Advertisement

UV Fusion: ಬರ್ಮುಡಾ ಟ್ರಯಾಂಗಲ್

03:16 PM Sep 10, 2023 | Team Udayavani |

ಈ ಜಗತ್ತಿನಲ್ಲಿ ಸಾಕಷ್ಟು ವಿಸ್ಮಯಗಳಿವೆ. ಬಗೆಹರಿಸಲು ಅಸಾಧ್ಯವಾದಂತ ರಹಸ್ಯಗಳು ನೆಲೆ ನಿಂತಿದೆ. ಇಂತಹ ರಹಸ್ಯಗಳನ್ನು ಬಗೆಹರಿಸಲು ಪ್ರಯತ್ನ ಪಟ್ಟರೂ ಬಗೆಹರಿಯದಿದ್ದಾಗ ಕೈ ಬಿಟ್ಟವರು ಇದ್ದಾರೆ. ಇಂತಹದ್ದೇ ಹಲವಾರು ರಹಸ್ಯಗಳೊಳಗೆ ವಿಶ್ವದ ಪ್ರಖ್ಯಾತ ವಿಜ್ಞಾನಿಗಳಿಗೂ ಬಗೆಹರಿಸಲಾಗದೆ ಇನ್ನೂ ಹಾಗೆ ಉಳಿದಿರುವುದರಲ್ಲಿ ಅಟ್ಲಾಂಟಿಕ್‌ ಮಹಾಸಾಗರದ ಬಳಿ ಕಾಣಸಿಗುವ ಬರ್ಮುಡಾ ಟ್ರಯಾಂಗಲ್‌ ಕೂಡ ಒಂದು. ‌

Advertisement

ಈ ಸ್ಥಳವನ್ನು ಡೆವಿಲ್‌ ಟ್ರಯಾಂಗಲ್‌ ಎಂದೂ ಕರೆಯಲಾಗುತ್ತದೆ. ಅಟ್ಲಾಂಟಿಕ್‌ ಮಹಾಸಾಗರ ನಕ್ಷೆಯಲ್ಲಿ ಫ್ಲೋರಿಡಾದಿಂದ ಬರ್ಮುಡಾ ದ್ವೀಪಗಳು ಅಲ್ಲಿಂದ ಫ‌ೂÂಟೋ ರೀಕೋ ಮತ್ತು ಅಲ್ಲಿಂದ ಪುನಃ ಫ್ಲೋರಿಡಾ ಪ್ರದೇಶಗಳಿಗೆ ಸರಿಯಾದ ನೇರಗಿರಿಯನ್ನು ಎಳೆದಾಗ ಉಂಟಾಗುವ ತ್ರಿಕೋನಾಕೃತಿಯ ನಡುವೆ ನಿಂತಿರುವ ಭಾಗವೇ ಈ ಬರ್ಮುಡಾ ಟ್ರಯಾಂಗಲ್.

