Advertisement
ಇತ್ತೀಚೆಗೆ ಒಬ್ಬರು ಹಿರಿಯರ ಜೊತೆ ಕೆಲ ಹೊತ್ತು ಮಾತನಾಡುವ ಅವಕಾಶ ಸಿಕ್ಕಿದಾಗ ಈ ವಿಷಯ ಮುನ್ನೆಲೆಗೆ ಬಂತು. ಹಾಗೆಯೇ ಅವರೊಡನೆ ಮಾತನಾಡುತ್ತಾ ಮಾತಿನ ಮಧ್ಯೆ “ನೀವು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಇಲ್ವಾ?” ಅಂದೆ. ಅರೆ ಕ್ಷಣ ನಕ್ಕ ಅವರು “ನಂದೂ ಒಂದು ಫೇಸುºಕ್ ಅಕೌಂಟ್ ಇದೆಯಪ್ಪಾ ಒಬೆರಾಯನ ಕಾಲದ್ದು, ಆಗಾಗ ತೆಗೆದು ಏನಾದ್ರೂ ಓದ್ತಾ ಇರ್ತೀನಿ” ಅಂದ್ರು. ಅವರ ಬದುಕು, ಜೀವನಶೈಲಿ ಎಲ್ಲದರ ಬಗ್ಗೆ ಅರಿವಿದ್ದ ನನಗೆ ಅದನ್ಯಾಕೆ ಅವರು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ ಅನ್ನೋ ಕುತೂಹಲ.
Related Articles
Advertisement
‘ನಮಗೆ ನಾವೇ ಹೊರತು ಇನ್ಯಾರು?’ ಅನ್ನೋ ನಿಯಮ ಆ ಜಗತ್ತಿನದ್ದು. ಆದರೆ ಅದನ್ನೇ ಎಲ್ಲ ಕಡೆಯೂ ಮಾಡಿದರೆ! ಪ್ರಾಪಂಚಿಕ ಬದುಕಿನಲ್ಲಿ ನಾವು ನಮಗಿಂತ ಹೆಚ್ಚು ಬದುಕುವುದು ಇತರರಿಗಾಗಿ. ಇತರರನ್ನು ತೃಪ್ತಿ ಪಡಿಸಲು ಕಷ್ಟಗಳನ್ನು ಸಹಿಸಿ ಹೋರಾಡುವ ಪರಿಸ್ಥಿತಿಯೂ ಇಲ್ಲಿದೆ. ಅಂದಾಗ ನಮ್ಮ ಬದುಕು ಹೇಗಿದ್ದರೂ ಪರೋಪಕಾರಿಯಾಗಿದ್ದರೆ ಮಾತ್ರವೇ ಶ್ರೇಷ್ಠವಾಗಲು ಸಾಧ್ಯ.
ಹಾಗಂತ ಇಲ್ಲಿ ತಮ್ಮ ಬಗ್ಗೆ ತಾವು ಹೇಳಿಕೊಳ್ಳುವುದು, ದೈನಂದಿನ ಚಟುವಟಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದು ತಪ್ಪು ಎಂದೇನು ಹೇಳುತ್ತಿಲ್ಲ. ಅದು ಅವರವರ ಆಸಕ್ತಿ. ಪ್ರತಿಯೊಬ್ಬರಿಗೂ ಈ ದೇಶದ ಕಾನೂನು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಆದರೆ ಅದನ್ನು ಉಪಯೋಗಿಸುವ ಕಲೆ ತಿಳಿದಿರಬೇಕು. ಕೆಲವರ ಜೀವನ ಎಷ್ಟೋ ಜೀವಗಳಿಗೆ ಸ್ಪೂರ್ತಿ ನೀಡಬಹುದು, ನೋವುಂಡ ಮನಸ್ಸಿನಲ್ಲಿ ನಗು ತರಿಸಬಹುದು.
ಅದನ್ನು ಸೀಮೀತ ಚೌಕಟ್ಟಿನಲ್ಲಿ ಹಂಚಿಕೊಳ್ಳಬಹುದು. ಆದರೆ ಅಂತಹವರದ್ದು ಮಾತ್ರವೇ ಜೀವನ ಪ್ರೀತಿ ಎಂಬಂತೆ ಬಿಂಬಿಸುವುದು ತಪ್ಪಾಗುತ್ತದೆ. ಬದುಕು ಎಲ್ಲರನ್ನೂ ಒಂದೊಂದು ದಾರಿಯಲ್ಲಿ ನಡೆಸುತ್ತದೆ, ಒಬ್ಬರದು ಕಾಡು ಹಾದಿಯಾದರೆ ಇನ್ನೊಬ್ಬರದು ಹೈವೇ ರಸ್ತೆ. ಪ್ರತಿಯೊಬ್ಬರೂ ತಮ್ಮ ಪಯಣವನ್ನು ಪ್ರೀತಿಸಿದವರು, ಪ್ರೀತಿಸುವವರು, ಮತ್ತು ಸದಾ ಪ್ರೀತಿಸುತ್ತಲೇ ಇರುವವರು.
-ಸುದರ್ಶನ್ ಪ್ರಸಾದ್
ಕೊಪ್ಪ