ಕುಂದಾಪುರ : ಕನ್ನಡದ ಖ್ಯಾತ ಚಲನಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅವರ ಸಂಗೀತ ಸವಿಸಂಜೆ ಕಾರ್ಯಕ್ರಮ ಕೋಟೇಶ್ವರದ ಸಹನಾ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆಯಿತು.
ಸಮುದ್ಯತಾ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕೆಜಿಎಫ್ ಖ್ಯಾತಿಯ ಯುವ ಗಾಯಕಿ ಐರಾ ಆಚಾರ್ಯ, ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿ ನಿನಾದ ನಾಯಕ್, ಸರಿಗಮಪ ಕಾರ್ಯಕ್ರಮದಲ್ಲಿ ಖ್ಯಾತಿಯಾದ ಶ್ರೀಹರ್ಷ ಹಾಗೂ ಡಾ.ಅಭಿಷೇಕ್ ರಾವ್ ಅವರ ಸುಮಧುರ ಧ್ವನಿಯಲ್ಲಿ ನರೆದಿದ್ದ ಜನರನ್ನು ರಂಜಿಸಿದರು.
ನಾಗೇಂದ್ರ ಸಾಹಿತ್ಯದಲ್ಲಿ ಮೂಡಿಬಂದ ಹಾಡುಗಳು ಕೇಳುಗರನ್ನು ಸೆಳೆದಿಟ್ಟುಕೊಂಡಿತ್ತು.ನಾಗೇಂದ್ರ ಪ್ರಸಾದ್ ಅವರ ಒಂದೆರೆಡು ಸಾಲಿನ ಇಟ್ರೋ ಹಾಡಿಗೆ ಜನ ಮನಸೋತು, ಚಪ್ಪಾಳೆ ತಟ್ಟಿ ಖುಷಿ ಪಟ್ಟರು. ಕಾರ್ಯಕ್ರಮದಲ್ಲಿ ಗಾಯಕರು ಕನ್ನಡದ ರೆಟ್ರೋ ಹಾಗೂ ಹೊಸ ಸಿನಿಮಾದ ಹಾಡುಗಳನ್ನು ಹಾಡುವ ಮೂಲಕ ತಮ್ಮ ಧ್ವನಿಯಿಂದ ಜನರನ್ನು ಮೋಡಿ ಮಾಡಿದರು. ಕಾರ್ಯಕ್ರಮವನ್ನು ಅವಿನಾಶ್ ಕಾಮತ್ ತಮ್ಮ ನಿರೂಪಣೆಯಿಂದ ಇನ್ನಷ್ಟು ಅಂದಗಾಣಿಸಿದರು.