Advertisement

ವಿವಾಹ ಆಮಂತ್ರಣದಲ್ಲಿ ಕೋವಿಡ್ ಜಾಗೃತಿ : ನೆಗೆಟಿವ್ ವರದಿಯೊಂದಿಗೆ ಮದುವೆಗೆ ಬರಲು ಆಹ್ವಾನ

04:02 PM Apr 18, 2021 | Team Udayavani |

ಉತ್ತರಾಖಂಡ ; ಉತ್ತರಾಖಂಡದ ನವ ಜೋಡಿಯು ವಿಶೇಷ ರೀತಿಯ  ಮದುವೆ ಆಮಂತ್ರಣ ಪತ್ರಿಕೆಯನ್ನು ನೀಡುವ ಮೂಲಕ ಗಮನ ಸೆಳೆದಿದೆ. ಆಮಂತ್ರಣ ಪತ್ರಿಕೆಯಲ್ಲಿ ಆರ್’ಟಿ-ಪಿಸಿಆರ್ ನೆಗೆಟಿವ್ ವರದಿಯೊಂದಿಗೆ ಮದುವೆಗೆ ಬರುವಂತೆ ವಿನಂತಿ ಮಾಡಿಕೊಂಡಿದ್ದಾರೆ.

Advertisement

ವಿಜಯ್ ಸಿಂಗ್ ಮತ್ತು ವೈಶಾಲಿ ಎಂಬುವವರು ಮದುವೆಯಾಗುತ್ತಿದ್ದು, ಈ ನವಜೋಡಿ ಏಪ್ರಿಲ್ 24 ರಂದು ಜೈಪುರದಲ್ಲಿ ಹಸೆಮಣೆ ಏರುತ್ತಿದ್ದಾರೆ. ತಮ್ಮ ಮದುವೆ ಆಮಂತ್ರಣ ಪತ್ರದಲ್ಲಿ, ಮದುವೆಗೆ ಆಗಮಿಸುವವರಿಗೆ ಕೋವಿಡ್ ನೆಗೆಟಿವ್​ ವರದಿ ತರುವಂತೆ ವಿನಂತಿಸಿದ್ದಾರೆ. ಇನ್ನು ಮದುವೆಗೆ ಬರುವ ಎಲ್ಲಾ ಅತಿಥಿಗಳು ಟೆಸ್ಟ್​ ರಿಪೋರ್ಟ್​ ತರುವಂತೆ ತಿಳಿಸಿದ್ದಾರೆ.

ಮದುವೆ ಆಮಂತ್ರಣ ಪತ್ರವನ್ನು ವಿತರಿಸುವ ಮೊದಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಭೆ ಸಮಾರಂಭ, ವಿವಾಹ ಕಾರ್ಯಕ್ರಮಗಳ ಕುರಿತು ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ ನಮಗೆ ತಿಳಿದಿತ್ತು. ಎಲ್ಲಾ ಮಾರ್ಗಸೂಚಿಗಳನ್ನು ಮದುವೆ ಸಮಾರಂಭದಲ್ಲಿ ನಾವು ಅನುಸರಿಸುತ್ತೇವೆ ಎಂದು ವರ ವಿಜಯ್ ಹೇಳಿದ್ದಾರೆ.

ಮತ್ತೊಷ್ಟು ಮಾಹಿತಿ ನೀಡಿರುವ ಇವರು ಮದುವೆಗೆ 300-400 ಜನರನ್ನು ಆಹ್ವಾನಿಸಲು ನಿರ್ಧರಿಸಲಾಗಿದ್ದು, ಆದ್ರೆ ಕೋವಿಡ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 30-40 ಜನರಿಗೆ ಮಾತ್ರ ಆಮಂತ್ರಣ ಪತ್ರಿಕೆ ನೀಡಲಾಗುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next