Advertisement

UV Fusion: ಸಮಾನತೆ

01:10 PM Sep 25, 2023 | Team Udayavani |

ಮೇಲ್ನೋಟಕ್ಕೆ ಇದು ಸರಳವಾದ ವಿಷಯದಂತೆ ಕಂಡರೂ ಅಷ್ಟು ಸುಲಭವಾಗಿ ಚರ್ಚಿಸುವಂತಹ ವಿಷಯ ಅಲ್ಲ.

Advertisement

ಪುರಾತನ ಕಾಲದಿಂದಲೂ ಗಂಡು ಶ್ರೇಷ್ಠ ಹೆಣ್ಣು ಕನಿಷ್ಠ, ಗಂಡು ಹೇಳಿದನ್ನು ಪಾಲಿಸುವುದು ಹೆಣ್ಣಿನ ಕರ್ತವ್ಯ ಹೀಗೆ ಹಲವು ವಿಷಯಗಳು ಕೇಳಿರುತ್ತೇವೆ. ಮಹಿಳೆ ಎಂದರೆ ಯಾರು? ಹೇಗಿರಬೇಕು? ಎಂಬ ಪ್ರಶ್ನೆ ಉದ್ಭವವಾದಾಗಲೆಲ್ಲಾ ಪುರುಷರೊಂದಿಗೆ ಹೋಲಿಸಿ ಅನಂತರ ಮಹಿಳೆ ಎಂದರೆ ಹೇಗಿರಬೇಕು ಎಂಬುದರ ಬಗ್ಗೆ ವ್ಯಾಖ್ಯಾನ ಮಾಡಲಾಗುತ್ತದೆ.

ಕೆಲವರಲ್ಲಿ ಸ್ತ್ರೀ ಪುರುಷರಿಬ್ಬರೂ ಸಮಾನರೇ? ಎಂಬ ಪ್ರಶ್ನೆಯನಿಟ್ಟಾಗ ಅವರು ದಿಢೀರನೇ ಅವರಿಬ್ಬರೂ ಬೇರೆ ಬೇರೆ. ನಿಸರ್ಗವೇ ಅವರಿಬ್ಬರ ದೇಹ ರಚನೆ, ಬಲ ಸಾಮರ್ಥ್ಯಗಳಲ್ಲಿ ವ್ಯತ್ಯಾಸ ಮಾಡಿದೆ. ಕೇವಲ ಹೆಣ್ಣಿನಿಂದ ಮಾತ್ರ ಒಂದು ಹೊಸ ಜೀವದ ಜನ್ಮ ಸಾಧ್ಯ. ಹೀಗೆ ಪ್ರಕೃತಿಯೇ ಬೇರೆಯಾಗಿಸಿರುವಾಗ ಅವರಿಬ್ಬರೂ ಒಂದೇ, ಸಮಾನರು ಎಂಬುದು ಎಷ್ಟರ ಮಟ್ಟಿಗೆ ಸರಿ ಎಂದು ನಮ್ಮ ಮುಂದೆ ಪ್ರಶ್ನೆ ಇಟ್ಟಿರುವುದನ್ನು ಕಾಣಬಹುದು.

ನಿಸರ್ಗ ಅವರಿಬ್ಬರನ್ನು ಹಲವು ವಿಷಯಗಳಲ್ಲಿ ಬೇರೆಯಾಗಿಟ್ಟಿರಬಹುದು ನಿಜ. ಆದರೆ ಇಬ್ಬರಲ್ಲಿ ಯಾರೊಬ್ಬರಿಗೂ ಗಾಯವಾದಾಗ ಬರುವುದು ಕೆಂಪು ರಕ್ತವೇ. ಆಗುವುದು ನೋವೇ. ಸ್ತ್ರೀ ಪುರುಷರ ದುಃಖಕ್ಕೆ ಕಾರಣ ಬೇರೆಯಾಗಿದ್ದರು ನೋಯುವುದು ಮನಸೆ.

