ಡೆಹ್ರಾಡೂನ್: ಉತ್ತರಾಖಂಡದಲ್ಲಿರುವ ಚಾರ್‌ಧಾಮ್ ಭೇಟಿಗೆ ಇದ್ದ ಪ್ರವಾಸಿಗರ ಸಂಖ್ಯಾಮಿತಿಯನ್ನು ಅಲ್ಲಿನ ಉಚ್ಚ ನ್ಯಾಯಾಲಯ ತೆಗೆದುಹಾಕಿದ ಬೆನ್ನಲ್ಲೇ ಉತ್ತರಾಖಂಡ ಸರ್ಕಾರ ಹಲವು ಮಾರ್ಗದರ್ಶಿ ಸೂತ್ರಗಳಿರುವ ಹೊಸ ಆದೇಶ ಹೊರಡಿಸಿದೆ.
ಈ ಬಾರಿ ಕೇದಾರನಾಥ, ಬದರೀನಾಥ, ಗಂಗೋತ್ರಿ, ಯಮುನೋತ್ರಿಗಳಿಗೆ ಭೇಟಿ ಮಾಡಲು ಮೊದಲೇ ಆನ್‌ಲೈನ್‌ನಲ್ಲಿ ದಾಖಲಿಸಿಕೊಂಡು ಇ ಪಾಸ್ ಪಡೆದಿರಬೇಕು.
ಪ್ರವಾಸಿಗರು ಕೊರೊನಾ ಇಲ್ಲ ಎನ್ನುವ ಪ್ರಮಾಣಪತ್ರ ಅಥವಾ 2 ಡೋಸ್ ಲಸಿಕೆ ಹಾಕಿಸಿಕೊಂಡಿರುವ ಪ್ರಮಾಣಪತ್ರ ಸಲ್ಲಿಸಬೇಕು.
ಹಾಗೆಯೇ ದರ್ಶನ ಮಾಡುವಾಗ ಮಾಸ್ಕ್ ಧರಿಸಿರುವುದು ಕಡ್ಡಾಯ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಜಾಸ್ತಿಯಿರುವುದರಿಂದ ಈ ಆದೇಶ ಮಾಡಲಾಗಿದೆ.
ಈ ರಾಜ್ಯ ಪೂರ್ಣ ಪ್ರವಾಸೀ/ಯಾತ್ರಾ ಕ್ಷೇತ್ರವಾಗಿರುವುದರಿಂದ ಕೋವಿಡ್ ಪೀಡಿತರು ಬರುವುದು ಸಹಜ. ಅವನ್ನು ತಡೆಯುವುದು ಅನಿವಾರ್ಯವಾಗಿರುವುದರಿಂದ ಇಂಥ ಆದೇಶ ಹೊರಡಿಸಿದೆ.
ಇದನ್ನೂ ಓದಿ:ಬೆಂಜಮಿನ್ ಲಿಸ್ಟ್, ಮೆಕ್ ಮೆಲನ್‌ರಿಗೆ ಒಲಿದ ರಸಾಯನ ಶಾಸ್ತ್ರ ನೊಬೆಲ್