ಗಂಗಾವತಿ : ಹೇ ರಾಮ್ ಎನ್ನುವುದು ಭಾರತೀಯ ಸನಾತನ ಸಂಸ್ಕೃತಿ ಜೈ ಶ್ರೀರಾಮ್ ಎನ್ನುವುದು ಬಿಜೆಪಿ ಸಂಘ ಪರಿವಾರದ ರಾಜಕೀಯ ಘೋಷಣೆಯಾಗಿದೆ. ಶ್ರೀರಾಮಚಂದ್ರ ತನ್ನ ಸತಿಗಾಗಿ ಯುದ್ಧ ಮಾಡಿ ಮಹಳಾ ಸ್ವಾತಂತ್ರö್ಯ ಸಂರಕ್ಷಣೆ ಮಾಡಿದ ಪ್ರಸ್ತುತ ಅಧಿಕಾರ ನಡೆಸುತ್ತಿರುವವರು ಹೆಸರಿಗೆ ಮಾತ್ರ ಮಹಿಳೆಯರ ಬಗ್ಗೆ ಗೌರವ ಪ್ರೀತಿ ತೋರುತ್ತಿದ್ದಾರೆಂದು ಮಾಜಿ ಸಂಸದ ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಬಿಜೆಪಿ ಸಂಘ ಪರಿವಾರದ ವಿರುದ್ಧ ಟೀಕಿಸಿದರು.
ಅವರು ತಾಲೂಕಿನ ಕಿಷ್ಕಿಂದಾ ಅಂಜನಾದ್ರಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಸಂಘ ಪರಿವಾರದವರಿಗೆ ಶ್ರೀರಾಮ ಮಾತ್ರ ಬೇಕು ಶ್ರೀರಾಮನ ಸೃಷ್ಠಿಸಿದ ಮಹರ್ಷಿ ವಾಲ್ಮೀಕಿ ಹಾಗೂ ಆ ಜನಾಂಗ ಬೇಡವಾಗಿದೆ. ಚುನಾವಣೆ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯಕ್ಕೆ 7.5 ಮೀಸಲಾತಿ ಉಪಮುಖ್ಯಮಂತ್ರಿ ಹೀಗೆ ಹತ್ತು ಹಲವು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ನಂತರ ಬೆನ್ನು ತೋರಿಸಿದ್ದಾರೆ. ಶ್ರೀರಾಮಮಂದಿರ ನಿರ್ಮಾಣದಂತೆ ಆಂಜನೇಯನ ಜನ್ಮ ಸ್ಥಳದ ಬಗ್ಗೆ ರಾಜ್ಯ ಸರಕಾರ ಇದುವರೆಗೂ ತಿರುಪತಿ ತಿರುಮಲ ಕಮೀಟಿಯವರಿಗೆ ಉತ್ತರ ಕೊಡುವಂತಹ ದಾಖಲೆ ಸಮೇತ ಹೇಳಿಕೆಯನ್ನು ರಾಜ್ಯ ಸರಕಾರ ನೀಡಿಲ್ಲ.
ಧಾರ್ಮಿಕ ದತ್ತಿ ಇಲಾಖೆಯ ಸಚಿವರು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಸ್ಥಳೀಯರು ಮತ್ತು ರಾಜಮನೆತನದವರ ಜತೆ ಚರ್ಚೆ ನಡೆಸದೇ ವಿಧಾನಸೌಧದಲ್ಲಿ ತಮಗೆ ಬೇಕಾದವರನ್ನು ಆಹ್ವಾನಿಸಿ ಸಭೆ ನಡೆಸದೇ ವಾಪಸ್ ಕಳಿಸಿದ್ದಾರೆ. ಕೇಂದ್ರದ ಪ್ರವಾಸೋದ್ಯಮ ಸಚಿವರು ಹಂಪಿಗೆ ಆಗಮಿಸಿ ಆಂಜನೆಯನ ಜನ್ಮ ಸ್ಥಳದ ಬಗ್ಗೆ ಉಡಾಫೆಯ ಮಾತನಾಡುತ್ತಿದ್ದರೂ ಸಚಿವ ಶ್ರೀರಾಮುಲು, ಆನಂದ್ ಸಿಂಗ್ ಸೇರಿ ಜನಪ್ರತಿನಿಧಿಗಳು ಆಕ್ಷೇಪವೆತ್ತದೇ ಸುಮ್ಮನಿದ್ದಾರೆ. ಆದ್ದರಿಂದ ಬಿಜೆಪಿ ಸರಕಾರ ಚುನಾವಣೆಗಾಗಿ ಹಿಂದುತ್ವ ಜೈ ಶ್ರೀರಾಮ, ಜೈ ಭಜರಂಗ ಬಲಿ ಹೀಗೆ ಹಲವು ಘೋಷಣೆ ಕೂಗಿ ಯುವಕರನ್ನು ರೊಚ್ಚಿಗೆಬ್ಬಿಸುತ್ತಿದೆ. ಟಿಟಿಡಿಯವರು ಆಂಜನೇಯ ಜನಿಸಿದ್ದ ತಿರುಮಲದಲ್ಲಿ ಎಂದು ಹೇಳುತ್ತಿದ್ದರೂ ಆರ್‌ಎಸ್‌ಎಸ್ ಭಜರಂಗದಳ ವಿಶ್ವ ಹಿಂದು ಪರಿಷತ್ ಯಾಕೆ ಆಕ್ಷೇಪವೆತ್ತುತ್ತಿಲ್ಲ. ಆದ್ದರಿಂದ ಕೂಡಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಂಜನೇಯನ ಜನಿಸಿದ ಸ್ಥಳ ಕಿಷ್ಕಿಂದಾ ಅಂಜನಾದ್ರಿ ಎಂದು ದಾಖಲೆ ಸಮೇತ ಟಿಟಿಡಿಯವರಿಗೆ ಹಾಗೂ ವಿಶ್ವದ ಹನುಮ ಭಕ್ತರ ಗಮನಕ್ಕೆ ತರಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ : 27 ಸೆಕೆಂಡ್ನಲ್ಲಿ 100 ಮೀಟರ್ ಓಟ ಪೂರ್ಣಗೊಳಿಸಿದ 102 ವರ್ಷದ ವೃದ್ಧ