Advertisement

UV Fusion: ಸ್ವಕಲಿಕೆ ಮತ್ತು ಆತ್ಮಸ್ತೈರ್ಯ

04:25 PM Oct 04, 2024 | Team Udayavani |

ಏಕಾಗ್ರತೆ ಹಾಗೂ ಅಚಲ ನಂಬಿಕೆ ಕಲಿಕೆಯ ಎರಡು ರಹದಾರಿಗಳು. ಶಿಕ್ಷಣಕ್ಕೆ ಅವಶ್ಯವಾಗಿ ಬೇಕಾದ ತಳಪಾಯಗಳು. ಸಾಧಕನಾದವನು ಇವೆರಡನ್ನು ತನ್ನದಾಗಿಸಿಕೊಂಡು ಸಾಗುವ ಪಥದಲ್ಲಿ ಅದನ್ನು ಉಪಯೋಗಿಸಬೇಕು. ಛಲ ಮತ್ತು ಏಕಾಗ್ರತೆ ಇರದಿದ್ದರೆ ವಿದ್ಯೆಯು ಬಂಡೆಯ ಮೇಲೆ ನೀರು ಸುರಿದಂತೆ, ಏನು ಹೇಳಿದರೂ ಅದು ವ್ಯರ್ಥವಾಗುತ್ತದೆ. ಹೀಗಾದಾಗ ಕಲಿಕೆಯ ಫ‌ಲ ನಿಷ್ಪಲವಾಗುತ್ತದೆ. ಶಿಷ್ಯನಾದವನು ಮೊದಲು ಇವೆರಡರನ್ನು ಸುಪರ್ದಿಯಲ್ಲಿ ಇಟ್ಟುಕೊಂಡು ಅಹರ್ನಿಶಿ ಪ್ರಯತ್ನಿಸಬೇಕು.

Advertisement

ನದಿ ತೀರದಲ್ಲಿ ವಿಶಾಲವಾದ ದ್ರೋಣಾಚಾರ್ಯರ ಆಶ್ರಮವೊಂದಿತ್ತು. ಅಲ್ಲಿ ಗುರುಗಳ ನೂರಾರು ಶಿಷ್ಯೋತ್ತಮರ ಬಳಗವಿತ್ತು. ಇದರಲ್ಲಿ ದ್ರೋಣಾಚಾರ್ಯರ ಪ್ರೀತಿಯ ಶಿಷ್ಯನಾದ ಅರ್ಜುನನ್ನು ಕಂಡು ಎಲ್ಲರಿಗೂ ಒಂದು ರೀತಿಯ ಅಸೂಯೆ.

ಆದರೆ ಅರ್ಜುನ ಮಾತ್ರ ಗುರುಗಳ ಮಾತನ್ನೂ ಚಾಚು ತಪ್ಪದೆ ಪಾಲಿಸುವನಾಗಿದ್ದ. ಹೀಗಿರುವಾಗ ಗುರುಗಳು ಒಂದು ದಿನ ಗದೆ ಹಾಗೂ ಬಾಣಕ್ಕಿಂತ ಮಂತ್ರವೇ ಶ್ರೇಷ್ಠವೆಂದು ಹೇಳುತ್ತಾ ಗಿಡದಲ್ಲಿನ ಎಲ್ಲ ಎಲೆಗಳು ರಂಧ್ರವಾಗುವಂತೆ ಒಂದು ಬಾಣವನ್ನು ಹೂಡಿದರು. ಕೂಡಲೆ ಗಿಡದ ಸರ್ವ ಎಲೆಗಳಲ್ಲಿ ರಂಧ್ರವಾದವು. ಇದನ್ನು ನೋಡಿ ಶಿಷ್ಯರೆಲ್ಲ ಆಶ್ಚರ್ಯಚಕಿತರಾದರು. ಅನಂತರ ಯಾವೊಬ್ಬ ಶಿಷ್ಯನು ಈ ಪ್ರಯತ್ನಕ್ಕೆ ಮುಂದಾಗಲಿಲ್ಲ. ಗುರುಗಳು ಶಿಷ್ಯರೆಲ್ಲರಿಗೆ ನಡೆಯಿರಿ ಎಂದು ನದಿಗೆ ಸ್ನಾನಕ್ಕಾಗಿ ಕರೆದೊಯ್ದರು.

ಆದರೆ ಪಂಚೆಯನ್ನು ಆಶ್ರಮದಲ್ಲಿ ಬಿಟ್ಟು ಬಂದದ್ದು ನೆನಪಾಗಿ ಅರ್ಜುನನಿಗೆ ತರಲು ಹೇಳಿದರು. ಅಲ್ಲಿಂದ ಪಂಚೆ ತರಲು ಹೊರಟ ಅರ್ಜುನ ಕೂಡಲೆ ಆಶ್ರಮದ ಪಕ್ಕವಿರುವ ಗಿಡವನ್ನು ನೋಡುತ್ತ ಎಲೆಗಳಲ್ಲಿ ರಂಧ್ರವಿದ್ದದ್ದನ್ನು ಕಂಡನು ಇದು ಹೇಗೆ ಸಾಧ್ಯ? ಇದನ್ನು ಹೇಗೆ ಮಾಡಬಹುದೆಂದು ಪಕ್ಕದಲ್ಲೆಲ್ಲ ಹುಡುಕಾಡಿದ ಆಗ ನೆಲದಮೇಲೆ ಮಂತ್ರವೊಂದು ಬರೆದಿತ್ತು. ಅದನ್ನು ಉಚ್ಚರಿಸುತ್ತ ಮತ್ತೆ ಬಾಣವನ್ನು ಆ ಗಿಡಕ್ಕೆ ಹೊಡೆಯಲು ಎಲ್ಲ ಎಲೆಗಳಲ್ಲಿ ಮತ್ತೂಂದೊಂದು ರಂಧ್ರವಾದವು. ಮಂತ್ರಸಿದ್ಧಿಸಿತೆಂದು ಅರ್ಜುನ ಖುಷಿ ಪಟ್ಟ. ಈ ವಿಷಯ ಗುರುಗಳಿಗೆ ತಿಳಿಸಲು ಚಿಂತಿಸಿದನು.

