Advertisement
ಪರಿಸ್ಥಿತಿಗಳ ತಕ್ಕಂತೆ ಬಣ್ಣ ಬಣ್ಣಗಳ ಮುಖವಾಡ ಧರಿಸಿ ಓರ್ವ ಪಾತ್ರಧಾರಿಯಾಗಿ ಜೀವನವನ್ನು ಜಿವಂತಿಸುತ್ತಿದ್ದಾನೆ. ಅವನಿಗೀಗ ನಗು ಪ್ರೀತಿ ವಿಶ್ವಾಸ ಕರುಣೆ ಖುಷಿ ತೃಪ್ತಿಗಳೆಂಬ ಸಂಗತಿಗಳೆಲ್ಲ ಅಜ್ಜಿ ಹೇಳಿದ ಕಥೆಗಳಲ್ಲಿ ಬರುವ ರಾಜಕುಮಾರನ ಹಾಗೆ ಅನಿಸುತ್ತವೆ. ಅವನ ಅಂತರಂಗದ ಶಹರದಲ್ಲಿ ಪಾಳುಬಿದ್ದ ನೆಲಸಮವಾದ ಕಟ್ಟಡಗಳ ಸಂದಿಗೊಂದಿಗಳಲ್ಲಿ ಅವು ಎಂದೋ ಅವಶೇಷಗಳಾಗಿ ಕಣ್ಮರೆಯಾಗಿವೆ.
Related Articles
Advertisement
ಒಂದು ಸಂದಿಗ್ಧ ಸ್ಥಿತಿಯಲ್ಲಿ ಜರುಗಿದ ತಪ್ಪನ್ನು ತಪ್ಪೇ ಅಲ್ಲವೆಂದು ಹುಂಬುತನದಲಿ ಸಾಧಿಸಿ ಆಂತರ್ಯದಲ್ಲಿ ಜೊರಾಗಿ ಕೂಗಿ ಕೇಕೆ ಹಾಕಿ ಅದಕ್ಕಾನುಸಾರ ಒಂದು ಹಿತವಾದ ದೃಷ್ಟಿಕೋನದ ಪರದೆ ಎಳೆದು ಪ್ರದರ್ಶನವನ್ನು ಇತ್ಯರ್ಥಗೊಳಸುತ್ತದೆ ಮನಸ್ಸು. ಆದರೂ ಆತ್ಮ ಆಂತರ್ಯದ ತೀರಾ ಖಾಸಗಿ ಹಾಗೂ ಆಪ್ತ ವಲಯದಲ್ಲಿ ತೀರಾ ಸರಳವಾಗಿ “ಒಮ್ಮೆ ನಿನ್ನ ಎದೆಯಾಳದ ಸ್ವರದೊಂದಿಗೆ ಸತ್ಯವನ್ನು ಉಸಿರಿಸಿ ಹೇಳು ನೀನು ಮಾಡಿದ್ದು ಸರಿಯೇ?’ ಎಂಬ ಕಾಡುವಂತಹ ಪ್ರಶ್ನೆಯೊಂದನ್ನು ಇಡುತ್ತದೆ.
ಈಗ ನಿನ್ನೊಳಗೆ ನಿನ್ನ ಅಂತರಂಗದೊಳಗೆ ನಡೆಯುವ ಸಮುದ್ರ ಮಂಥನದಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಅಸೂಯೆ, ಪ್ರತಿಷ್ಟೆ, ಪ್ರೀತಿ ಪ್ರೇಮ ವಿಶ್ವಾಸ ನಂಬಿಕೆ ಕರುಣೆ ಎಂಬ ಅನೇಕಾನೇಕ ರತ್ನಗಳು ಹೊರ ಬಂದಾಗ ನಿನ್ನ ಆಯ್ಕೆಯ ಅನುಸಾರ ಅವಲಂಬಿತ ನೀನು ಸುರನೋ ಅಸುರನೋ ಎಂದು.
ಅಂತರಂಗದ ಆರ್ತನಾದವನ್ನೊಮ್ಮೆ ಆಲಿಸುಛಾಯೆಗಳೊನ್ನೊಮ್ಮೆ ಒಳಗಣ್ಣಿನಿಂದ ದೃಷ್ಟಿಸು ಸವಿ ಅದರ ನೆಮ್ಮದಿ ಮಿಶ್ರಿತ ಪಾಕಗಳನು ಅಲ್ಲರಳಿದ ಕುಸುಮ ಸುವಾಸನೆಯ ಆಘ್ರಾನಿಸು ಹೊತ್ತು ತಂದ ವಿನೋದವ ಮನಸಾರೆ ಅನುಭವಿಸು ಅಂತರಂಗದ ಅಂತಃಪುರದೊಳು ಸುರನಾಗಿ ಜೀವಿಸು.
ಆದಿತ್ಯ ಯಲಿಗಾರ ಧಾರವಾಡ