ಉತ್ತರಾಖಂಡ್: ಬಿಜೆಪಿ ಮುಖಂಡರೊಬ್ಬರ ಪುತ್ರಿಯ ವಿವಾಹ ಮುಸ್ಲಿಂ ಯುವಕನೊಂದಿಗೆ ಆಗಲಿದೆ ಎ ನ್ನುವ ಆಮಂತ್ರಣ ಪತ್ರಿಕೆ ವೈರಲ್ ಆಗಿ ಭಾರೀ ವಿವಾದ ಆದ ಬೆನ್ನಲ್ಲೇ ಇದೀಗ ಬಿಜೆಪಿ ನಾಯಕ ತಿರುಗಿ ಬಿದ್ದಿದ್ದಾರೆ.
ಉತ್ತರಾಖಂಡ್ ನ ಪೌರಿ ಪ್ರದೇಶದ ಬಿಜೆಪಿ ಮುಖಂಡ ಯಶ್ ಪಾಲ್ ಬೇನಾಮ್ ಪುತ್ರಿ ಮುಸ್ಲಿಂ ಯುವಕನ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದರು. ಈ ವಿವಾಹ ಕಾರ್ಯಕ್ರಮ ಇದೇ ತಿಂಗಳ 28 ರಂದು ನಡೆಯಲಿತ್ತು. ಇದೀಗ ಸ್ವತಃ ಬಿಜೆಪಿ ಮುಖಂಡ ಯಶ್ ಪಾಲ್ ಬೇನಾಮ್ ಹೊಸ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಮುಖಂಡರೊಬ್ಬರ ಮಗಳು ಮುಸ್ಲಿಂ ಯುವಕನನ್ನು ಮದುವೆಯಾಗಲಿದ್ದಾರೆ. ಮಗಳ ಖುಷಿಗಾಗಿ ತಾನು ಈ ಮದುವೆಯನ್ನು ಮಾಡಲಿದ್ದೇನೆ ಎಂದು ಯಶ್ ಪಾಲ್ ಬೇನಾಮ್ ಹೇಳಿ, ಈ ಸಂಬಂಧ ಆಮಂತ್ರಣ ಪತ್ರಿಕೆಯನ್ನು ಪ್ರಿಂಟ್ ಮಾಡಿದ್ದರು. ಈ ಆಮಂತ್ರಣ ಪತ್ರಿಕೆ ನೋಡಿದ ಹಿಂದೂಪರ ಸಂಘಟನೆ ಸೇರಿದಂತೆ ಹಲವು ಮಂದಿ ಟೀಕೆ ಮಾಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗೆ ಒಳಗಾದ ಬಿಜೆಪಿ ಮುಖಂಡನ ವಿರುದ್ಧ ಕೆಲ ಸಂಘಟನೆಗಳು ಶುಕ್ರವಾರ ಝಂಡಾ ಚೌಕ್‌ನಲ್ಲಿ ಬಿಜೆಪಿ ನಾಯಕ ಬೇನಾಮ್ ಅವರ ಮಗಳು ಮುಸ್ಲಿಂ ಯುವಕನನ್ನು ಮದುವೆಯಾಗಿರುವುದನ್ನು ವಿರೋಧಿಸಿ ಅವರ ಪ್ರತಿಕೃತಿಯನ್ನು ಸುಟ್ಟುಹಾಕಿ ಪ್ರತಿಭಟನೆ ನಡೆಸಿದ್ದರು.
ವಿರೋಧದ ಪ್ರತಿಭಟನೆಯನ್ನರಿತ ಬಿಜೆಪಿ ನಾಯಕ ಬೇನಾಮ್ ಪೌರಿ ಪ್ರದೇಶದಲ್ಲಿ ಮೇ.28 ರಂದು ನಡೆಯಲಿದ್ದ ಮದುವೆಯನ್ನು ಮುಂದೂಡಲಾಗಿದೆ ಎಂದು ಹೇಳಿದ್ದಾರೆ.
ನಾನೀಗ ಜನರ ಧ್ವನಿಯನ್ನು ಕೇಳಬೇಕಾಗಿದೆ ಎಂದು ಅವರು ಹೇಳಿದರು.