ಆಗ ಗುರುಗಳಿಗೆ ಗುರುಗಳೆ, ಈ ವಿದ್ಯೆಯನ್ನು ಉಳಿದವರಿಗೆ ತಾವು ಹೇಳಿಕೊಟ್ಟಿದ್ದಿರಿ, ನನಗೆ ಹೇಳಿಕೊಡಲು ಬಹಳ ಸಮಯ ಹಿಡಯಬಹುದೆಂದು ಸ್ವತಃ ಪ್ರಯತ್ನಪಟ್ಟು ಕಲಿತುಕೊಂಡೆ ಎಂದು ಗುರುಗಳಿಗೆ ಶಿರಬಾಗಿ ಕ್ಷಮೆಯಾಚಿಸಿದನು. ಗುರುಗಳು ಕೋಪಿಸಿಕೊಳ್ಳಲಿಲ್ಲ ಬದಲಿಗೆ ಖುಷಿಪಟ್ಟರು. ಉಳಿದ ಶಿಷ್ಯರೊಬ್ಬರು ಈ ರೀತಿ ಮಾಡಲು ಪ್ರಯತ್ನಿಸಲಿಲ್ಲ ನೀನು ಪ್ರಯತ್ನ ಮಾಡಿ ಪಡೆದುಕೊಂಡೆ ಎಂದರು.

Advertisement

ನಾವು ನೀವೆಲ್ಲ ಉಳಿದ ಶಿಷ್ಯರಂತೆ ಇದ್ದೇವೆ. ನಮ್ಮಲ್ಲಿ ಕಲಿಯುವ ಹಾಗೂ ಪ್ರಯತ್ನಿಸುವ ಮನೋಭಾವ ಇಲ್ಲದೆ ಹೋದಾಗ ಕಲಿಕೆ ಗಗನ ಕುಸುಮವಾಗುತ್ತದೆ. ಹೀಗಿದ್ದಾಗ ಸ್ವಕಲಿಕೆ ಸಾಧ್ಯವಿಲ್ಲ. ಅರ್ಜುನ ಸ್ವಪ್ರಯತ್ನದಿಂದ ಕಲಿಯಲು ಯತ್ನಿಸಿ ಕೊನೆಗೆ ಯಶಸ್ವಿಯಾದನು. ತನ್ನೊಳಗಿನ ಆತ್ಮಸ್ತೆçರ್ಯ ಹಾಗೂ ಮಾಡೇತೀರುವೆನೆಂಬ ದೃಢವಾದ ನಂಬಿಕೆ ಬಲವಾಗಿ¨ªಾಗ ಹೀಗೆ ಮಾಡಲು ಸಾಧ್ಯ. ನನ್ನ ಕೈಲಾಗುವುದಿಲ್ಲ ಎಂದು ಆತ ಇತರರಂತೆ ಹಿಂಜರಿಯಲಿಲ್ಲ. ಬದಲಾಗಿ ಪ್ರಯತ್ನಿಸಿದ ಹಾಗೂ ಕಲಿಕೆಯನ್ನು ಸಿದ್ಧಿಸಿಕೊಂಡ.

ನಾವು ಹೀಗೂ ಮಾಡಬಹುದೆ ಎಂಬ ನಿರ್ಧಾರ ನಮ್ಮಲ್ಲಿ ಬಲವಾದಾಗ ಅಸಾಧ್ಯವೆಂಬುದು ತಲೆದೋರಿದರೆ ಮಾಡುವ ಕಾರ್ಯ ಅರ್ಧಕ್ಕೆ ನಿಲ್ಲುತ್ತದೆ. ಕೈಗೊಂಡ ಕಾರ್ಯದಲ್ಲಿ ಯಶಸ್ಸು ಸಿಗದೆ ನಮ್ಮ ಮನಸ್ಸು ಪೇಚಿಗೆ ಸಿಲುಕಿ ಒದ್ದಾಡುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ವಕಲಿಕೆ ಅತೀ ಅವಶ್ಯವಾಗಿದ್ದು, ಜ್ಞಾನವನ್ನು ಎಲ್ಲ ಮೂಲಗಳಿಂದ ಪಡೆಯುವ ಮಾರ್ಗವೂ ನಮಗೆ ಗೊತ್ತಿದೆ. ನಿತ್ಯವೂ ಹೊಸತನ್ನು ಕಲಿಯುತ್ತ, ಸಾಗೋಣ ಜೀವನ ಸಾರ್ಥಕ ಮಾಡಿಕೊಳ್ಳೋಣ.  ಶಂಕರಾನಂದ ಹೆಬ್ಬಾಳ

Advertisement

Udayavani is now on Telegram. Click here to join our channel and stay updated with the latest news.

Next