Advertisement
ಬದುಕಿನಲ್ಲಿ ಅನೇಕ ಸಾರಿ ನಮ್ಮನ್ನ ನಾವು ಬದಲಾಯಿಸಿಕೊಳ್ಳುವ ಅನಿವಾರ್ಯತೆ ನಮ್ಮೆದುರು ಇದ್ದೆ ಇರುತ್ತದೆ. ಒಬ್ಬರಿಗೆ ಒಳ್ಳೆಯವರಾಗೋಕೆ ಹೋಗಿ ಇನ್ನೊಬ್ಬರಿಗೆ ಕೆಟ್ಟವರಾಗುತ್ತೇವೆ. ನಾವು ನಮ್ಮಂತಿರಲು ಬಿಡದ ಇಕ್ಕಟ್ಟಿನ ಪರಿಸ್ಥಿತಿ. ಎಲ್ಲರ ಮೆಚ್ಚಿಸಲು ಹೋಗಿ ನಿನ್ನ ಸ್ವಇಚ್ಛೆ ಅದುಮಿ ಬಿಡಲಾಗುತ್ತದೆ.
Related Articles
Advertisement
ಕಾಡಿಗೆ ಹೋದ ಸಿಂಹವು ಸಸ್ಯಾಹಾರ ಸೇವಿಸುವುದು ಜಿಂಕೆಗಳ ಹಿಂದೆ ತಿರುಗುವುದನ್ನು ನೋಡಿ ಎಲ್ಲ ಪ್ರಾಣಿಗಳಿಗೂ ಆಶ್ಚರ್ಯವಾಗುತ್ತದೆ. ಜಿಂಕೆಯೊಂದಿಗೆ ಸ್ನೇಹವಾಗುತ್ತೆ ಒಮ್ಮೆ ನೀರಿನಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಭಯಪಡುತ್ತೆ ಯಾರದೂ ಕ್ರೂರ ಪ್ರಾಣಿ ಆಗ ಪ್ರತಿಬಿಂಬ ಹೇಳುತ್ತೆ ಇದು ನೀನೆ ನೀನೊಬ್ಬ ಕ್ರೂರಿ, ನೀ ಇಷ್ಟು ಪ್ರೀತಿಸುತ್ತಿರುವ ಜಿಂಕೆಯನ್ನ ತಿಂದು ಬಿಡು ಎಂದು ಮನಸ್ಸು ಪದೇ ಪದೇ ಹೇಳುತ್ತದೆ ತನ್ನ ಮನಸ್ಸಿನ ಅಳಲನ್ನು ಬುದ್ಧನಿಗೆ ಹೇಳುತ್ತದೆ. ನಾನು ಮತ್ತೆ ಕಾಡಿಗೆ ಹೋಗಲಾರೆ ನಾ ಹೋದರೆ ನಾ ಪ್ರೀತಿಸುವ ಜಿಂಕೆಯನ್ನು ತಿಂದುಬಿಡುತ್ತೇನೆ. ನಾನು ನನ್ನಿಂದ ದೂರ ಓಡಬೇಕಿದೆ ಆದರೆ ಎಲ್ಲಿ ಹೋಗಲಿ ಎಂದು ಹೇಳುತ್ತದೆ. ಆಗ ಬುದ್ಧ ಹೇಳುತ್ತಾನೆ ನೀನು ಕಾಡಿಗೆ ಹೋಗು. ಸಿಂಹ ಅದಕ್ಕೆ ಪ್ರತ್ಯುತ್ತರವಾಗಿ ಹೋದರೆ ಜಿಂಕೆಯನ್ನು ತಿಂದು ಬಿಡುತ್ತೇನೆ ಎನ್ನುತ್ತದೆ. ಆಗ ಬುದ್ಧ ಹೇಳುತ್ತಾನೆ. ತಿಂದುಬಿಡು. ಆಗ ಸಿಂಹಕ್ಕೆ ಆಶ್ಚರ್ಯವಾಗುತ್ತದೆ.
