ಡೆಹ್ರಾಡೂನ್/ಹರಿದ್ವಾರ: ಉತ್ತರಾಖಂಡದ ಜೋಶಿಮಠದಲ್ಲಿ ಬಿರುಕು ಬಿಟ್ಟಿರುವ ಮನೆಗಳು ಹಾಗೂ ಕಟ್ಟಡಗಳ ಬಗ್ಗೆ ಖುದ್ದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಸ್ಥಳೀಯರ ಮನೆಗಳಿಗೆ ಕೂಡ ಭೇಟಿ ನೀಡಿ, ಅವರ ಜತೆಗೆ ಕುಳಿತು ಮಾತನಾಡಿ ಧೈರ್ಯ ತುಂಬಿದ್ದಾರೆ. ಎಲ್ಲ ರೀತಿಯ ಅಗತ್ಯ ನೆರವನ್ನು ರಾಜ್ಯ ಸರ ಕಾರ ನೀಡಲಿದೆ ಎಂದು ಭರವಸೆ ನೀಡಿದ್ದಾರೆ. ಜತೆಗೆ 600 ಕುಟುಂಬಗಳ ಸದಸ್ಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಆದೇಶವನ್ನೂ ನೀಡಿದ್ದಾರೆ.
ಜೋಶಿಮಠದ ಹಲವು ಸ್ಥಳಗಳಲ್ಲಿ ಇರುವ ಅಗಲ ಕಿರಿದಾದದ ರಸ್ತೆಗಳಲ್ಲಿ ಖುದ್ದಾಗಿ ನಡೆದು ಬಿರುಕು ಬಿಟ್ಟಿರುವ ಸ್ಥಳಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಗುರುವಾರದಿಂದ ಪಟ್ಟಣದಲ್ಲಿ ಇದ್ದು ಪರಿಸ್ಥಿತಿಯ ಅಧ್ಯಯನ ನಡೆಸುತ್ತಿರುವ ಹಿರಿಯ ಅಧಿಕಾರಿಗಳ ಜತೆಗೆ ಕೂಡ ಮುಖ್ಯಮಂತ್ರಿ ಮಾತುಕತೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಧಾಮಿ “ಅಪಾಯದ ಅಂಚಿನಲ್ಲಿರುವ ಪಟ್ಟಣದಿಂದ 600 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಆದೇಶ ನೀಡಿದ್ದೇನೆ. ದೀರ್ಘಕಾಲಿಕ ಪರಿಹಾರವನ್ನು ಕಂಡುಕೊಳ್ಳುವುದರ ಬಗ್ಗೆಯೂ ಹಲವು ಸೂತ್ರಗಳ ಬಗ್ಗೆ ಪರಾಮರ್ಶೆ ನಡೆಸಿದ್ದೇವೆ’ ಎಂದು ಹೇಳಿದ್ದಾರೆ.
ಶಿಷ್ಟಾಚಾರ ಬೇಡ: ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಶಿಷ್ಟಾಚಾರಗಳನ್ನು ಪಾಲಿಸುವುದು ಅಗತ್ಯವಿಲ್ಲ. ಸದ್ಯ ಸ್ಥಳೀಯರಿಗೆ ಬೇಕಾಗಿರುವುದು ತುರ್ತು ನೆರವು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳನ್ನು ನೇರವಾಗಿಯೇ ಸಂಪರ್ಕಿಸಿ, ಕ್ರಮ ಕೈಗೊಳ್ಳಬೇಕು ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ.
ಪರಿಹಾರ ಕೊಡಿ: ಹರಿದ್ವಾರದಲ್ಲಿ ಇರುವ ಜೋತಿಷ ಪೀಠದ ಪೀಠಾಧಿಪತಿ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಮಾತನಾಡಿ ಸ್ಥಳೀಯ ನಿವಾಸಿಗಳಿಗೆ ರಾಜ್ಯ ಸರ ಕಾರ ಸೂಕ್ತ ಪರಿಹಾರ ನೀಡ ಬೇಕು. ಅದು ಏಕಕಂತಿನ ಬೃಹತ್ ಪರಿಹಾರ ವಾಗ ಬೇಕು ಎಂದು ಆಗ್ರಹಿಸಿದ್ದಾರೆ. ಜೋಶಿಮಠ ಧಾರ್ಮಿ ಕವಾಗಿಯೂ ಸಾಂಸ್ಕೃತಿಕವಾಗಿಯೂ ಮಹತ್ವ ಪಡೆದ ಪಟ್ಟಣ ಎಂದು ಹೇಳಿದ್ದಾರೆ.
ಸನ್ನದ್ಧ ಸ್ಥಿತಿಯಲ್ಲಿ ಕಾಪ್ಟರ್‌ಗಳು
ಸದ್ಯ ಉಂಟಾಗಿರುವ ಪರಿಸ್ಥಿತಿಯ ಅಧ್ಯಯನಕ್ಕಾಗಿ ಕೇಂದ್ರ ಸರ ಕಾರ ಉನ್ನತ ಮಟ್ಟದ ತಂಡ ರಚನೆ ಮಾಡಿದೆ. ಇದೇ ವೇಳೆ ಪಟ್ಟಣದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ವೈದ್ಯಕೀಯ ಸಿಬಂದಿ, ಹೆಲಿಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಜೋಶಿಮಠದಲ್ಲಿ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಕೇಳಿ ಆತಂಕಗೊಂಡಿದ್ದೇನೆ. ರಾಜ್ಯ ಸರ ಕಾರ ಕೂಡಲೇ ಸ್ಥಳದಲ್ಲಿ ಇರುವ ಜನರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಭೂಕುಸಿತದಿಂದಾಗಿ ಭಗವತಿ ದೇಗುಲಕ್ಕೆ ಹಾನಿಯಾಗುವುದರಿಂದಲೂ ದುಃಖಿತನಾಗಿದ್ದೇನೆ.
-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