ಹೆಣ್ಣು ಅಳುಬುರುಕಿ ಸಣ್ಣ ಪುಟ್ಟ ವಿಷಯಗಳಿಗು ಅಳುತ್ತಲೇ ಇರುತ್ತಾಳೆ ಎಂದು ಟೀಕೆ ಮಾಡಲಾಗುತ್ತದೆ. ಕಾರಣ ಮಹಿಳೆಯರು ದುಃಖ ಹೊರಹಾಕಲು ಇರುವ ಸಹಜ ದಾರಿ ಇದು ಎಂದು ನಂಬಿದ್ದಾರೆ. ಆದರೆ ಹೆಣ್ಣು ಮಾತ್ರ ಅಳುವುದು ಗಂಡು ಅಳಬಾರದು ಎಂದು ಎಲ್ಲೂ ಬರೆದಿಲ್ಲ. ಸ್ತ್ರೀ ಒಂದು ಹೊಸ ಜೀವಕ್ಕೆ ಜನ್ಮ ನೀಡಬಹುದು ನಿಜ. ಆದರೆ ಪುರುಷನಿಲ್ಲದೆ ಅದು ಸಾಧ್ಯವಿಲ್ಲ.

Advertisement

ಚಿಕ್ಕದಿನಿಂದಲೇ ಯುವಕರ ತಲೆಯಲ್ಲಿ ಹೆಣ್ಣು ಮಾತ್ರ ಅಳುವುದು ಗಂಡÇÉಾ ಎಂಬ ಭಾವನೆಯನ್ನು ತುಂಬಲಾಗುತ್ತದೆ. ಇಂದು ಮಹಿಳೆಯರು ಕೂಡ ಪುರುಷರ ಸಮಾನವಾಗಿಯೇ ಹೆಜ್ಜೆಯಿನ್ನಿಟ್ಟಿದ್ದಾರೆ. ಆದರೂ ಕೂಡ ಈ ಇಪ್ಪತ್ತನೇ ಶತಮಾನದಲ್ಲಿಯೂ ಆಕೆಯನ್ನು ಗೌರವಿಸಲಾಗುತ್ತಿಲ್ಲ. ಇಂದಿಗೂ ಕೂಡ ಜನರು ಮಹಿಳೆ ಎಂದರೆ ಅಡುಗೆ ಮನೆಗೆ ಸೀಮಿತ ಎಂದು ಭಾವಿಸಿದ್ದಾರೆ.

ಯಾವುದೇ ಒಂದು ಹೊಸ ಬದಲಾವಣೆ ಪ್ರಾರಂಭವಾಗಬೇಕಾದರೆ ಮನೆಯಿಂದಲೇ ಶುರುವಾಗಬೇಕು ಎಂಬುದು ಉಂಟು. ಅದೇ ರೀತಿ ಒಂದು ಹೆಣ್ಣು ಎಲ್ಲಿಯ ವರೆಗೆ ಇನ್ನೊಂದು ಹೆಣ್ಣನ್ನು ಗೌರವಿಸುವುದಿಲ್ಲವೋ ಅಲ್ಲಿಯವರೆಗೆ ನಾವು ಅದನ್ನು ಇತರರಿಂದ ಬಯಸಬಾರದು.

ಕೆಲವು ವಿಷಯದಲ್ಲಿ ಸ್ತ್ರೀ ಪುರುಷರಲ್ಲಿ ವ್ಯತ್ಯಾಸಗಳಿದ್ದರು ಭಾವ, ಭಾವನೆಗಳಿಂದ ಒಬ್ಬರಿಂದ ಇನ್ನೊಬ್ಬರು ಭಿನ್ನವಲ್ಲ.

-ವಾಣಿ ದಾಸ್‌

ಎಂ.ಎಂ. ವಿದ್ಯಾಲಯ ಶಿರಸಿ

 

Advertisement

Udayavani is now on Telegram. Click here to join our channel and stay updated with the latest news.

Next