Advertisement

ರುದ್ರಪ್ರಯಾಗದಲ್ಲಿ ಜಗತ್ತಿನ ಅತೀದೊಡ್ಡ ರೋಪ್‌ ವೇ ನಿರ್ಮಾಣ; ಉತ್ತರಾಖಂಡ ಸರಕಾರ 

01:24 AM Dec 22, 2021 | Team Udayavani |

ಉತ್ತರಾಖಂಡ ಸರಕಾರ ರುದ್ರಪ್ರಯಾಗದಲ್ಲಿ ಜಗತ್ತಿನ ಅತೀದೊಡ್ಡ ರೋಪ್‌ ವೇ ನಿರ್ಮಾಣಕ್ಕೆ ಚಿಂತನೆ ನಡೆಸಿದೆ. ಗೌರಿಕುಂಡದಿಂದ ಕೇದಾರನಾಥಕ್ಕೆ ಭಕ್ತರು 16 ಕಿಮೀ ದೂರ ನಡೆದುಕೊಂಡು ಪ್ರಯಾಣಿಸಬೇಕಾ­ಗಿದೆ. ಉದ್ದೇಶಿತ ಯೋಜನೆ ಶೀಘ್ರ ಜಾರಿಗೊಂಡು ಮುಕ್ತಾಯವಾದರೆ ಅನುಕೂಲವಾಗಲಿದೆ.

Advertisement

ಪ್ರಧಾನಿ ಏನು ಹೇಳಿದ್ದರು?
ನ.5ರಂದು ಕೇದಾರನಾಥಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಕೇದಾರನಾಥದಿಂದ ಶ್ರೀ ಹೇಮಕುಂಡದವರೆಗಿನ ರೋಪ್‌ ವೇ ಕಾಮಗಾರಿ ಶೀಘ್ರವಾಗಿ ಶುರುವಾಗಲಿದೆ ಎಂದು ಹೇಳಿದ್ದರು.

ಎಲ್ಲಿಂದ ಎಲ್ಲಿಗೆ?
ಸೋನ ಪ್ರಯಾಗದಿಂದ ಕೇದಾರನಾಥ
1 ಗಂಟೆ- ರೋಪ್‌ ವೇಯಲ್ಲಿ ಬೇಕಾಗಲಿ ರುವ ಸಮಯ
1,000 ಕೋಟಿ ರೂ.- ಸದ್ಯಕ್ಕೆ ಅಂದಾಜು ಮಾಡಲಾಗಿರುವ ವೆಚ್ಚ
2,000- ಪ್ರತೀ ಗಂಟೆಗೆ ಪ್ರಯಾಣಿಸ ಲಿರುವವರು

11,500 ಅಡಿ- ಸಮುದ್ರ ಮಟ್ಟದಿಂದ ರುದ್ರಪ್ರಯಾಗ ಇರುವ ಎತ್ತರ
11.5 ಕಿಮೀ- ರೋಪ್‌ ವೇ ಅನುಷ್ಠಾನಗೊಳ್ಳಲಿರುವ ದೂರ
16 ಕಿಮೀ- ಭಕ್ತರು ಸದ್ಯ ನಡೆದುಕೊಂಡು ಹೋಗುತ್ತಿರುವ ದಾರಿ. ಗೌರಿಕುಂಡದಿಂದ ಆರಂಭ
8 ಕಿಮೀ- ಸೋನಪ್ರಯಾಗದಿಂದ ಗೌರಿಕುಂಡದ ವರೆಗಿನ ವಾಹನ ಸಂಚರಿಸುವ ರಸ್ತೆಯ ದೂರ

ರೋಪ್‌ ವೇ ಕಾಮಗಾರಿ ಕುರಿತ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಕ್ರಮ ಕೈಗೊಳ್ಳ ಲಾಗಿದೆ. ಹಿಂದಿನ ಯೋಜನೆ ಪ್ರಕಾರ ಗೌರಿಕುಂಡದಿಂದ ಕೇದಾರನಾಥದವರೆಗೆ ರೋಪ್‌ ವೇ ನಿರ್ಮಾಣಕ್ಕೆ ಚಿಂತಿಸಲಾಗಿತ್ತು. ಪರಿಷ್ಕೃತ ಯೋಜನೆಯಂತೆ ಸೋನಪ್ರಯಾಗದಿಂದಲೇ ಶುರುವಾಗಲಿದೆ.
-ಎಸ್‌.ಕೆ.ಜೈನ್‌, ಯೋಜನೆಯ ಸಲಹೆಗಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next