Advertisement

Junk Foodನಿಂದ ದೂರವಿರೋಣ

11:59 AM May 31, 2024 | Team Udayavani |

ಜಂಕ್‌ ಫ‌ುಡ್‌ ಎನ್ನುವುದು ಎಲ್ಲರಿಗೂ ಪ್ರಿಯಕರವಾದ ಒಂದು ಆಹಾರವಾಗಿದೆ, ಅಪ್ರಿಯವಾದ ಆಹಾರ, ನಮ್ಮ ಆರೋಗ್ಯದ ಮೇಲೆ ಎಷ್ಟೋ ಅಪಾಯ ಉಂಟುಮಾಡಿದೆ ಇದು ರುಚಿಗೆ ಮಾತ್ರವಲ್ಲ ಸಾಮಾನ್ಯವಾಗಿ ಕೈಗೆಟುಕುವ ಬೆಲೆಯಲ್ಲಿವೆ. ಈ ಆಹಾರ ಅಲ್ಪಾವಧಿಯ ಸಂತೋಷ ಅಲ್ಪಕಾಲಿಕವಾಗಿರುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯು ಹೆಚ್ಚಾಗಿ ಜಂಕ್‌ ಫ‌ುಡ್‌ ಗಳಿಗೆ ಮೊರೆ ಹೋಗುತ್ತಿದ್ದಾರೆ.

Advertisement

ಜಂಕ್‌ ಫ‌ುಡ್‌ ಸೇವಿಸುತ್ತಿರುವುದ್ದರಿಂದ ನಾವು ಹಣ ಕೊಟ್ಟು ರೋಗವನ್ನು ಖರೀದಿಸುವಂತೆ, ಇದರಿಂದ ಹಲವಾರು ಕೆಟ್ಟ ಪರಿಣಾಮ ಬೀರುತ್ತವೆ ಅವುಗಳೆಂದರೆ ಫ್ರೆಂಚ್‌ ಫ್ರೈಸ್‌, ಪಿಜ್ಜಾ, ಬರ್ಗರ್‌, ಚಿಪ್ಸ್, ನೂಡಲ್ಸ್‌ ಗಳಂತಹ ಫ‌ುಡ್‌ ಗಳು ನಮ್ಮ ದೇಹದಲ್ಲಿ ಅಧಿಕ ರಕ್ತದೊತ್ತಡ, ಮದುಮೇಹ, ಕ್ಯಾನ್ಸರ್‌, ಪಿಸಿ ಓಡಿ, ಪಿಸಿಓಎಸ್‌, ಹೃದಯ ಸಂಬಂಧಿಸಿದ ರೋಗಳನ್ನು ಮುಕ್ತವಾಗಿ ಆಹ್ವಾನ ಮಾಡಿಕೊಳ್ಳುತ್ತೇವೆ. ಇಂತಹ ಜೀವನ ಶೈಲಿಯ ರೋಗಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿವೆ ಇಂತಹ ಕಾಯಿಲೆಗಳಿಗೆ ಯುವ ಪೀಳಿಗೆಯು ಹೆಚ್ಚಾಗಿ ಬಲಿಯಾಗುತ್ತಿವೆ.

ಆದರೆ ಹಿಂದಿನ ಕಾಲದಲ್ಲಿ ಹಸಿವು ಎಂದಾಗ ನೆನಪಾಗುತ್ತಿದ್ದಾದೆ ಮನೆಯಲ್ಲಿ ಇರುವ ಆಹಾರ ಮತ್ತು ಪ್ರಕೃತಿಯಲ್ಲಿ ದೊರೆಯುವಂತ ನೈಸರ್ಗಿಕ ಹಣ್ಣು ಹಂಪಲುಗಳಾಗಿದ್ದವು. ಉದಾಹರಣೆಗೆ ಜಂಬೂ, ಮಾವಿನ ಹಣ್ಣು, ಪೇರಳೆ,ಹಲಸಿನ ಹಣ್ಣು, ನೇರಳೆ, ಇಂತಹ ಹಣ್ಣುಗಳು ನೈಸರ್ಗಿಕವಾಗಿ ಉತ್ತಮ ಆರೋಗ್ಯ ದೊರೆಯುತ್ತಿತ್ತು,

ಆದರೆ ಈಗಿನ ಯುವ ಪೀಳಿಗೆಯು ಹಸಿವು ಎಂದ ತಕ್ಷಣ ಅವರಿಗೆ ನೆನಪಾಗುವುದು ಫಾಸ್ಟ್‌ ಫ‌ುಡ್‌ ಈ ಫ‌ುಡ್‌ ಗಳು ನಮ್ಮ ಒಮ್ಮೆ ನಾಲಗೆಯ ರುಚಿ ಹೋಗಲು ಮಾತ್ರ ಈ ಫ‌ುಡ್‌ ಸೇವಿಸಬಹುದು ಅಷ್ಟೇ. ಇದ್ದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಿಲ್ಲ.ಇದರಿಂದ ಆರೋಗ್ಯಕ್ಕೆ ಹಾನಿಯೇ ಹೊರತು ಯಾವುದೇ ರೀತಿಯ ಪೌಷ್ಟಿಕಾಂಶ ದೊರೆಯುವುದಿಲ್ಲ, ಯುವ ಪೀಳಿಗೆಯು ಇನ್ನು ಹೆಚ್ಚು ಕಾಲ ಮುಂದುವರಿಸುವುದು ಕಷ್ಟದ ಸಂಗತಿ. ನಮ್ಮ ಆರೋಗ್ಯದ ಕಾಳಜಿ ನಮ್ಮಗೆ ಮುಖ್ಯ. ಜಂಕ್‌ ಫ‌ುಡ್‌ ಗಳೇ ನಮ್ಮ ದಿನನಿತ್ಯದ ಆಹಾರವಾಗಬಾರದು ಆದಷ್ಟು ಜಂಕ್‌ ಫ‌ುಡ್‌ ಗಳಿಂದ ದೂರ ಇರುವ ನಮ್ಮ ಆರೋಗ್ಯವನ್ನು ಸುರಕ್ಷಿತಗೊಳಿಸಬೇಕು.

-ಶ್ವೇತಾ

Advertisement

ಎಂ.ಪಿ.ಎಂ. ಸರ್ಕಾರಿ ಪ್ರಥಮ ದರ್ಜೆ

ಕಾಲೇಜು ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next