡಿಕೊಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next