Advertisement

ಉತ್ತರಾಖಂಡ: ಆಗಸದಲ್ಲೇ ನಿಂತ ಕೇಬಲ್‌ ಕಾರು: ಶಾಸಕರೂ ಲಾಕ್‌

08:05 PM Jul 10, 2022 | Team Udayavani |

ಡೆಹ್ರಾಡೂನ್‌: ಜಾರ್ಖಂಡ್‌ನ‌ ದಿಯೋಗರ್‌ನಲ್ಲಿ ನಡೆದ ಕೇಬಲ್‌ ಕಾರು ಅಪಘಾತದ ನೆನಪು ಮಾಸುವ ಬೆನ್ನಲ್ಲೇ ಉತ್ತರಾಖಂಡದ ತೆಹ್ರಿ ಜಿಲ್ಲೆಯಲ್ಲಿ ಮತ್ತೊಂದು ರೋಪ್‌ವೇನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.

Advertisement

ತಾಂತ್ರಿಕ ಸಮಸ್ಯೆಯಿಂದಾಗಿ 45 ನಿಮಿಷಗಳ ಕಾಲ ರೋಪ್‌ವೇನಲ್ಲೇ ಕುಳಿತಿದ್ದ ಬಿಜೆಪಿ ಶಾಸಕ ಸೇರಿ 60 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಸುರ್ಕಂದ್‌ ದೇವಿ ದೇಗುಲದ ರೋಪ್‌ವೇನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದೆ.

ಸ್ವಲ್ಪ ದೂರ ಸಾಗುತ್ತಿದ್ದಂತೆಯೇ ಕೇಬಲ್‌ ಕಾರು ಸ್ಥಗಿತಗೊಂಡಿದೆ. ತಂತ್ರಜ್ಞರ ಸಹಾಯದಿಂದಾಗಿ ಕೇಬಲ್‌ ಕಾರು ಸರಿ ಮಾಡಿ, 60 ಮಂದಿಯನ್ನು ರಕ್ಷಿಸಲಾಗಿದೆ.

ಈ ಹಿಂದೆ ಮೇ ತಿಂಗಳಲ್ಲಿ ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯ ಶಾರದಾ ದೇಗುಲದ ರೋಪ್‌ವೇನಲ್ಲೂ ಇದೇ ರೀತಿ ಸಮಸ್ಯೆಯುಂಟಾಗಿ ಪ್ರಯಾಣಿಕರು 1 ಗಂಟೆ ಕೇಬಲ್‌ ಕಾರಿನಲ್ಲೇ ಕುಳಿತಿದ್ದರು. ಹಿಮಾಚಲ ಪ್ರದೇಶದಲ್ಲೂ ಸಮಸ್ಯೆ ಕಾಣಿಸಿಕೊಂಡಿತ್ತು.

ಏಪ್ರಿಲ್‌ನಲ್ಲಿ ಜಾರ್ಖಂಡ್‌ನ‌ ಕೇಬಲ್‌ ಕಾರ್‌ ಅಪಘಾತದಿಂದಾಗಿ ಮೂವರು ಸಾವನ್ನಪ್ಪಿದ್ದರು. ಬರೋಬ್ಬರಿ 40 ಗಂಟೆಗಳ ಕಾಲ ಜನರು ಕೇಬಲ್‌ ಕಾರಿನಲ್ಲೇ ಸಮಯ ಕಳೆದಿದ್ದರು.

Advertisement

ಎನ್‌ಡಿಆರ್‌ಎಫ್ ನಿಂದ ಆಡಿಟ್‌:
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ(ಎನ್‌ಡಿಆರ್‌ಎಫ್) ತಂಡವು ದೇಶದಲ್ಲಿರುವ ಎಲ್ಲ ರೋಪ್‌ವೇಗಳು ಮತ್ತು ಕೇಬಲ್‌ ಕಾರ್‌ಗಳ ಸಮೀಕ್ಷೆಯನ್ನು ಆರಂಭಿಸಿದೆ. ಸಂಭವನೀಯ ಭದ್ರತಾ ನ್ಯೂನ್ಯತೆಯನ್ನು ಕಂಡುಹಿಡಿಯಲು ಮತ್ತು ಅಪಘಾತದ ಸಮಯದಲ್ಲಿ ಪರಿಣಾಮಕಾರಿ ರಕ್ಷಣಾ ಕಾರ್ಯಾಚರಣೆ ನಡೆಸಲು ನೀಲನಕ್ಷೆಯನ್ನು ತಯಾರಿಸುವ ನಿಟ್ಟಿನಲ್ಲಿ ಈ ಪರಿಶೀಲನೆ ನಡೆಸಲಾಗುತ್ತಿದೆ. ಹಾಗೆಯೇ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಸಿಬ್ಬಂದಿಗೆ ಸೂಕ್ತ ತರಬೇತಿಯನ್ನು ನೀಡುವುದಕ್ಕೂ ಎನ್‌ಡಿಆರ್‌ಎಫ್ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next