Advertisement

Rescue: ಸುರಂಗ ಕುಸಿತ… 6ನೇ ದಿನಕ್ಕೆ ಕಾಲಿಟ್ಟ ಕಾರ್ಯಾಚರಣೆಯಲ್ಲಿ ಗಮನಾರ್ಹ ಪ್ರಗತಿ

12:50 PM Nov 17, 2023 | sudhir |

ಡೆಹ್ರಾಡೂನ್: ಉತ್ತರಕಾಶಿಯಲ್ಲಿನ ರಕ್ಷಣಾ ತಂಡಗಳು ಸಿಲ್ಕ್ಯಾರಾ ಸುರಂಗದೊಳಗೆ ಸಿಕ್ಕಿಬಿದ್ದ 40 ಕಾರ್ಮಿಕರನ್ನು ಹೊರತರಲು ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ರಾತ್ರೋರಾತ್ರಿ ಗಮನಾರ್ಹ ಪ್ರಗತಿ ಸಾಧಿಸಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ತಲಾ 900 ಎಂಎಂ ವ್ಯಾಸ ಮತ್ತು 6 ಮೀಟರ್ ಉದ್ದದ ಐದು ಪೈಪ್‌ಗಳನ್ನು ಈಗ ಸಂಪೂರ್ಣವಾಗಿ ಅವಶೇಷಗಳೊಳಗೆ ಸೇರಿಸಲಾಗಿದೆ. ಆದಾಗ್ಯೂ, ಶಿಲಾಖಂಡರಾಶಿಗಳೊಳಗೆ ಬಂಡೆ ಕಲ್ಲುಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಕೊರೆಯುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು ಬಳಿಕ ಡೈಮಂಡ್-ಬಿಟ್ ಯಂತ್ರಗಳ ಸಹಾಯದಿಂದ ಅಡಚಣೆಯನ್ನು ತೆರವುಗೊಳಿಸಲಾಯಿತು ಆ ಕೂಡಲೇ ಕೊರೆಯುವ ಪ್ರಕ್ರಿಯೆ ಮತ್ತೆ ಪುನರಾರಂಭವಾಯಿತು ಎಂದು ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ 6 ಗಂಟೆಯ ವೇಳೆಗೆ ಸುರಂಗದೊಳಗೆ ಸಂಗ್ರಹವಾದ ಅವಶೇಷಗಳ 25 ಮೀಟರ್‌ಗಳಷ್ಟು ಸುಧಾರಿತ ಆಗರ್ ಡ್ರಿಲ್ಲಿಂಗ್ ಯಂತ್ರವನ್ನು ಕೊರೆಯಲಾಗಿದೆ ಎಂದು ತುರ್ತು ಕಾರ್ಯಾಚರಣೆ ಕೇಂದ್ರದ ಸಿಲ್ಕ್ಯಾರಾ ನಿಯಂತ್ರಣ ಕೊಠಡಿ ಮಾಹಿತಿ ನೀಡಿದೆ.

ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು ಇನ್ನೂ 30 ರಿಂದ 40 ಮೀಟರ್ ಅವಶೇಷಗಳನ್ನು ತೆರವುಗೊಳಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗರ್ ಯಂತ್ರವು ಅದರ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಆದ್ದರಿಂದ ಕಾರ್ಮಿಕರನ್ನು ಬೇಗನೆ ರಕ್ಷಿಸಬಹುದು ಎಂದು ಅವರು ಹೇಳಿದರು.

ಅಧಿಕಾರಿಗಳ ಪ್ರಕಾರ ಆಗರ್ ಯಂತ್ರವು ಪ್ರತಿ ಗಂಟೆಗೆ 5 ಮೀಟರ್‌ಗಳಷ್ಟು ಕೊರೆಯುವ ಶಕ್ತಿಯನ್ನು ಹೊಂದಿದ್ದು ಇದು ಹಿಂದಿನ ಯಂತ್ರದ ಸಾಮರ್ಥ್ಯಕ್ಕಿಂತ ಗಮನಾರ್ಹ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: Chhattisgarh Elections 2023: 2ನೇ ಹಂತದ ಮತದಾನದ ವೇಳೆ ಐಇಡಿ ಸ್ಫೋಟಿಸಿದ ನಕ್ಸಲ್‌ ಪಡೆ

Advertisement

Udayavani is now on Telegram. Click here to join our channel and stay updated with the latest news.

Next