Advertisement
ಹುಬ್ಬಳ್ಳಿ: ಕೋವಿಡ್ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿದ್ದರೂ ಸಂಕಟ ಹೇಳಿಕೊಳ್ಳಲಾಗದೆ-ಇತರರಂತೆ ನೆರವು ಪಡೆಯಲಾಗದೆ ಮನೋವೇದನೆ ಅನುಭವಿಸುತ್ತಿರುವ ರಾಜ್ಯದ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮೂಲಕ ಯುವಾ ಬ್ರಿಗೇಡ್ “ಗುರು ಗೌರವ’ ಸಮರ್ಪಣೆ ಸಾರ್ಥಕ ಕಾರ್ಯದಲ್ಲಿ ತೊಡಗಿದೆ.
Related Articles
Advertisement
ಹುಬ್ಬಳ್ಳಿ ಕೇಂದ್ರ: ಉತ್ತರ ಕರ್ನಾಟಕದ ಜಿಲ್ಲೆಗಳ ಶಿಕ್ಷಕರಿಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ತಯಾರಿಸಲು ಹಾಗೂ ಸಾಗಣೆಗೆ ಅನುಕೂಲವಾಗುವಂತೆ ಹುಬ್ಬಳ್ಳಿಯನ್ನು ಕೇಂದ್ರವಾಗಿಸಿಕೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿಯೇ ಕಿಟ್‌ಗಳನ್ನು ಸಿದ್ಧ ಪಡಿಸಲಾಗುತ್ತಿದೆ. ಸುಮಾರು 55 ಜನ ಕಾರ್ಯಕರ್ತರು ಕಿಟ್‌ಗಳನ್ನು ತಯಾರಿಸಿದ್ದಾರೆ.
ಒಂದು ಕಿಟ್ 10 ಕೆಜಿ ಅಕ್ಕಿ, 2 ಕೆಜಿ ಸಕ್ಕರೆ, 2 ಕೆಜಿ ಬೇಳೆ, 2 ಕೆಜಿ ರವೆ, 2 ಕೆಜಿ ಗೋದಿ ಹಿಟ್ಟು, ಒಂದು ಲೀಟರ್ ಅಡುಗೆ ಎಣ್ಣೆ ಹೊಂದಿದ್ದು, ಒಬ್ಬ ಶಿಕ್ಷಕರ ಕುಟುಂಬಕ್ಕೆ ಒಂದು ತಿಂಗಳಿಗೆ ಸಾಕಾಗುವ ಲೆಕ್ಕಾಚಾರದಲ್ಲಿ ತಯಾರಿಸಲಾಗಿದೆ. ಇನ್ನೊಂದೆಡೆ ಈ ಕಿಟ್ ನೀಡುವ ವೇಳೆ ಕೋವಿಡ್ ಮೂರನೇ ಅಲೆ ಬಗ್ಗೆ ತಮ್ಮ ಸಂಪರ್ಕದಲ್ಲಿರುವ ವಿದ್ಯಾರ್ಥಿಗಳು ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿಸುವಂತೆ ಶಿಕ್ಷಕರಲ್ಲಿ ಮನವಿ ಮಾಡಲಾಗುತ್ತಿದೆ. ಮಕ್ಕಳಿಗೆ ಯೋಗ, ವ್ಯಾಯಾಮ ಇನ್ನಿತರ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಪ್ರೇರಣೆ, ತರಬೇತಿ ನೀಡುವ ಕಾರ್ಯ ಮಾಡಬೇಕೆಂದೂ ಕೋರಲಾಗುತ್ತಿದ್ದು; ಇದಕ್ಕೆ ಅನೇಕ ಶಿಕ್ಷಕರಿಂದಲೂ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ.