Advertisement
ಇಂತಹ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ನಮ್ಮ ಬಹುವಿಖ್ಯಾತ ಸಂಪತ್ತಿನ ನೆಲ ಜಲದ ನಾಡಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಈ ಎಲ್ಲ ಸಂಪತ್ತನ್ನು ಉಳಿಸಿ ಬೆಳೆಸುವುದಾಗಿದೆ. ಇಂತಹ ಮಾನವ ನಿರ್ಮಿತ, ನೈಸರ್ಗಿಕ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಯವರೆಗೂ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ ಇಂತಹ ಸಂಪನ್ಮೂಲಗಳನ್ನು ಮಿತಿಯಾಗಿ ಬಳಸಿ ಅವಶ್ಯಕತೆಯ ಮೇರೆಗೆ ಉಪಯೋಗಿಸಿ ಯಾವುದೇ ಕಾರಣಕ್ಕೂ ಈ ನೆಲ ಜಲದ, ಪ್ರಾಣಿ ಪಕ್ಷಿ ಸಂಕುಲ ಹಾಗೂ ಸಸ್ಯ ಸಂಪತ್ತಿಗೂ ಧಕ್ಕೆ ಭರದಂತೆ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ ಹಾಗೂ ಮೇಲಾಗಿ ಅದು ಹಕ್ಕು ಕೂಡ ಆಗಿದೆ.
Related Articles
Advertisement
ಇದು ಪ್ರತಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿಯೂ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಗುರಿಯನ್ನು ಹೊಂದಿದೆ. ಈ ಮಹತ್ತರ ಕಾರ್ಯಕ್ರಮವನ್ನು ಇದೇ 30 ಆಗಸ್ಟ್ 2023ರಂದು ದಿಲ್ಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿಕ ಅಮೃತ ವಾಟಿಕಾ ಉದ್ಯಾನದ ಬಳಿ ಕರ್ತವ್ಯ ಪಥದಲ್ಲಿ ಸಮಾರೋಪ ಸಮಾರಂಭವನ್ನು ನಡೆಸುವ ಮೂಲಕ ಇದನ್ನು ಪೂರ್ಣಗೊಳಿಸುವ ಉದ್ದೇಶವನ್ನು ಹೊಂದಿದೆ.
ದೇಶಾದ್ಯಂತ 7,500 ಸ್ಥಳಗಳಿಂದ 7,500 ಕುಂಡಲಗಳಲ್ಲಿ ಮಣ್ಣು, ಸಸಿಗಳನ್ನು ಇರಿಸಿ ಯುದ್ಧ ಸ್ಮಾರಕದ ಬಳಿ ಅಮೃತ ವಾಟಿಕಾ ಉದ್ಯಾನವನ ನಿರ್ಮಿಸಲಾಗುವ ಮಹತ್ತರವಾದ ಪ್ರಯತ್ನವನ್ನು ನಡೆಸಲಾಗುತ್ತಿದೆ. ಇಂತಹ ವಿಭಿನ್ನ ಕಾರ್ಯಕ್ರಮಗಳು ಹಾಗೂ ಯೋಜನೆಗಳು ನಮ್ಮ ದೇಶದ ವಿವಿಧತೆಯಲ್ಲಿನ ಏಕತೆಯನ್ನು ರಕ್ಷಿಸಿಕೊಳ್ಳಲು ಮತ್ತು ಎಲ್ಲ ನೈಸರ್ಗಿಕ ಹಾಗೂ ಕೃತಕ ಸಂಪನ್ಮೂಲಗಳನ್ನು ಹಿಡಿದಿಟ್ಟುಕೊಳ್ಳುವ ಕಾರಣಕ್ಕಾಗಿ ಹಲವಾರು ವಿಚಾರಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಆ ವಿಚಾರಗಳನ್ನು ಮತ್ತು ನೆಲ ಜಲದ ಸಂರಕ್ಷಣೆಯು ಪ್ರತಿಯೊಬ್ಬರ ಕರ್ತವ್ಯ, ಹಕ್ಕು ಆಗಿದೆ ಎಂದು ಈ ಮೂಲಕ ನಾವೆಲ್ಲರೂ ಅರಿತುಕೊಳ್ಳಬೇಕಿದೆ ಮತ್ತು ಈ ಕಾರ್ಯಕ್ರಮದ ಧ್ಯೇಯೋದ್ದೇಶಕ್ಕೆ ನಾವೆಲ್ಲರೂ ಕೈಜೋಡಿಸಿ ಸಹಕರಿಸಬೇಕಿದೆ.
ಹನುಮಂತ ದಾಸರ, ಧಾರವಾಡ