ಡೆಹರಾಡೂನ್: ಭೂಕುಸಿತದಿಂದಾಗಿ ನಲುಗಿಹೋಗಿರುವ ಉತ್ತರಾಖಾಂಡದ ಪ್ರಸಿದ್ಧ ಪ್ರವಾಸಿ ತಾಣ ಜೋಶಿಮಠದ ಕುಸಿತ ನಿಯಂತ್ರಣ ಮತ್ತು ಜನರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ 2000 ಕೋಟಿ ರೂ. ಪರಿಹಾರ ಒದಗಿಸುವಂತೆ ಉತ್ತರಾಖಾಂಡ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ಉತ್ತರಾಖಾಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಕಾರ್ಯದರ್ಶಿ ಆರ್. ಮೀನಾಕ್ಷಿ ಸುಂದರಮ್ ಮಾಹಿತಿ ನೀಡಿದ್ದಾರೆ.
ʻರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಂತಿಮ ವರದಿ ಬಂದ ಬಳಿಕ ನಾವು ಕೇಳಿದ ಪರಿಹಾರದ ಮೊತ್ತದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆʼ ಎಂದೂ ಹೇಳಿದ್ದಾರೆ.
ಉತ್ತರಾಖಾಂಡ ಸರ್ಕಾರ ಮಾರ್ಚ್ 3 ರಿಂದಲೇ ಕಟ್ಟಡಗಳನ್ನು ಕಳೆದುಕೊಂಡವರಿಗೆ ಪರಿಹಾರ ನೀಡುವ ಕಾರ್ಯವನ್ನು ಆರಂಭಿಸಿದೆ. ಇದಕ್ಕಾಗೇ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ನೇತೃತ್ವದಲ್ಲಿ ಪುನರ್ವಸತಿ ಯೋಜನೆಯೊಂದನ್ನು ಪ್ರಾರಂಭಿಸಲಾಗಿದ್ದು ಮೊದಲ ದಿನವೇ ಮೂರು ಕುಟಂಬಗಳಿಗೆ ಒಟ್ಟು 63.20 ಲಕ್ಷ ರೂ. ಮೊತ್ತದ ಪರಿಹಾರವನ್ನು ನೀಡಲಾಗಿದೆ.
ಜೋಶಿಮಠದ ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ ಫೆಬ್ರವರಿಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಉತ್ತರಾಖಾಂಡ ಸರ್ಕಾರ ತೀರ್ಮಾನ ಕೈಗೊಂಡಿತ್ತು.
ಇದನ್ನೂ ಓದಿ :
ತನ್ನೊಂದಿಗೆ ಮಾತು ಬೇಡ ಎಂದ ಮಹಿಳೆಯನ್ನು ಹತ್ಯೆಗೈದ ಕ್ಯಾಬ್ ಚಾಲಕ