ಯೋಗವು ನಮ್ಮ ಮನಸ್ಸು ಮತ್ತು ದೇಹವನ್ನು ಪುನರುಜೀಜೀವನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿದಿನ ಯೋಗ ಮಾಡುವ ಜನರು ಯೋಗದ ಅವಧಿಯ ನಂತರ ಚೈತನ್ಯವನ್ನು ಅನುಭವಿಸುತ್ತಾರೆ.
‘ ಯೋಗವು’ ನಮ್ಮ ಮನಸ್ಸನ್ನು ಸಂಪೂರ್ಣವಾಗಿ ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಇದು ಅನಗತ್ಯ ಉದ್ವೇಗಗಳ ಮೇಲೆ ಕೆಲಸ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ನಮಗೆ ಉತ್ತಮವಾದ ನಿದ್ರೆಯನ್ನು ಸುಗಮಗೊಳಿಸುತ್ತದೆ.
ಯೋಗವೆಂದರೆ ದೇಹವನ್ನು ಬಗಿಸುವುದು ಅಥವಾ ತಿರುಗಿಸುವುದು ಮತ್ತು ಉಸಿರನ್ನು ಹಿಡಿದಿಟ್ಟುಕೊಳ್ಳುವುದು ಮಾತ್ರವಲ್ಲ ವಾಸ್ತವವನ್ನು ನೋಡುವ ಮತ್ತು ಅನುಭವಿಸುವ ಸ್ಥಿತಿಗೆ ನಮ್ಮನ್ನು ತರುವ ಇದು ಒಂದು ತಂತ್ರವಾಗಿದೆ. ನಮ್ಮ ಶಕ್ತಿಗಳು ಉತ್ಕೃಷ್ಟ ಮತ್ತು ಭಾವಪರವಸವಾಗಲು ನೀವು ಸಕ್ರಿಯಗೊಳಿಸಿದರೆ, ನಮ್ಮ ಸಂವೇದನಾ ದೇಹವು ವಿಸ್ತರಿಸುತ್ತದೆ. ಇದು ಇಡೀ ಬ್ರಹ್ಮಾಂಡವನ್ನು ನಮಗೆ ಒಂದು ಭಾಗವಾಗಿ ಅನುಭವಿಸಲು ಅನುಕೂಲ ಮಾಡಿಕೊಡುತ್ತದೆ
ಯೋಗವು ಭಾರತದಲ್ಲಿ ಹುಟ್ಟಿಕೊಂಡ ಪ್ರಾಚೀನದಲ್ಲಿ ದೈಹಿಕ , ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. “ಯೋಗ’ ಎಂಬ ಪದವು ಸಂಸ್ಕೃತದಿಂದ ಬಂದಿದೆ ಮತ್ತು ದೇಹ ಮತ್ತು ಪ್ರಜ್ಞೆಯ ಒಕ್ಕೂಟವನ್ನು ಸಂಕೇತಿಸುವ, ಸೇರುವುದು ಅಥವಾ ಒಂದಾಗುವುದು ಎಂದರ್ಥವನ್ನು ಕೊಡುತ್ತದೆ.
ನಮ್ಮ ಋಷಿ ಮುನಿಗಳು ಈ ದೇಹವನ್ನು ಐದು ಕೋಶಗಳಿರುವ ಮೂರು ಸರಗಳಾಗಿ ವಿಂಗಡಿಸಿದ್ದಾರೆ, ಮೊದಲನೆಯ ಸ್ತರವೆಂದರೆ ಅಂತರಾತ್ಮ, ಎರಡನೇಯದು ಮನಸು, ಮೂರನೆಯದು ದೇಹ, ಈ ಮೂರು ಕಾಯಗಳು ಮನುಷ್ಯನಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಸ್ವಾಭಾವಿಕವಾಗಿ ಈ ದೇಹವು ಜಡವಾದುದು, ಆದರೆ ಮನಸ್ಸು ಬಹಳ ತಿಕ್ಷಣ, ಹಾಗೂ ಕ್ರಿಯಾಶೀಲವಾದುದು.
ಯೋಗವನ್ನು ಅಭ್ಯಾಸ ಮಾಡಿದರೆ ದೇಹದ ಜಡತ್ವ ನಿವಾರಣೆಯಾಗಿ ಸೂಕ್ಷ್ಮ ಹಾಗೂ ಕ್ರಿಯಾಶೀಲವಾದ ಮನಸ್ಸಿನೊಡನೆ ಸ್ಪಂದಿಸಲು ಸಿದ್ಧಗೊಳ್ಳುತ್ತದೆ. ಅನಂತರ ಈ ದೇಹ ಮತ್ತು ಮನಸ್ಸುಗಳೆರಡೂ ಸ್ವಯಂ ಪ್ರಕಾಶನಾದ ಆತ್ಮನೊಡನೆ ವಿಹರಿಸಲು ಅನುಕೂಲವಾಗಿದೆ. ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ ತುಂಬಾ ಮಹತ್ವದಾಗಿದೆ.
–
ಸುನಂದಾ ಪಟ್ಟಣಶೆಟ್ಟಿ
ಎಂ. ಪಿ. ಎಂ. ಕಾಲೇಜು ಕಾರ್ಕಳ