ಬುದ್ಧ ತನ್ನ ಮಾತನ್ನು ಮುಂದುವರೆಸುತ್ತಾನೆ. ನೀನು ನೀನಾಗಿರು ಕಾಡಿಗೆ ಹಿಂತಿರುಗು ಯಾವುದೂ ಅಹಿತಕರ ಘಟನೆ ನಡೆಯುವುದಿಲ್ಲ ನಿನ್ನ ಕರ್ತವ್ಯ ಪಾಲನೆ ಮಾಡು. ಸಿಂಹ ಕಾಡಿಗೆ ಹಿಂತಿರುಗಿದಾಗ ತಾನು ಪ್ರಿತಿಸುತ್ತಿದ್ದ ಜಿಂಕೆಯ ವಿವಾಹ ಬೇರೊಂದು ಜಿಂಕೆಯ ಜತೆ ನಡೆದಿರುತ್ತದೆ.ಸಿಂಹವು ತನ್ನ ತನ ಕಳೆದುಕೊಂಡ ಬದುಕಲ್ಲ ನಮ್ಮ ವ್ಯಕ್ತಿತ್ವ ನಮ್ಮ ಜವಾಬ್ದಾರಿ ನಮ್ಮದೆ ಆಗಿರುತ್ತದೆ.
ಪ್ರೀತಿಯ ಜಿಂಕೆಯೂ ಕೂಡ ತನ್ನ ಬದುಕಿನಲ್ಲಿ ಪ್ರಕೃತಿಯ ಸಹಜತೆ ಯನ್ನು ಒಪ್ಪಿಕೊಂಡಿತು. ನಾನು ಕೂಡ ನನ್ನ ಕರ್ತವ್ಯ ಪಾಲನೆಯತ್ತ ಗಮನ ಹರಿಸುತ್ತೆನೆಂದು ಜೋರಾಗಿ ಘರ್ಜಿಸಿತು. ಈ ಹಿಂದೆ ಸಿಂಹ ಯಾವತ್ತೂ ಈ ರೀತಿ ಘರ್ಜಿಸಿರಲಿಲ್ಲ. ಕಾಡಿನಲ್ಲಿ ರಾಜನ ಆಗಮನ ಧ್ವನಿ ಕಂಪನ ತರಿಸಿತು.ಬದುಕಿನಲ್ಲಿ ನಮ್ಮ ವ್ಯಕ್ತಿತ್ವವನ್ನು ಅದುಮಿ ಬದುಕೊ ಅನಿವಾರ್ಯತೆಗಳು ಸಹಜ.
ಆದರೆ ಎಲ್ಲ ಅನಿವಾರ್ಯತೆಗಳನ್ನು ಮೀರಿ ನಮ್ಮೊಳಗಿನ ಧ್ವನಿಯನ್ನು ಆಲಿಸಲು ಕಲಿಯಬೇಕು. ನಾವು ನಮ್ಮನ್ನು, ನಮ್ಮ ದೃಷ್ಟಿ ಕೋನದಿಂದ ನೋಡದೆ ಸಮಾಜವೆಂಬ ಕನ್ನಡಕ ಧರಿಸಿ ನೋಡೊಕೆ ಶುರುಮಾಡಿದರೆ ಮುಗಿತು.ಜನರಿಗೆ ನಾವು ಹೇಗಿದ್ದರೂ ತೊಂದರೆನೆ. ಕಾಗೆಯನ್ನು ಕೋಗಿಲೆಯಾಗುವುದಕ್ಕೆ ಪ್ರೇರೆಪಿಸುವ ಜನ ಕೋಗಿಲೆಯನ್ನ ಮತ್ತೆಂದೂ ಹಾಡದಂತೆ ನಿರಾಕರಿಸುತ್ತಾರೆ. ಯಾರು ಏನೆ ಹೇಳಿದರೂ ಓ ಮನವೇ ನೀನು ನಿನ್ನಂತಿರು ಜಗವನ್ನು ಮೆಚ್ಚಿಸಲಾಗದು. ಬದುಕಬೇಕು ತನ್ನಿಚ್ಛೆಯಂತೆ ಅಂತರಾಳ ಒಪ್ಪುವಂತೆ.
-ಅಂಜಲಿ ಶ್ರೀನಿವಾಸ
ಬೆಂಗಳೂರು