Advertisement

ಚಮೋಲಿ ದುರ್ಘಟನೆ : ಮೃತರ ಸಂಖ್ಯೆ 56ಕ್ಕೆ ಏರಿಕೆ

07:04 PM Feb 15, 2021 | Team Udayavani |

ಚಮೋಲಿ : ಉತ್ತರಾಖಂಡದ ಚಮೋಲಿಯ ದುರ್ಘಟನೆಗೆ ಸಂಬಂಧಪಟ್ಟ ಪತ್ತೆ ಕಾರ್ಯಾಚರಣೆ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ 18  ಮೃತದೇಹಗಳನ್ನು ಎಸ್ ಡಿ ಆರ್ ಎಫ್ (State Disaster Response Force) ಹೊರ ತೆಗೆದಿದೆ.

Advertisement

ತಪೋವನ್ ಬಳಿಯ ಸುರಂಗದಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯದ ಸಂದರ್ಭದಲ್ಲಿ ಎಸ್ ಡಿ ಆರ್ ಎಫ್ 18 ಮೃತ ದೇಹಗಳನ್ನು ಹೊರತೆಗೆದಿದೆ. ಆ ಮೂಲಕ ಹಿಮ ನದಿ ಸ್ಫೋಟದ ಕಾರಣದಿಂದ ಉಂಟಾದ ಪ್ರವಾಹದ ಸೃಷ್ಟಿಯಿಂದಾಗಿ ಮೃತಪಟ್ಟವರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಓದಿ : ರಮೇಶ್ ಜಾರಕಿಹೊಳಿ ಎರಡು ದೋಣಿಯಲ್ಲಿ ಕಾಲಿಟ್ಟಿರುವಂತಿದೆ : ಲಕ್ಷ್ಮಿ ಹೆಬ್ಬಾಳಕರ್ ವ್ಯಂಗ್ಯ

“ರಕ್ಷಾಣಾ ಪಡೆಯವರು ಸುರಂಗದಲ್ಲಿ ಪತ್ತೆ ಕಾರ್ಯವನ್ನು ಮುಂದುವರಿಸಿದ್ದಾರೆ. ಪ್ರತಿಕೂಲ ವಾತಾವರಣವಿದ್ದಾಗ ನಾವು ಭರವಸೆಯನ್ನು ಇಟ್ಟುಕೊಳ್ಳಬಹುದು” ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.

ನಾಪತ್ತೆಯಾದವರ ಕುಟುಂಬದವರು ಸುರಂಗದ ಬಳಿ ಜಾಗರಣೆ ಹೂಡಿದ್ದಾರೆ. ರಕ್ಷಣಾ ಪಡೆಯವರು ಸುರಂಗದಿಂದ ದೇಹಗಳನ್ನು ಹೊರತರುವುದನ್ನೇ ಕಾದು ನೊಂದು ಕೂತಿದ್ದಾರೆ. ಕೆಲವರು ನಿರಾಶೆಯಿಂದ ಮರಳಿ ಮನೆ ಕಡೆ ಹಿಂದಿರುಗಲಾರಂಭಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

Advertisement

ಇನ್ನು, “ರಕ್ಷಣಾ ಪಡೆಗಳ ಪತ್ತೆ ಕಾರ್ಯದ ಬೆಳವಣಿಗೆಯನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಸ್ಥಳಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಪೂರೈಸುವ ಕೆಲಸವೂ ಆಗುತ್ತಿದೆ. ಭಯ ಪಡುವ ಅಗತ್ಯವಿಲ್ಲ” ಎಂದು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.

ಓದಿ : #DishaRavi ಬಂಧನ ಪ್ರಜೆಗಳ ಮೇಲಿನ ದೌರ್ಜನ್ಯ ಮಾತ್ರವಲ್ಲ… : ಸಿದ್ದರಾಮಯ್ಯ ಟ್ವೀಟಾಕ್ರೋಶ

Advertisement

Udayavani is now on Telegram. Click here to join our channel and stay updated with the latest news.

Next