ಈ ಪ್ರದೇಶದ ನಿಗೂಢತೆ ಏನೆಂದರೆ ಇಲ್ಲಿ ಹಾರಾಟ ಮಾಡಿದ ಹಲವಾರು ವಿಮಾನಗಳು ಜಲಮಾರ್ಗವಾಗಿ ಸಂಚರಿಸಿದ ಎಷ್ಟೋ ಹಡಗುಗಳು ಅಪಘಾತಕ್ಕೀಡಾಗಿತ್ತು. ಅಪಘಾತಕ್ಕೆ ಕಾರಣವಾಗಲಿ ವಿಮಾನ ಹಡಗಿನ ಅವಶೇಷವಾಗಲಿ ಇನ್ನು ಯಾರಿಗೂ ಸಿಗಲಿಲ್ಲ. ಈ ಕುರಿತಾಗಿ ವಿನಸೆಂಟ್‌ ಎಚ್‌. ಗಾಡಿ ಎನ್ನುವವರು 1964ರಲ್ಲಿ ಆರ್ಗೋಸಿ ಪತ್ರಿಕೆಯಲ್ಲಿ ಬರೆದ ಲೇಖನದಿಂದ ಈ ಸ್ಥಳವು ಜಗತ್ತಿನ ಗಮನ ಸೆಳೆಯಿತು. ಇದಕ್ಕೂ ಮುನ್ನ 1952ರಲ್ಲಿ ಜಾರ್ಜ್‌ ಎಕ್ಸ್‌ ಹಾಗೂ ಸೈನ್ಸ್‌ ಎನ್ನುವವರು ಈ ಕುರಿತಾಗಿ ತಮ್ಮ ಫೇಟ್‌ ಎಂಬ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ 1969ರಲ್ಲಿ ಬಿಡುಗಡೆಗೊಂಡ ಜಾನ್‌ ವ್ಯಲ್ಲೇಸ್‌ ಸ್ಪೆನ್ಸರ್‌ ಎಂಬವರ ಬರೆದ ಲಿಂಬೋ ಎಂಬ ಪುಸ್ತಕದ ಮೂಲಕ ಈ ಪ್ರದೇಶದ ಕುರಿತು ಜನರಿಗೆ ಹೆಚ್ಚಿನ ಮಾಹಿತಿ ಸಿಕ್ಕಿತು. ಆದರೆ ಜನರಿಗೆ ವಿಮಾನ ಮತ್ತು ಹಡಗುಗಳು ನಿಗೂಢವಾಗಿ ಕಾಣೆಯಾಗುತ್ತಿರುವ ಕುರಿತಾದ ಮಾಹಿತಿಯ ಹೊರೆತು ಅದರ ಕಾರಣವನ್ನು ಯಾರಿಗೂ ಪತ್ತೆ ಮಾಡಲಾಗಲಿಲ್ಲ. ಬರ್ಮುಡಾ ಟ್ರಯಾಂಗಲ್‌ ನಲ್ಲಿ ಕಣ್ಮರೆಯಾದ ಹಡಗುಗಳ ಮತ್ತು ವಿಮಾನಗಳ ನಿಖರವಾದ ಸಂಖ್ಯೆ ಇನ್ನೂ ತಿಳಿದು ಬರದಿದ್ದರೂ ಸಾಮಾನ್ಯ ಅಂದಾಜಿನ ಪ್ರಕಾರ ಸುಮಾರು 50 ಹಡಗುಗಳು ಮತ್ತು 20 ವಿಮಾನಗಳು ಕಾಣೆಯಾಗಿದೆ.‌

ಬರ್ಮುಡಾ ಟ್ರಯಾಂಗಲ್‌ ಆಗಾಗ ಉಂಟಾಗುವ ಉಷ್ಣವಲಯದ ಬಿರುಗಾಳಿ ಮತ್ತು ಚಂಡಮಾರುತಗಳಿಗೆ ಸಾಕ್ಷಿಯಾಗಿದೆ. ಅದು ಅಲ್ಲದೆ ಅಟ್ಲಾಂಟಿಕ್‌ ಮಹಾಸಾಗರದ ಆಳವಾದ ಸ್ಥಳವು ಮಿಲ್ವಾಕಿಯಾಗಿದೆ. ಇದು ಬರ್ಮುಡಾ ಟ್ರಯಾಂಗಲ್‌ ನಲ್ಲಿದೆ ಜತೆಗೆ ಈ ಸ್ಥಳದಲ್ಲಿ ಅಯಸ್ಕಾಂತಿಯ ಗುಣವಿದ್ದು ವಿಮಾನ ಮತ್ತು ಹಡಗುಗಳ ದಿಕ್ಕು ತಪ್ಪಿಸುತ್ತದೆ ಎಂಬ ಮಾತುಗಳು ಕೇಳಿಬಂದಿದೆ. ಈ ಕುರಿತಂತೆ ಕಾರ್ಲ್ ಕೃಷೆಲಿ°ಕ್ಕಿಯವರು ಮಾನವ ಮಾಡುವ ತಪ್ಪುಗಳಿಂದಲೇ ಇಲ್ಲಿ ವಿಮಾನ ಹಡಗುಗಳು ಕಣ್ಮರೆಯಾಗುತ್ತಿದ್ದು ಪ್ರತಿಕೂಲ ಹವಾಮಾನದ ಸಮಸ್ಯೆಯಿಂದಲೂ ವಿಮಾನ ಹಾಗೂ ಹಡಗುಗಳು ಸಮಸ್ಯೆ ಎದುರಿಸಿದೆ ಎಂದು ಅವರು ಹೇಳಿದ್ದಾರೆ.

 ಪೂರ್ಣಶ್ರೀ ಕೆ.

Advertisement

ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next