ಬೆಂಗಳೂರು: ಬಿಜೆಪಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಬೆಂಗಳೂರಿನಲ್ಲಿ ಗುರುವಾರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ವಿರುದ್ಧ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯುವುದು ಬಹುತೇಕ ಅಂತಿಮಗೊಂಡಿದೆ.
ಇದನ್ನೂ ಓದಿ:ಪಕ್ಷ ಹಗಲು ರಾತ್ರಿ ಕಟ್ಟಿ ಬೆಳೆಸಿದವರಲ್ಲಿ ನಾನೂ ಒಬ್ಬ, ನನ್ನ ಯಾರೂ ಕಡೆಗಣಿಸಿಲ್ಲ: ಯಡಿಯೂರಪ್ಪ
ಮೂಲತಃ ಬಿಜೆಪಿಯವರೇ ಆಗಿರುವ ಪಾಟೀಲ್ ಈ ಹಿಂದೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಗೊಂಡಿದ್ದರು. 2013 ಹಾಗೂ 2018ರಲ್ಲಿ ಹೆಬ್ಬಾರ್ ವಿರುದ್ಧ ಬಿಜೆಪಿಯಿಂದಲೇ ಸ್ಪರ್ಧಿಸಿ ಅಲ್ಪ ಮತದಿಂದ ಸೋಲನುಭವಿಸಿದ್ದರು. ಆಪರೇಷನ್ ಕಮಲದ ಬಳಿಕ ಹೆಬ್ಬಾರ್ ಬಿಜೆಪಿಗೆ ಸೇರ್ಪಡೆಗೊಂಡಾಗ ಕ್ಷೇತ್ರ ಬಿಟ್ಟುಕೊಡುವ ಅನಿವಾರ್ಯತೆ ಪಾಟೀಲ್ ಗೆ ಬಂದಿತ್ತು.
ನಂತರ ನಡೆದ ಬೆಳವಣಿಗೆಯಿಂದ ಪಾಟೀಲ್ ಬೇಸರಗೊಂಡಿದ್ದು ಅಂತಿಮವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.