ನವದೆಹಲಿ:ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜೂನ್ 14ರಿಂದ 22ರವರೆಗೆ ಕೋವಿಡ್ ಕರ್ಫ್ಯೂವನ್ನು ವಿಸ್ತರಿಸಿರುವುದಾಗಿ ಉತ್ತರಾಖಂಡ್ ಸರ್ಕಾರ ಸೋಮವಾರ(ಜೂನ್ 14) ಘೋಷಿಸಿದೆ. ಅಲ್ಲದೇ ಜೂನ್ 22ರವರೆಗೂ ಕೋವಿಡ್ ನಿರ್ಬಂಧ ಕೂಡಾ ಮುಂದುವರಿಯಲಿದೆ ಎಂದು ಹೇಳಿದೆ.
ಇದನ್ನೂ ಓದಿ:ಪಾಕಿಸ್ತಾನದ ಹೆಸರಿಲ್ಲದೇ ಬಿಜೆಪಿ ರಾಜಕಾರಣವೇ ಇಲ್ಲ: ಬಿ.ಕೆ.ಹರಿಪ್ರಸಾದ್ ಆರೋಪ
ಕೆಲವೊಂದು ಸಣ್ಣ ಬದಲಾವಣೆಯೊಂದಿಗೆ ಈ ಹಿಂದಿನ ಮಾರ್ಗಸೂಚಿಯಂತೆ ಲಾಕ್ ಡೌನ್ ಮುಂದುವರಿಯಲಿದೆ ಎಂದು ರಾಜ್ಯ ಸಚಿವ ಸುಬೋಧ ಯೂನಿಯಾಲ್ ತಿಳಿಸಿದ್ದಾರೆ. ಕೋವಿಡ್ ಕರ್ಫ್ಯೂವನ್ನು ರಾಜ್ಯದಲ್ಲಿ ಜೂನ್ 14ರಿಂದ 22ರವರೆಗೆ ವಿಸ್ತರಿಸಲಾಗಿದೆ. ಏತನ್ಮಧ್ಯೆ ಚಮೋಲಿ, ರುದ್ರಪ್ರಯಾಗ್ ಮತ್ತು ಉತ್ತರಕಾಶಿ ಜನರು ಈಗ ಬದರಿನಾಥ್, ಕೇದಾರನಾಥ ಮತ್ತು ಗಂಗೋತ್ರಿ-ಯಮುನೋತ್ರಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಕೋವಿಡ್ ಆರ್ ಟಿ ಪಿಸಿಆರ್ ನೆಗೆಟೀವ್ ವರದಿ ಅಗತ್ಯವಾಗಿ ಇರಬೇಕಾಗುತ್ತದೆ ಎಂದು ವಿವರಿಸಿದೆ.
ಉತ್ತರಾಖಂಡ್ ರಾಜ್ಯಕ್ಕೆ ಬೇರೆ ಪ್ರದೇಶದಿಂದ ಆಗಮಿಸುವವರಿಗೆ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಎಂದು ಯೂನಿಯಾಲ್ ತಿಳಿಸಿದ್ದಾರೆ. ಒಂದು ವೇಳೆ ಲಸಿಕೆ ಪಡೆದುಕೊಳ್ಳಲು ಕೇಂದ್ರಕ್ಕೆ ತೆರಳಬೇಕಿದ್ದರೆ ಸೂಕ್ತ ದಾಖಲೆ ಇದ್ದರೆ ಅನುಮತಿ ನೀಡಿದೆ.
72ಗಂಟೆಗಳಿಗಿಂತ ಹಳೆಯದಲ್ಲದ ಆರ್ ಟಿ ಪಿಸಿಆರ್ ನೆಗೆಟಿವ್ ವರದಿ ಹೊಂದಿರುವ 20 ಮಂದಿಗೆ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ, ಅಂತ್ಯಸಂಸ್ಕಾರಕ್ಕೆ 20ಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳುವಂತಿಲ್ಲ.